ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತದ ತುದಿಯಲ್ಲಿ ಕುಮಾರ ಲಿಂಗಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಸಂಪ್ರದಾಯದಂತೆ ಪೂಜೆ ನೆರವೇರಿಸಿದರು.ದೇಗುಲದ ಆಡಳಿತ ಮಂಡಳಿ ಸೇರಿದಂತೆ ನೂರಾರು ಭಕ್ತರು ಕುಕ್ಕೆಯಿಂದ 18 ಕಿ.ಮೀ. ದೂರವಿರುವ ಎತ್ತರದ ಪರ್ವತ ಏರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕುಕ್ಕೆ ಸುಬ್ರಹ್ಮಣ್ಯವು ನಾಗಾರಾಧನೆಯ ಪ್ರಮುಖ ಕ್ಷೇತ್ರ ಎನಿಸಿಕೊಂಡಿದೆ, ಜೊತೆಗೆ ಕುಕ್ಕೆಯ ಹಿಂದೆ ಇರುವ ಕುಮಾರಪರ್ವತವೂ ಪ್ರವಾಸಿ ತಾಣವಾಗಿದೆ. ಚಾರಣ ಪ್ರದೇಶವಾಗಿಯೂ ಗಮನ ಸೆಳೆದಿದೆ. ಕೇವಲ ಚಾರಣಕ್ಕೆ ಮಾತ್ರವಲ್ಲದೆ ಪೌರಾಣಿಕ ಹಾಗೂ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿದೆ. ಕುಕ್ಕೆ ದೇವಸ್ಥಾನಕ್ಕೆ ಮತ್ತು ಕುಮಾರಪರ್ವತಕ್ಕೆ ಪವಿತ್ರ ಸಂಬಂಧವಿದ್ದು, ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ನಡೆದ ಕುಮಾರಯಾತ್ರೆಯ ಕೊನೆಯಲ್ಲಿ ಅರ್ಚಕರು ಕುಮಾರಲಿಂಗದ ಮೂಲಕ ಕುಮಾರಪಾದಗಳಿಗೆ ಜಲಾಭಿಷೇಕ, ಸೀಯಾಳ ಅಭಿಷೇಕ ಮಾಡಿದರು.
ಬೆಳಗ್ಗೆ 5.30 ರ ಸಮಯದಲ್ಲಿ ದೇವಳದ ಮುಂಭಾಗದಿಂದ ಕುಮಾರ ಪರ್ವತ ಚಾರಣ ಆರಂಭಿಸಿ 18 ಕಿಮೀ ಯಾತ್ರೆಯ ಮೂಲಕ ಕುಮಾರ ಪರ್ವತ ತಲುಪಿ ಮಧ್ಯಾಹ್ನ ಪೂಜೆಯನ್ನು ನೆರೇವೇರಿಸಲಾಯಿತು.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…