ಪುಣ್ಯಕ್ಷೇತ್ರ ದರ್ಶನಕ್ಕೆ ಬಂದಿದ್ದ ಯುವಕರ ತಂಡದಲ್ಲಿದ್ದ ಯುವಕನೊಬ್ಬ ಕುಮಾರಧಾರಾ ನದಿ ನೀರಿನಲ್ಲಿ ಸ್ನಾನಕ್ಕೆ ಇಳಿದು ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ. ನಾಪತ್ತೆಯಾದ ಯುವಕ ಶಿವು ಎಂದು ಗುರುತಿಸಲಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪುಣ್ಯ ಕ್ಷೇತ್ರ ದರ್ಶನಕ್ಕೆ ಬಂದಿದ್ದ ತಂಡದಲ್ಲಿದ್ದ ಬೆಂಗಳೂರು ದೀಪಾಂಜಲಿ ನಗರದಲ್ಲಿ ವಾಸಿಸುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿ ಶಿವು(25) ಎಂಬ ಯುವಕ ಕುಮಾರಧಾರಾ ನದಿಗೆ ಸ್ನಾನಕ್ಕೆ ಇಳಿದಿದ್ದ ವೇಳೆ ನಾಪತ್ತೆಯಾಗಿದ್ದಾರೆ ಎಂದು ಜೊತೆಗಾರರು ತಿಳಿಸಿದ್ದಾರೆ. ಮೂಲತ: ಮಂಡ್ಯದ ನಿವಾಸಿಯಾದ ಶಿವು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ತೆರಳುವ ಸಂದರ್ಭ ಕುಮಾರಧಾರಾ ನದಿಗೆ ತೆರಳಿದ್ದರು. ಈ ಸಂದರ್ಭ ಶಿವು ಅವರು ಸ್ನಾನ ಮಾಡಲು ನದಿಗೆ ಹಾರಿದ್ದರು. ಈಜು ಬರುತ್ತಿದ್ದರೂ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel