ಕುಕ್ಕೆ ಸುಬ್ರಹ್ಮಣ್ಯ | ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆ ಇಳಿದ ಯುವಕ ನಾಪತ್ತೆ |

August 21, 2022
6:13 PM

ಪುಣ್ಯಕ್ಷೇತ್ರ ದರ್ಶನಕ್ಕೆ ಬಂದಿದ್ದ ಯುವಕರ ತಂಡದಲ್ಲಿದ್ದ ಯುವಕನೊಬ್ಬ ಕುಮಾರಧಾರಾ ನದಿ ನೀರಿನಲ್ಲಿ ಸ್ನಾನಕ್ಕೆ ಇಳಿದು ನಾಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ. ನಾಪತ್ತೆಯಾದ ಯುವಕ ಶಿವು ಎಂದು ಗುರುತಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಪುಣ್ಯ ಕ್ಷೇತ್ರ ದರ್ಶನಕ್ಕೆ ಬಂದಿದ್ದ ತಂಡದಲ್ಲಿದ್ದ ಬೆಂಗಳೂರು ದೀಪಾಂಜಲಿ ನಗರದಲ್ಲಿ ವಾಸಿಸುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿ ಶಿವು(25) ಎಂಬ ಯುವಕ ಕುಮಾರಧಾರಾ ನದಿಗೆ ಸ್ನಾನಕ್ಕೆ ಇಳಿದಿದ್ದ ವೇಳೆ ನಾಪತ್ತೆಯಾಗಿದ್ದಾರೆ ಎಂದು ಜೊತೆಗಾರರು ತಿಳಿಸಿದ್ದಾರೆ. ಮೂಲತ: ಮಂಡ್ಯದ ನಿವಾಸಿಯಾದ ಶಿವು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ದೇವರ ದರ್ಶನ ಮುಗಿಸಿ ಬೆಂಗಳೂರಿಗೆ ತೆರಳುವ ಸಂದರ್ಭ ಕುಮಾರಧಾರಾ ನದಿಗೆ ತೆರಳಿದ್ದರು. ಈ ಸಂದರ್ಭ ಶಿವು ಅವರು  ಸ್ನಾನ ಮಾಡಲು ನದಿಗೆ ಹಾರಿದ್ದರು. ಈಜು ಬರುತ್ತಿದ್ದರೂ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ ಎಂದು ಸ್ಥಳೀಯರು ಹೇಳಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸುಬ್ರಹ್ಮಣ್ಯ ಪೊಲೀಸರು ಆಗಮಿಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ
August 10, 2026
6:20 AM
by: ದ ರೂರಲ್ ಮಿರರ್.ಕಾಂ
ಬರದತ್ತ ಇಂಗ್ಲೆಂಡ್‌ – ಆಹಾರ ಕೊರತೆ, ಕಾಡ್ಗಿಚ್ಚಿನ ಎಚ್ಚರಿಕೆ – ಕೃಷಿಗೆ ಭಾರಿ ಹೊಡೆತ – ರೈತರಿಗೆ ₹4,400 ಕೋಟಿ ನಷ್ಟದ ಅಂದಾಜು
August 10, 2026
6:05 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09.08.2026 | ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ ಕ್ಷೀಣ; ಆಗಸ್ಟ್‌ 11ರಿಂದ ಮಲೆನಾಡಿನಲ್ಲೂ ಮಳೆ ಇಳಿಕೆ
August 9, 2026
12:36 PM
by: ಸಾಯಿಶೇಖರ್ ಕರಿಕಳ
ಕೃಷಿ ಉತ್ಪನ್ನಕ್ಕೆ ಮೌಲ್ಯವರ್ಧನೆ – ಒಡಿಶಾದಲ್ಲಿ ₹43,437 ಕೋಟಿ ಹೂಡಿಕೆ ಪ್ರಸ್ತಾವನೆ
August 9, 2026
6:28 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror