3 ತಿಂಗಳ ಹಿಂದೆ ಉದ್ಘಾಟನೆಗೊಂಡಿದ್ದ ಅಂಡರ್ ಪಾಸ್ ಕುಸಿದು ಬಿದ್ದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಅಂಡರ್ ಪಾಸ್ ಕಳಪೆ ಕಾಮಗಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಂದಲಹಳ್ಳಿ ಬಳಿಯ ಹೂಡಿ ಮುಖ್ಯ ರಸ್ತೆ ಹಾಗೂ ಐಟಿಪಿಎಲ್ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಕುಂದನಹಳ್ಳಿ ಅಂಡರ್‌ಪಾಸ್ ಮೇಲ್ಭಾಗದ ರಸ್ತೆ ಕುಸಿದಿದೆ. ಹೀಗಾಗಿ ಸಾರ್ವಜನಿಕರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 40% ಕಮಿಷನ್ ದಂಧೆಯ ಎಫೆಕ್ಟ್ ಎಂದು ಅಂಡರ್ ಪಾಸ್ ಕುಸಿತದ ಬಗ್ಗೆ ಸಾರ್ವಜನಿಕರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel