‘ಬಾರಿಸು ಕನ್ನಡ ಡಿಂಡಿಮ’ ಕವಿಯ ಹುಟ್ಟು ಹಬ್ಬದ ಸಂಭ್ರಮ

December 29, 2020
11:33 AM
ಸೂರ್ಯಾಸ್ತ, ಸೂರ್ಯೋದಯದ ನಿತ್ಯ ಬೆಡಗು, ಹಕ್ಕಿಗಳ ಇಂಚರ , ಮರದೆಲೆಯ ಮೇಲೆ ನಿಂತಿರುವ ನೀರ ಹನಿ, ಅದರಲ್ಲಿ ಪ್ರತಿಫಲಿಸುವ ಸೂರ್ಯಕಿರಣ, ಕುಣಿಯುವ ನವಿಲು , ಮರದಿಂದ ಮರಕೆ ಹೋಗುವ ಅಳಿಲು ಕೆಲವರ ಮೇಲೆ ಪ್ರಭಾವ ಬೀರುತ್ತವೆ. ಪ್ರಕೃತಿಯ ದೃಶ್ಯಗಳಿಂದ ಪ್ರೇರೇಪಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡ ಜನಮುಖಿ ಕವಿಗಳಲ್ಲಿ ಪ್ರಮುಖರಾದವರು ಕುವೆಂಪುರವರು. ಕುಪ್ಪಳ್ಳಿ , ಕವಿಶೈಲ ಪರಿಸರದ ಅಪಾರ ಪ್ರಭಾವವನ್ನು ಕವಿಯ ಪ್ರತಿಯೊಂದು ರಚನೆಯಲ್ಲೂ ಪ್ರತಿಫಲಿಸುತ್ತದೆ.

Advertisement
Advertisement
Advertisement
Advertisement
Advertisement

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಹೆಸರಿನಿಂದ ಪ್ರಥಮ ಅಕ್ಷರಗಳನ್ನು ಆರಿಸಿಕೊಂಡು ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿ ಯುಗದ ಕವಿ ಜಗದ ಕವಿಯೆಂದು ಬೇಂದ್ರೆಯವರಿಂದಲೇ ಬಿರುದಾಂಕಿತರಾದವರು. ತಮ್ಮ ಬಾಲ್ಯವನ್ನು ಕುಪ್ಪಳ್ಳಿಯಲ್ಲಿ ಹಾಗೂ ಮುಂದಿನ ದಿನಗಳನ್ನು ಮೈಸೂರಿನ ಉದಯರವಿಯಲ್ಲೇ ಕಳೆದರು. ಅವರು 29 ಡಿಸೆಂಬರ್ 1904 ರಲ್ಲಿ ಜನಿಸಿದರು. ಇಂದು ಕವಿಯ 116 ನೇ ಹುಟ್ಟು ಹಬ್ಬ.

Advertisement

ಕುವೆಂಪು ಎಂಬ ಹೆಸರಿನೊಂದಿಗೆ ತಟ್ಟನೆ ನೆನಪಾಗುವುದು’ ಓ ನನ್ನ ಚೇತನ ‘ಎಂಬ ವಿಶ್ವ ಮಾನವ ಸಂದೇಶ ಸಾರುವ ಗೀತೆ. ಪ್ರೌಢಶಾಲಾ ವಿದ್ಯಾಭ್ಯಸದ ಆರಂಭದ ದಿನಗಳಲ್ಲಿ ನಮ್ಮ ಕನ್ನಡ ಟೀಚರ್ ಬಿ .ಎನ್. ಕಲಾವತಿಯವರು ಸೂಕ್ತ ರಾಗ ಅಳವಡಿಸಿ ಹಾಡುತ್ತಿದ್ದುದು ಇನ್ನೂ ಕಿವಿಯಲ್ಲಿ ರಿಂಗಿಣಿಸುತ್ತಿದೆ. ಕಣ್ಣು ಮುಚ್ಚಿ ಓ ನನ್ನ ಚೇತನ ಗೀತೆಯನ್ನು ಅವರು ಹಾಡುತ್ತಿದ್ದರೆ ಒಂದರೆಗಳಿಗೆ ಅಕ್ಕಪಕ್ಕದ ತರಗತಿಗಳು ಸ್ಥಬ್ದವಾಗುತ್ತಿತ್ತು.

ಭಾವಗೀತೆಗಳೇ ಆಗಿರಲಿ, ದೇಶಭಕ್ತಿ ಗೀತೆಗಳೇ ಆಗಿರಲಿ ಮನಸಿಗೆ ಮುಟ್ಟುವಂತೆ ಬರೆಯುತ್ತಿದ್ದವರು ಕುವೆಂಪು ಅವರು. ನಮ್ಮ ನೆಚ್ಚಿನ ಕವಿ ‘ರಾಷ್ಟ್ರ ಕವಿ’ಯೆಂಬ ಹೆಮ್ಮೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿಗೈದವರು ಕುವೆಂಪುರವರು. ಅವರ ಕವಿತೆಗಳು, ನಾಟಕಗಳು , ಕಾದಂಬರಿಗಳು ಮುಖ್ಯವಾಗಿ ಪ್ರಕೃತಿ, ದೇಶಪ್ರೇಮ, ಪ್ರೀತಿ ಆಧ್ಯಾತ್ಮ, ವೈಚಾರಿಕತೆಯ ವಿಷಯಗಳ ಆಧಾರಿತವಾಗಿರುತ್ತಿದ್ದುವು. ಕೆಲವೊಂದು ಕವಿತೆಗಳಂತು ಮನಸಿನಲ್ಲಿ ಕ್ರಾಂತಿಯ ಕಿಚ್ಚು ಹಚ್ಚುವಂತಿವೆ. ಕನ್ನಡ ನಾಡು ನುಡಿಯ ಒಳಿತಿಗಾಗಿ ಬರೆದ ಹಾಡುಗಳು ಕ್ರಾಂತಿಕಾರಿ ಯಾಗಿರುತ್ತಿತ್ತು. ಜನರ ಭಾವನೆಗಳನ್ನು ಬಡಿದೆಬ್ಬಿಸುವಂತಿರುತ್ತವೆ.
ಅವು ಅಂದಿಗೂ ಇಂದಿಗೂ ಎಂದಿಗೂ ಪ್ರಸ್ತುತ.

Advertisement

“ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ ||
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ ಹೇ! ಭವವಿದೂರ……………
ಎಂದು ಗಾಯಕ ಸಿ ಅಶ್ವಥ್ ಹಾಡುತ್ತಿದ್ದರೆ ಮೈ ರೋಮಾಂಚನವಾಗದಿರದು.

ಅವರೊಬ್ಬ ಕವಿ, ಕಾದಂಬರಿಗಾರ, ಚಿಂತಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ, ವಿಮರ್ಶಕ , ಹೋರಾಟಗಾರ ಎಲ್ಲವೂ.
ಸ್ವಾವಲಂಬನೆ , ಸ್ವಾತಂತ್ರ್ಯ , ಇಚ್ಛಾಶಕ್ತಿ ಸಾಧಿಸದ ಹೊರತು ಅಭಿವೃದ್ಧಿ ಅಸಾಧ್ಯವೆಂಬುದನ್ನು ಬಲವಾಗಿ ಪ್ರತಿಪಾದಿಸಿದರು ಕುವೆಂಪುರವರು.

Advertisement

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಮಾರ್ಚ್ ಆರಂಭದಲ್ಲೇ ರಾಜ್ಯದ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಳ
March 4, 2025
10:11 PM
by: The Rural Mirror ಸುದ್ದಿಜಾಲ
ಅಡಿಕೆ ಎಲೆಚುಕ್ಕಿ ರೋಗ | ಸರ್ಕಾರದಿಂದ ಪ್ರತ್ಯೇಕ ಪರಿಹಾರ ಇಲ್ಲ | ಡಿಸೀಸ್‌ ಫಾರ್ಕಾಸ್ಟ್‌ ಮಾಡಲು ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಬೊಟ್ಯಾಡಿ ಒತ್ತಾಯ |
March 4, 2025
3:30 PM
by: ದ ರೂರಲ್ ಮಿರರ್.ಕಾಂ
ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ
March 4, 2025
2:33 PM
by: The Rural Mirror ಸುದ್ದಿಜಾಲ
ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ
March 3, 2025
7:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror