Advertisement
The Rural Mirror ವಾರದ ವಿಶೇಷ

ಗ್ರಾಮೀಣ ಆರ್ಥಿಕತೆಯ ಬದಲಾವಣೆಯ ಹರಿಕಾರರಾಗುತ್ತಾರೆ ಲಕ್​​ಪತಿ ದೀದಿಗಳು…! | ಏನಿದು ಲಕ್​​ಪತಿ ದೀದಿ ?

Share

ನೂತನ ಸರ್ಕಾರ ರಚನೆಯಾದ 100 ದಿನಗಳಲ್ಲಿ 11 ಲಕ್ಷ ಮಹಿಳೆಯರು ಲಕ್‌ಪತಿ  ದೀದಿಗಳಾಗಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ. ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನು ಚೌಹಾಣ್‌ ಅವರು ನೀಡಿದ್ದರು. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಜಲಗಾಂವ್‌ಗೆ ಭೇಟಿ ನೀಡಿ, 11 ಲಕ್ಷ ಲಕ್‌ ಪತಿ ದೀದಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು ಮತ್ತು ಕುಟುಂಬಗಳನ್ನು ಸಬಲೀಕರಣ, ಗ್ರಾಮೀಣ ಆರ್ಥಿಕತೆಯ ಬಗ್ಗೆ ಈ ಯೋಜನೆಯ ಪ್ರಭಾವವನ್ನು  ಹೇಳಿದರು. ಅತ್ಯಂತ ಮಹತ್ವವಾದ ಈ ಯೋಜನೆ ಗ್ರಾಮೀಣ ಆರ್ಥಿಕತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಿದೆ.…..ಮುಂದೆ ಓದಿ….

Advertisement
Advertisement
Advertisement

ಏನಿದು ಲಕ್​ಪತಿ ದೀದಿ ಯೋಜನೆ..? : ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಕೇಂದ್ರ ಸರ್ಕಾರದ ಯೋಜನೆ ಲಕ್​ಪತಿ ದೀದಿ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಮುಂದೆ ತರುವುದು ಈ ಯೋಜನೆಯ ಉದ್ದೇಶ. ಮಹಿಳಾ ಸ್ವಯಂ ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕದಲ್ಲಿರುವ 9 ಕೋಟಿ ಮಹಿಳೆಯರಿದ್ದಾರೆ. ಸ್ವಸಹಾಯ ಗುಂಪುಗಳ ಸಹಾಯ ಪಡೆದು ಇವರೆಲ್ಲರೂ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ತಮ್ಮದೇ ಸಣ್ಣ ಮಟ್ಟಿನ ಉದ್ಯಮ ನಡೆಸುತ್ತಾರೆ. ಈ ಸ್ವಸಹಾಯ ಗುಂಪುಗಳಿಗೆ ಸಂಬಂಧಪಟ್ಟಂತೆ ಮತ್ತು ಇವುಗಳ ಮೂಲಕ ಮಹಿಳೆಯರ ಆದಾಯ ಹೆಚ್ಚಿಸಲು ಲಕ್ ಪತಿ ದೀದಿ ಯೋಜನೆ ಜಾರಿಗೆ ತರಲಾಗಿದೆ. ಈ ಮೂಲಕ ಮಹಿಳೆಯರನ್ನು  ಸ್ವಾವಲಂಬಿಗಳಾಗಿಸುವ ಗುರಿ ಇದಾಗಿದೆ.

Advertisement

ಈ ಅಭಿಯಾನದ ಮೂಲಕ, ಯೋಜನೆಯ ಮೂಲಕ ಮಹಿಳೆಯರನ್ನು ಬಲಪಡಿಸಲು ಸಮಗ್ರ ಆರ್ಥಿಕ ಸಾಕ್ಷರತಾ ಕಾರ್ಯಾಗಾರ ನಡೆಸಲಾಗುತ್ತದೆ. ಸ್ವಸಹಾಯ ಗುಂಪುಗಳ ನೆರವಿನಿಂದ ಮಹಿಳೆಯರು ಸಣ್ಣ ಪುಟ್ಟ ಕೌಶಲ್ಯಾಭಿವೃದ್ಧಿ ತರಬೇತಿ ಪಡೆಯುತ್ತಾರೆ. ಅಂತಹ ತಾಂತ್ರಿಕ ಕೆಲಸಗಳಲ್ಲಿ ತೊಡಗಿಸಿಕೊಂಡು ತಮ್ಮ ಸಂಪಾದನೆಗೆ ದಾರಿ ಕಂಡುಕೊಳ್ಳುತ್ತಾರೆ. ಕೇವಲ ಕೌಶಲ್ಯ ತರಬೇತಿ ಮಾತ್ರವಲ್ಲ, ಸಣ್ಣ ಉದ್ದಿಮೆಯಲ್ಲಿ ತೊಡಗಿಸಿಕೊಳ್ಳಲು ಆರ್ಥಿಕ ತಿಳುವಳಿಕೆ ನೀಡಲಾಗುತ್ತದೆ. ಆದರೆ ಈ ಯೋಜನೆಯ ಫಲಾನುಭವಿಗಳಾಗಲು ಬಯಸುವ ಮಹಿಳೆಯರು ಯಾವುದಾದರೂ ಸ್ವ ಸಹಾಯ ಗುಂಪಿನ ಭಾಗವಾಗಿರಬೇಕು.  ಇದರಲ್ಲಿ  ಬಜೆಟ್, ಉಳಿತಾಯ, ಹೂಡಿಕೆಯಂತಹ ವಿಷಯಗಳ ಬಗ್ಗೆ  ಮಾಹಿತಿ ನೀಡಲಾಗುತ್ತದೆ. ಮಹಿಳೆಯರಿಗೆ ಹಣ ಉಳಿತಾಯಕ್ಕೆ ಪ್ರೋತ್ಸಾಹ, ಮಹಿಳೆಯರಿಗೆ ಕಿರುಸಾಲ ಸೌಲಭ್ಯ, ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿಗೆ , ಉದ್ಯಮಿಯಾಗಲು ಬಯಸುವ ಮಹಿಳೆಯರಿಗೆ ಸೂಕ್ತ ಮಾರ್ಗದರ್ಶನ ,  ಮಹಿಳೆಯರಿಗೆ ಆರ್ಥಿಕ ಭದ್ರತೆ ,  ವಿಮಾ ಸೌಲಭ್ಯ , ಡಿಜಿಟಲ್ ಬ್ಯಾಂಕಿಂಗ್ ಸರ್ವೀಸ್, ಮೊಬೈಲ್ ವ್ಯಾಲೆಟ್ಸ್​  ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಒಟ್ಟಿನಲ್ಲಿ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸಲಾಗುತ್ತದೆ. ಮಹಿಳೆ ಸ್ವಾವಲಂಬಿಯಾಗುವುದರ ಜೊತೆಗೆ ಆ ಮೂಲಕವೇ ಗ್ರಾಮೀಣ ಆರ್ಥಿಕತೆಯೂ ಬೆಳೆಯುತ್ತದೆ ಎನ್ನುವುದು ಯೋಜನೆಯ ಹಿಂದಿನ ಉದ್ದೇಶವಾಗಿದೆ. ದೇಶದಲ್ಲಿ 3 ಕೋಟಿ ದೀದಿಗಳನ್ನು ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಯೋಜನೆ ಬಗ್ಗೆ ಮಾಹಿತಿ ಪಡೆಯಲು ಅಂಗನವಾಡಿ ಕೇಂದ್ರಗಳಲ್ಲಿ ವಿಚಾರಿಸಬಹುದಾಗಿದೆ.

Advertisement

ಇಂತಹ ಯೋಜನೆಯ ಪ್ರಮಾಣಪತ್ರವು ಮಹಾರಾಷ್ಟ್ರದ ಜಲಗಾಂವ್‌ ನಲ್ಲಿ ವಿತರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರೂ ಭಾಗಿಯಾಗಿದ್ದರು. ಈ ಸಂದರ್ಭ ಅವರು 11 ಲಕ್ಷ ಹೊಸ ಲಕ್‌ ಪತಿ ದೀದಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು ಮತ್ತು ಮಹಿಳಾ ಉದ್ಯಮಿಗಳಿಗೆ ನಿಧಿಯನ್ನು ಬಿಡುಗಡೆ ಮಾಡಿದರು.

Advertisement

ಈ ಸಂದರ್ಭ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಲಕ್ ಪತಿ ದೀದಿ’ ಅಭಿಯಾನವು ಮಹಿಳೆಯರ ಆದಾಯವನ್ನು ಹೆಚ್ಚಿಸುವ ಉದ್ದೇಶವೊಂದೇ ಅಲ್ಲ, ಇದು ಸಂಪೂರ್ಣ ಕುಟುಂಬಗಳು ಮತ್ತು ಭವಿಷ್ಯದ ಪೀಳಿಗೆಯನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು  ಹೇಳಿದರು. ಈ ಅಭಿಯಾನವು ಗ್ರಾಮೀಣ ಆರ್ಥಿಕತೆಯನ್ನು ಪರಿವರ್ತಿಸುತ್ತಿದೆ, ಅವರ ಕುಟುಂಬಗಳಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಗೌರವವನ್ನು ಹೆಚ್ಚಿಸುತ್ತಿದೆ ಎಂದು ಮೋದಿ ಹೇಳಿದರು. ಮಹಿಳೆಯ ಆದಾಯ ಹೆಚ್ಚಾದಾಗ ಅದು ಕುಟುಂಬದ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸುತ್ತದೆ, ಆ ಮೂಲಕ ಕುಟುಂಬದ ಭವಿಷ್ಯವನ್ನು ಬದಲಾಯಿಸುತ್ತದೆ ಎಂದರು.‌

Prime Minister Narendra Modi visited Jalgaon, Maharashtra on Sunday to attend the Lakhpati Didi Conference. During the visit, he distributed certificates to 11 lakh new Lakhpati Didis and allocated additional funds for women entrepreneurs.

Advertisement

The Lakhpati Didi scheme aims to support women entrepreneurs financially, enabling them to attain economic independence. ‘Lakhpati Didis’ are women who earn ₹100,000 or more annually.

Prime Minister Modi also interacted with beneficiaries of the scheme from across the country. He emphasized that the ‘Lakhpati Didi’ campaign is more than just an initiative to increase the income of women, it aims to empower entire families and future generations.

Advertisement

PMModi noted that the campaign is transforming the rural economy, enhancing the rights and honor of women within their families. He highlighted that when a woman’s income increases, it boosts the family’s financial resources, thereby changing the family’s fortune.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ

ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…

1 hour ago

ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |

ಕರ್ನಾಟಕದಲ್ಲಿ ಅಡಿಕೆಯು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದು ಕೇಂದ್ರದ ಗಮನದಲ್ಲಿದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ…

2 hours ago

ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ

ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…

3 days ago

ಮುಂಜಾನೆ ಏಳಬೇಕು, ಬೇಗನೇ ಏಳಬೇಕು

ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…

3 days ago

ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |

ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…

4 days ago

ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ

ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…

4 days ago