ಕಟ್ಟಡ ತ್ಯಾಜ್ಯದಿಂದ ತುಂಬಿದ ಕೆರೆಗಳು | ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ಅಗತ್ಯ

July 24, 2024
11:36 PM

ರಾಜ್ಯದ ಬಹಳಷ್ಟು ಕೆರೆಗಳು ಮುಖ್ಯವಾಗಿ ನಗರ ಕೆರೆಗಳು  ಕಟ್ಟಡ ತ್ಯಾಜ್ಯಗಳಿಂದ ನಲುಗಿವೆ. ನಗರಗಳಲ್ಲಿ ಖಾಸಗಿ ಜಾಗಗಳಲ್ಲಿ ಈ ತ್ಯಾಜ್ಯದ ಸುರಿಯಲು ಅವಕಾಶ ಕೊಡದಿರುವುದರಿಂದ ಜನ ಓಡಾಟ ಕಡಿಮೆ ಇರುವ ರಸ್ತೆಗಳು, ಇಂತಹ ಕೆರೆಗಳಂತ ಸಾರ್ವಜನಿಕ ಸ್ಥಳಗಳಲ್ಲಿ ಇವುಗಳನ್ನು ಸುರಿಯುತ್ತಾರೆ. ಬಹಳಷ್ಟು ಕಡೆ Wetland ತಾಣಗಳಾದ ಕೆರೆಗಳನ್ನು Waste Land ಎಂದು ಬೇಕಾಬಿಟ್ಡಿ ಬಳಸುವ ಕೆಟ್ಟ ಚಾಳಿ‌ ಇದೆ.

Advertisement

ರಸ್ತೆ ಬದಿಗಳಲ್ಲಿ ಕೇವಲ ತ್ಯಾಜ್ಯದ ಸಮಸ್ಯೆ‌ ಎದುರಾದರೆ, ಕೆರೆಗಳಲ್ಲಿ ಇತ್ತೀಚಿನ ಅತ್ಯಂತ ಕಡಿಮೆಯಾಗಿರುವ ಅಮೂಲ್ಯ, ಅಪರೂಪದ ಕೆರೆಗಳು ಮುಚ್ಚಿ ಹೋಗುವ ಅಪಾಯ ಎದುರಾಗುತ್ತದೆ. ಅಲ್ಲದೆ ತ್ಯಾಜ್ಯಗಳನ್ನು ತುಂಬುವುದರಿಂದ ಅವುಗಳ ಒತ್ತುವರಿಗೆ ಸುಲಭವಾಗಿ ಅವಕಾಶ ಸಿಗುತ್ತದೆ. Infact ಕೆಲವು ಒತ್ತುವರಿದಾರರು‌, ಒತ್ತುವರಿ ಮಾಡುವ ಉದ್ದೇಶದಿಂದಲೇ ಈ ಕಟ್ಟಡ ತ್ಯಾಜ್ಯಗಳನ್ನು ಕೆರೆಗಳಿಗೆ ಸುರಿಯುತ್ತಾರೆ.

ರಾಜ್ಯದಲ್ಲಿ ಹೆಚ್ಚಿನ ಕೆರೆಗಳು‌ ಸಣ್ಣ ನೀರಾವರಿ ಇಲಾಖೆ/ ಕಂದಾಯ ಇಲಾಖೆ/ ನಗರ ಪಾಲಿಕೆ/ ಗ್ರಾಮ ಪಂಚಾಯತಿಗಳ ವ್ಯಾಪ್ತಿಗೆ ಬರುತ್ತವೆ. ಕೆಲವು ಕೆರೆಗಳು ಅವುಗಳು ಇರುವ ಜಾಗದ ಸಂಸ್ಥೆ/ಇಲಾಖೆಗಳ ವ್ಯಾಪ್ತಿಗೆ ಬರುತ್ತವೆ. (ಉದಾ: ಮೈಸೂರಿನ ಕುಕ್ಕರಹಳ್ಳಿ ಕೆರೆ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ, ಕಾರಂಜಿ ಕೆರೆ ಮೈಸೂರು ಮೃಗಾಲಯದ ವ್ಯಾಪ್ತಿಗೆ ಬರುತ್ತವೆ) ಹಾಗಾಗಿ ಸಂಬಂಧಪಟ್ಟ ಇಲಾಖೆ/ ಸಂಸ್ಥೆ/ ಪ್ರಾಧಿಕಾರಗಳು ಈ Debris ಸುರಿಯುವವರ ವಿರುದ್ದ ಕಠಿಣ ಕ್ರಮ ಕೈಗೊಂಡು ಕೆರೆಗಳನ್ನು ರಕ್ಷಿಸಬೇಕು.

ಮೂಲ- ಪರಿಸರ ಪರಿವಾರ

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |
May 13, 2025
7:20 AM
by: ದ ರೂರಲ್ ಮಿರರ್.ಕಾಂ
ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ
May 13, 2025
6:53 AM
by: ದ ರೂರಲ್ ಮಿರರ್.ಕಾಂ
ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ
May 12, 2025
10:14 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ
May 12, 2025
2:17 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group