ಪುತ್ತೂರು ‘ಗೋಪಣ್ಣ’ ಸ್ಮೃತಿ ಗೌರವಕ್ಕೆ ಲಕ್ಷ್ಮೀಶ ಅಮ್ಮಣ್ಣಾಯ ಆಯ್ಕೆ

June 28, 2024
10:46 AM
ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ್ಯಕ್ರಮವು ಜುಲೈ 3 ರಂದು ಬುಧವಾರದಂದು   ಅಪರಾಹ್ಣ ಗಂಟೆ 2ಕ್ಕೆ ಜರುಗಲಿದೆ.
ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ್ಯಕ್ರಮವು ಜುಲೈ 3 ರಂದು ಬುಧವಾರದಂದು   ಅಪರಾಹ್ಣ ಗಂಟೆ 2ಕ್ಕೆ ಜರುಗಲಿದೆ. ಪುತ್ತೂರಿನ ಬಪ್ಪಳಿಗೆ ‘ಅಗ್ರಹಾರ’ ನಿವಾಸದಲ್ಲಿ ಸಂಪನ್ನವಾಗುವ ಈ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಅವರಿಗೆ ‘ಗೋಪಣ್ಣ ಸ್ಮೃತಿ ಗೌರವ’ವನ್ನು ಪ್ರದಾನಿಸಲಾಗುವುದು. ಸಮಾರಂಭದ ಬಳಿಕ ತಾಳಮದ್ದಳೆ ನಡೆಯಲಿದೆ.
ಹಿರಿಯ ಕಲಾವಿದ ಲಕ್ಷ್ಮೀಶ ಅಮ್ಮಣ್ಣಾಯರು ಉಪ್ಪಿನಗಂಡಿ ಸನಿಹದ ಇಳಂತಿಲದವರು. ಮೂಲತಃ ಕೃಷಿಕರು. ಕಲಾ ಕುಟುಂಬ. ಇವರ ತಂದೆ ವಿಷ್ಣು ಅಮ್ಮಣ್ಣಾಯರು. ಉತ್ತಮ ಭಾಗವತ ಮತ್ತು ಆರ್ಥದಾರಿ. ತಂದೆ ಹಾಗೂ ಮುಂಡ್ರುಪ್ಪಾಡಿ ಶ್ರೀಧರ ರಾವ್ ಗುರುಗಳು. ಶ್ರೀ ಧರ್ಮಸ್ಥಳ, ಮಂಗಳಾದೇವಿ, ಬಪ್ಪನಾಡು, ಪುತ್ತೂರು, ಅರುವ, ಕರ್ನಾಟಕ, ಕುಂಬಳೆ, ಕದ್ರಿ ಮೇಳಗಳಲ್ಲಿ ಇಪ್ಪತ್ತೆರಡು ವರುಷದ ಮೇಳ ತಿರುಗಾಟ. ಬಳಿಕ ಹವ್ಯಾಸಿ ರಂಗದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ತೆಂಕಿನ ಬಹುತೇಕ ಭಾಗವತರ ಒಡನಾಟ. ರಂಗದ ಒಳ-ಹೊರಗಿನ ವಿದ್ಯಮಾನಗಳನ್ನು ಅರಿತ, ಸಂದರ್ಭ ಬಂದಾಗ ದಿಟ್ಟವಾಗಿ ಹೇಳಬಲ್ಲ ಕಲಾವಿದ. ರಂಗದ ಕಸುಬಿನಲ್ಲಿ ಇವರದು ತುಂಬಿದ ಕೊಡ.
ಲಕ್ಷ್ಮೀಶ ಅಮ್ಮಣ್ಣಾಯರಿಗೆ ಪುತ್ತೂರು ಬಪ್ಪಳಿಗೆ ಸನಿಹದ ‘ಅಗ್ರಹಾರ’ದಲ್ಲಿ ಜುಲಾಯಿ 3 ರಂದು ಗೌರವ ಪ್ರದಾನ. ಹಿಂದಿನ ವರುಷಗಳಲ್ಲಿ ಗೋಪಣ್ಣ ನೆನಪಿನ ಗೌರವವನ್ನು ದೇವದರ್ಜಿ ಅಳಕೆ ನಾರಾಯಣ ರಾವ್, ಮದ್ಲೆಗಾರ ವೆಂಕಟೇಶ ಉಳಿತ್ತಾಯರು, ಜ್ಯೋತಿಷಿ ಗಣಪತಿ ಭಟ್, ಅರ್ಥದಾರಿ ಪಾವಲಕೋಡಿ ಗಣಪತಿ ಭಟ್, ಯಕ್ಷಗುರು ಮೋಹನ ಬೈಪಾಡಿತ್ತಾಯರು, ಮದ್ಲೆಗಾರ ಪದ್ಯಾಣ ಜಯರಾಮ ಭಟ್, ಅಧ್ಯಾಪಿಕೆ  ಬಿ. ಸುಲೋಚನಾ ಹಾಗೂ ಭಾಗವತ, ಗುರು ಪಾಲೆಚ್ಚಾರು ಗೋವಿಂದ ನಾಯಕರಿಗೆ ಪ್ರದಾನ ಮಾಡಲಾಗಿತ್ತು. ಗೋಪಣ್ಣ ಅವರ ಚಿರಂಜೀವಿ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಕುಟುಂಬವು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ಚಕ್ರಗಳೇ ಬದಲಾಗುತ್ತಿವೆ | ಲಾ ನೀನಾ ಪರಿಣಾಮ ಕಡಿಮೆ, ಉಷ್ಣ ಅಲೆಗಳ ಭೀತಿ ಹೆಚ್ಚಳ
March 15, 2026
11:39 AM
by: ದ ರೂರಲ್ ಮಿರರ್.ಕಾಂ
ಹೊಸರುಚಿ | ಹಲಸಿನ ಹಣ್ಣಿನಿಂದ ಇಷ್ಟು ರುಚಿ ಸಿಗುತ್ತದಾ…? ಈ ಕಸ್ಟರ್ಡ್ ಮಿಸ್ ಮಾಡ್ಬೇಡಿ…!
March 14, 2026
8:05 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 14-03-2026 | ಇಂದು ಕರಾವಳಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ – ರಾಜ್ಯದ ಹಲವೆಡೆ ಗುಡುಗು ಮಳೆ ಮುನ್ಸೂಚನೆ
March 14, 2026
2:43 PM
by: ಸಾಯಿಶೇಖರ್ ಕರಿಕಳ
ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?
March 14, 2026
7:21 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror