ಲಾಲ್‌ಬಾಗ್‌ ಫ್ಲವರ್‌ ಶೋ | ಪ್ರವಾಸಿಗರನ್ನು ಕೈಬೀಸಿ ಕರೆದ ಸಸ್ಯಕಾಶಿ : ಭರ್ಜರಿ ರೆಸ್ಪಾನ್ಸ್, ಕೋಟಿ ಮೀರಿದ ಆದಾಯ

January 27, 2024
11:51 AM

ಪ್ರತಿವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವಕ್ಕೆ ಸಸ್ಯಕಾಶಿ ಲಾಲ್‌ಬಾಗ್‌ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಪ್ರತಿಬಾರಿಯಂತೆ ಈ ಬಾರಿಯೂ ಪ್ಲವರ್‌ ಶೂ ಭರ್ಜರಿಯಾಗಿ ನಡೆಯುತ್ತಿದೆ. ನಾಡಿನಾದ್ಯಂತ ಪ್ರವಾಸಿಗರ ದಂಡೇ ಲಾಲ್‌ ಬಾಗ್‌ಗೆ ಹರಿದು ಬರುತ್ತಿದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾದ ಫ್ಲವರ್‌ ಶೋಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.

ರಾಜ್ಯ ರಾಜಧಾನಿಯ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ್ಲವರ್‌ ಶೋಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.ಜನವರಿ 18 ರಿಂದ ಆರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ನಾಳೆ (ಜನವರಿ 28) ತೆರೆ ಬೀಳಲಿದೆ. ಈ ಮಧ್ಯೆ ಇದುವರೆಗೆ 2.24 ಲಕ್ಷಕ್ಕೂ ಮಿಕ್ಕಿ ಜನ ಫ್ಲವರ್‌ ಶೋಗೆ ಭೇಟಿ ನೀಡಿದ್ದಾರೆ.ಅಷ್ಟೇ ಅಲ್ಲ, ನಿನ್ನೆ ಗಣರಾಜ್ಯೋತ್ಸವ ಸರಕಾರಿ ರಜೆ ಹಿನ್ನೆಲೆ ಒಂದೇ ದಿನ 96,500 ಮಂದಿ ಲಾಲ್‌ಬಾಗ್‌ ಫ್ಲವರ್‌ ಶೋಗೆ ಭೇಟಿ ನೀಡಿದ್ದಾರೆ. ಆದ್ದರಿಂದ ತೋಟಗಾರಿಕಾ ಇಲಾಖೆ ರಿಪಬ್ಲಿಕ್‌ ಡೇನಿಂದಾಗಿ ಭರ್ಜರಿ 65 ಲಕ್ಷ ರೂಪಾಯಿಯನ್ನು ನಿನ್ನೆ ಒಂದೇ ದಿನದಲ್ಲಿ ಸಂಗ್ರಹಿಸಿದೆ.

ಇದುವರೆಗೂ ಭೇಟಿ ನೀಡಿರುವ 2.24 ಲಕ್ಷ ಜನರಿಂದ ಇದುವರೆಗೆ 1.44 ಕೋಟಿ ರೂಪಾಯಿಗೂ ಮಿಕ್ಕಿ ಆದಾಗ ಗಳಿಸಿದೆ. ಇಂದು ಮತ್ತು ನಾಳೆ ವಾರಾಂತ್ಯ ಹಾಗೂ ಫ್ಲವರ್‌ ಶೋ ನಾಳೆಗೆ ಕೊನೆಯಾಗಲಿರುವುದರಿಂದ ಭಾರೀ ಸಂಖ್ಯೆಯ ಜನ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror