ಪ್ರತಿವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವಕ್ಕೆ ಸಸ್ಯಕಾಶಿ ಲಾಲ್‌ಬಾಗ್ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಪ್ರತಿಬಾರಿಯಂತೆ ಈ ಬಾರಿಯೂ ಪ್ಲವರ್ ಶೂ ಭರ್ಜರಿಯಾಗಿ ನಡೆಯುತ್ತಿದೆ. ನಾಡಿನಾದ್ಯಂತ ಪ್ರವಾಸಿಗರ ದಂಡೇ ಲಾಲ್ ಬಾಗ್‌ಗೆ ಹರಿದು ಬರುತ್ತಿದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾದ ಫ್ಲವರ್ ಶೋಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.
ರಾಜ್ಯ ರಾಜಧಾನಿಯ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ್ಲವರ್ ಶೋಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.ಜನವರಿ 18 ರಿಂದ ಆರಂಭವಾದ ಫಲಪುಷ್ಪ ಪ್ರದರ್ಶನಕ್ಕೆ ನಾಳೆ (ಜನವರಿ 28) ತೆರೆ ಬೀಳಲಿದೆ. ಈ ಮಧ್ಯೆ ಇದುವರೆಗೆ 2.24 ಲಕ್ಷಕ್ಕೂ ಮಿಕ್ಕಿ ಜನ ಫ್ಲವರ್ ಶೋಗೆ ಭೇಟಿ ನೀಡಿದ್ದಾರೆ.ಅಷ್ಟೇ ಅಲ್ಲ, ನಿನ್ನೆ ಗಣರಾಜ್ಯೋತ್ಸವ ಸರಕಾರಿ ರಜೆ ಹಿನ್ನೆಲೆ ಒಂದೇ ದಿನ 96,500 ಮಂದಿ ಲಾಲ್‌ಬಾಗ್ ಫ್ಲವರ್ ಶೋಗೆ ಭೇಟಿ ನೀಡಿದ್ದಾರೆ. ಆದ್ದರಿಂದ ತೋಟಗಾರಿಕಾ ಇಲಾಖೆ ರಿಪಬ್ಲಿಕ್ ಡೇನಿಂದಾಗಿ ಭರ್ಜರಿ 65 ಲಕ್ಷ ರೂಪಾಯಿಯನ್ನು ನಿನ್ನೆ ಒಂದೇ ದಿನದಲ್ಲಿ ಸಂಗ್ರಹಿಸಿದೆ.
ಇದುವರೆಗೂ ಭೇಟಿ ನೀಡಿರುವ 2.24 ಲಕ್ಷ ಜನರಿಂದ ಇದುವರೆಗೆ 1.44 ಕೋಟಿ ರೂಪಾಯಿಗೂ ಮಿಕ್ಕಿ ಆದಾಗ ಗಳಿಸಿದೆ. ಇಂದು ಮತ್ತು ನಾಳೆ ವಾರಾಂತ್ಯ ಹಾಗೂ ಫ್ಲವರ್ ಶೋ ನಾಳೆಗೆ ಕೊನೆಯಾಗಲಿರುವುದರಿಂದ ಭಾರೀ ಸಂಖ್ಯೆಯ ಜನ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
– ಅಂತರ್ಜಾಲ ಮಾಹಿತಿ
ಸಣ್ಣ ಹಿಡುವಳಿದಾರರಿಗೆ ಈಗ ಕಾಳುಮೆಣಸು ಕೃಷಿಯ ಬಗ್ಗೆ ಸಾಕಷ್ಟು ಗೊಂದಲ. ಇಂತಹ ಸಮಯದಲ್ಲಿ…
ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ಸಣ್ಣ ಪ್ರಮಾಣದ ತಿರುಗುವಿಕೆಯು ಅಷ್ಟೇನು ಪರಿಣಾಮ ಬೀರುವ ಸಾಧ್ಯತೆಗಳು…
ಜೋಯಿಡಾ ತಾಲೂಕಿನ ಬಜಾರಕುಣಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಸೈ ಗ್ರಾಮದಲ್ಲಿ ಭಾರೀ ಮಳೆಯಿಂದ…
ಶಿಖರ್ ಬಿ.ಕೆ. 6ನೇ ತರಗತಿ, ಕುಮಾರಸ್ವಾಮಿ ವಿದ್ಯಾಲಯ, ಕುಕ್ಕೆಸುಬ್ರಹ್ಮಣ್ಯ | - ದ…
ಕ್ರಿಶನ್ ಎಸ್ ಭಟ್, ಮೇರಿ ಹಿಲ್, 1ನೇ ತರಗತಿ, ಎಸ್ಡಿಎಂ ಶಾಲೆ, ಮಂಗಳೂರು…
ಮುಂದಿನ 2 ರಿಂದ 3 ದಿನಗಳಲ್ಲಿ ದೇಶದ ಪೂರ್ವ, ಪಶ್ಚಿಮ, ಮಧ್ಯ ಮತ್ತು…