ಕೃಷಿಕರು ತಮ್ಮ ಜಮೀನಿನ ಮಾಲೀಕತ್ವ ಸಾಬೀತುಪಡಿಸಲು ಅಗತ್ಯವಿರುವ ಕೆಲವು ದಾಖಲೆಗಳ ಮೂಲಕ ಪೋಡಿ ನಕ್ಷೆ, ಆಕಾರ್ ಬಂದ್, ಮ್ಯುಟೇಶನ್, ಋಣಭಾರ ಪ್ರಮಾಣ ಪತ್ರ ಪ್ರತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಸರ್ವೆ ಕಚೇರಿ, ತಹಶೀಲ್ದಾರ್ ಕಚೇರಿ, ಉಪನೋಂದಣಿ ಅಧಿಕಾರಿ ಕಚೇರಿಯನ್ನು ಅಲೆದಾಡುವ ಪರಿಸ್ಥಿತಿ ಇರುತ್ತದೆ. ಈ ಸಮಸ್ಯೆಗಳನ್ನು ಪರಿಹಾರ ಒದಗಿಸಲು ಕಂದಾಯ ಇಲಾಖೆ ಅಧಿಕಾರಿಗಳು ಭೂಮಿ-2 ಆವೃತಿ ಬಿಡುಗಡೆ ಮಾಡಲು ಯೋಜನೆ ರೂಪಿಸುತ್ತಿದೆ. ಇದರಿಂದ ಜಮೀನಿಗೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಪಡೆಯಲು ಸರಕಾರಿ ಕಚೇರಿಯ ಕೆಲಸಕ್ಕೆ ಮಧ್ಯವರ್ತಿಗಳ ಹಾವಳಿಗೆ ನೀಡುವ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬಹುದು. ಮಾತ್ರವಲ್ಲ ಅಧಿಕಾರ ಕಚೇರಿಗಳಿಗೆ ಅಲೆದಾಟ ಹಾಗೂ 20-30 ದಿನಗಳ ಕಾಯುವಿಕೆಗೆ ಬ್ರೇಕ್ ಹಾಕಬಹುದು ಎಂದು ಕಂದಾಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

