ಭೂರಹಿತರನ್ನು ಜಮೀನುದಾರರನ್ನಾಗಿ ಮಾಡಿ ಅವರ ಆರ್ಥಿಕ ಏಳಿಗೆಯನ್ನು ಖಚಿತಪಡಿಸುವ ದೃಷ್ಟಿಯಲ್ಲಿ ರಾಜ್ಯಸರ್ಕಾರವೂ ಕರ್ನಾಟಕದ ಭೂರಹಿತ ಕೃಷಿ ಕಾರ್ಮಿಕರಿಗೆ ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮಗಳ ಮೂಲಕ ನಡೆಸುವ ಭೂ ಒಡೆತನ ಯೋಜನೆಯಲ್ಲಿ ಘಟಕ ವೆಚ್ಚವನ್ನು ರೂ 10 ಲಕ್ಷ ದಿಂದ ರೂ 15 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಈ ಕಾಯಿದೆಯೂ ಡಿಸೆಂಬರ್ 1.2025 ರಂದು ಹೊರಡಿಸಲ್ಪಟ್ಟ ಈ ಆದೇಶವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳ ಭೂರಹಿತ ಕಾರ್ಮಿಕರಿಗೆ ಜಮೀನು ಖರೀದಿಗೆ ದೊಡ್ಡ ಅವಕಾಶ ಒದಗಿಸುತ್ತದೆ.
ಭೂ ಒಡೆತನ ಯೋಜನೆಯ ಆರ್ಹತೆಯನ್ನು ಯಾರು ಪಡೆಯುವರು:
- ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಕಾರ್ಮಿಕರು.
- ಯಾವುದೇ ಕೃಷಿ ಜಮೀನು ಹೊಂದಿರದವರು
- ಕೃಷಿ ಕಾರ್ಮಿಕರಾಗಿ ಕನಿಷ್ಠ 3 ವರ್ಷಗಳ ಅನುಭವ ಇರುವವರು.
- ಕುಟುಂಬದ ವಾರ್ಷಿಕ ಆದಾಯ ರೂ1.5 ಲಕ್ಷಕ್ಕಿಂತ ಕಡಿಮೆ ಇರುವವರು.
- ಕರ್ನಾಟಕ ನಿವಾಸಿಯಾಗಿರಬೇಕು, 18-55 ವರ್ಷ ವಯ್ಸಿನ ಮಿತಿಯಲ್ಲಿರಬೇಕು, ಒಂದು ಕುಟುಂಬಕ್ಕೆ 2-3 ಎಕರೆವರೆಗೆ ಮಾತ್ರ.
ಬೇಕಾಗಿರುವ ದಾಖಲೆ:
- ಆಧಾರ್ ಕಾರ್ಡ್
- ಪ್ರಮಾಣ ಪತ್ರ
- ಭೂ ಸುಧಾರಣಾ ದಾಖಲೆ
ಅರ್ಜಿ ಸಲ್ಲಿಸುವ ವಿಧಾನ: ಜಿಲ್ಲಾ/ ತಾಲೂಕು ಅಂಬೇಡ್ಕರ್/ ವಾಲ್ಮೀಕಿ ನಿಗಮ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಅಂಬೇಡ್ಕರ್ ನಿಗಮ ವೆಬ್ ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement


