ನನ್ನ ಭೂಮಿ ಅಭಿಯಾನ ಜಾರಿಯಿಂದ ರೈತರಿಗೆ ಅನುಕೂಲ

January 25, 2025
7:00 AM
ನನ್ನ ಭೂಮಿ’ ಅಭಿಯಾನದಡಿ ಸರಳೀಕರಣವಾದ ದರಖಾಸ್ತು ಪೋಡಿ ಅಭಿಯಾನ ಈಗಾಗಲೇ ಚಾಲನೆಗೊಂಡಿದೆ.

ರಾಜ್ಯದಲ್ಲಿ ಪೋಡಿ ದುರಸ್ತಿಯಾಗಿ ರೈತರು ಸರ್ಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ’ನನ್ನ ಭೂಮಿ ಅಭಿಯಾನ’ ನಡೆಸಲಾಗುತ್ತಿದ್ದು,  ಜಮೀನಿನ ಮಾಲೀಕತ್ವಕ್ಕೆ ರಾಜ್ಯ ಸರ್ಕಾರ ಅನುವು ಮಾಡಿಕೊಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಕಂದಾಯ ಇಲಾಖೆ ಮತ್ತು ಭೂ ಮಾಪನ ಇಲಾಖೆಯಡಿ ಸರಳೀಕರಣವಾದ ದರಖಾಸ್ತು ಪೋಡಿ ಅಭಿಯಾನಕ್ಕೆ ಮತ್ತು ಪೋಡಿ ದುರಸ್ತಿ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ’ನನ್ನ ಭೂಮಿ’ ಅಭಿಯಾನದಡಿ ಸರಳೀಕರಣವಾದ ದರಖಾಸ್ತು ಪೋಡಿ ಅಭಿಯಾನ ಈಗಾಗಲೇ ಚಾಲನೆಗೊಂಡಿದ್ದು, ದಶಕಗಳಿಂದ ಆಗದಿರುವ ಪೋಡಿ ದುರಸ್ತಿ ವಿತರಣೆ ವೇಗವಾಗಿ ನಡೆಯಲು ಅಭಿಯಾನ ಸಹಕಾರಿಯಾಗಿದೆ ಎಂದು ತಿಳಿಸಿದರು. ದಶಕಗಳಿಂದ ರೈತರು ತಮ್ಮ ಜಮೀನಿಗೆ ಸಂಪೂರ್ಣ ಮಾಲಿಕತ್ವ ಸಿಗದೇ ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಿದೆ. ರಾಜ್ಯದಲ್ಲಿ 15 ಲಕ್ಷ ಇಂತಹ ಪ್ರಕರಣಗಳಲ್ಲಿ ರೈತರಿಗೆ ಇನ್ನು ಮಾಲೀಕತ್ವ ಸಿಕ್ಕಿಲ್ಲ. ಇದನ್ನು ಮನಗಂಡಿರುವ ರಾಜ್ಯ ಸರ್ಕಾರ  ಪೋಡಿ ಅಭಿಯಾನವನ್ನು ಸರಳೀಕೃತಗೊಳಿಸಿ, ಡಿಜಿಟಲೀಕರಣ ಮಾಡಿ ಕಳೆದ ಡಿಸೆಂಬರ್‌ನಿಂದ ಅನುಷ್ಟಾನಗೊಳಿಸಿದೆ ಎಂದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |
April 29, 2025
9:00 AM
by: The Rural Mirror ಸುದ್ದಿಜಾಲ
ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ
April 29, 2025
8:00 AM
by: ದ ರೂರಲ್ ಮಿರರ್.ಕಾಂ
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |
April 28, 2025
10:21 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 28-04-2025 | ಇಂದು ಅಲ್ಲಲ್ಲಿ ಗುಡುಗು ಸಹಿತ ಮಳೆ | ಮೇ 1ರಿಂದ ಮಳೆ ಹೆಚ್ಚಾಗುವ ಲಕ್ಷಣ
April 28, 2025
2:22 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group