ಭೂಕುಸಿತ – ಪ್ರವಾಹದ ಸುತ್ತ ಯೋಚಿಸಿದ್ದಾರೆ ಕೃಷಿಕ ಟಿ ಆರ್‌ ಸುರೇಶ್ಚಂದ್ರ |

August 30, 2022
9:54 PM
ಆಗಾಗ ಭೂಕುಸಿತ-ಪ್ರವಾಹಗಳು ನಡೆಯುತ್ತಿವೆ. ಅದರಲ್ಲೂ ಮಲೆನಾಡು, ಪಶ್ಚಿಮಘಟ್ಟ ಪ್ರದೇಶದ ತಪ್ಪಲು ಪ್ರದೇಶಗಳಲ್ಲಿ ಮಳೆ ಬಂದಾಗ ಭಯದ ವಾತಾವರಣ ಕಂಡುಬಂದಿದೆ. ಈಚೆಗೆ ಸುಳ್ಯದ ಸಂಪಾಜೆ, ಕಲ್ಮಕಾರು ಪ್ರದೇಶದಲ್ಲಿ ತಿಂಗಳಲ್ಲಿ ಎರಡು ಬಾರಿ ಭೂಕುಸಿತ , ಪ್ರವಾಹ ಕಂಡುಬಂದಿದೆ. ಇದೆಕ್ಕೆಲ್ಲಾ ಕಾರಣ ಏನು ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆ ಕೃಷಿಕ ಟಿ ಆರ್‌ ಸುರೇಶ್ಚಂದ್ರ ಕಲ್ಮಡ್ಕ.

ಏಕೆ ಭೂಕುಸಿತವಾಗುತ್ತಿದೆ…?,ಇದೊಂದು ಪ್ರಶ್ನೆ ಎಲ್ಲೆಡೆ ಇದೆ. ಇದಕ್ಕೆ ಕಾರಣ ಸರಳ. ಮರಗಳ್ಳರ ಹಾವಳಿ…ಐನೂರು ಸಾವಿರ ವರ್ಷದ ಬೃಹತ್ ಮರಗಳನ್ನು ಕಡಿದು ಮುಕ್ಕಿ.ಈಗ ಪಾತಾಳಕ್ಕಿಳಿದಿದ್ದ ಅದರ ಬೇರುಗಳು ಕುಸಿದು ಅಲ್ಲಲ್ಲಿ ದೊಡ್ಡ ದೊಡ್ಡ ಗಾತ್ರದ ಹೊಂಡಗಳು ಆಗಿ ಅಲ್ಲೇ ನೀರು ನುಗ್ಗಿ, ಭೂಮಿ ಕುಸಿದು ಜರ್ಜರಿತಾವಾಯ್ತು ಅಷ್ಟೇ. ಎಸ್ಟೇಟ್ ವಿಸ್ತರಣೆ, ಮರಕಳ್ಳತನಗಳೇ ಪ್ರದಾನ ಕಾರಣ.ಸರಳವಾಗಿ ಆಲೋಚಿಸೋಣ..

Advertisement
ನಮ್ಮ ಮನೆಯಂಗಳದಲ್ಲಿದ್ದ ಮಾವಿನ ಮರ ಕಡಿದು ಹತ್ತು ವರ್ಷದ ಮೇಲಾಯ್ತು….ಈಗ ಟೊಳ್ಳಾಗಿ ಒಳಗೊಳಗೇ ಜಗ್ಗುತ್ತಿದೆ….ಪ್ರತೀ ವರ್ಷವೂ ಮಣ್ಣು ತುಂಬಬೇಕಾಗುತ್ತದೆ. ಹಾಗಾದರೆ ಹತ್ತಾರು ಜನರ ಕೈ ಸುತ್ತಿಗೂ ಸಿಗದಂತಹ ಮರಗಳನ್ನು ಕಡಿದು ತಿಂದ ಪರಿಣಾಮ ಈ ಭೂ ಕುಸಿತ.ನಲ್ವತ್ತು ವರ್ಷಗಳ ಲಾಗಾಯ್ತಿನಿಂದ ಈ ಕಳ್ಳ ಸಂತಾನಗಳು ಎಷ್ಟು ಮರ ಕದ್ದಿರಬಹುದು ,ನಮಗೆ ಅಂದಾಜೇ ಆಗದು.

ಪಾಪ.. ದೂರದಿಂದ ಕಾಡನ್ನು ನೋಡಿದಾಗ ಹಸಿರೋ ಹಸಿರು… ಒಳಗೊಳಗೆ ಹತ್ತಿರ ಹೋದಾಗ‌ ಕೇವಲ ಸಣ್ಣ ಪುಟ್ಟ ಮರಗಳು ಪೊದೆಗಳು ಅನಾಥವಾಗಿವೆ….ತನ್ನ ಪೂರ್ವಜರನ್ನು ಕಳಕೊಂಡು ಕಳ್ಳ ಸಂತಾನದ ದಾಳಿಗೆ ಹೆದರಿ ನಲುಗುತ್ತಿವೆ…
ಬೇರೆಲ್ಲೂ ನೋಡೋದು ಬೇಡ…ನಮ್ಮ ನಮ್ಮ ಊರಿನ ಕಾಡುಗಳನ್ನೆ ನೋಡಿ ,ಅಲೋಚುಸಿ ,ಅಷ್ಟೇ ಸಾಕು…
ಪಶ್ಚಿಮ ಘಟ್ಟಗಳ ಅವ್ಯಾಹತ ಲೂಟಿ ಸುರುವಾದ್ದೇ ಕೆಟ್ಟ ರಾಜಕಾ….ಗಳ ಕೃಪಾಕಟಾಕ್ಷದಲ್ಲಿ ಮರದ ದಂಧೆ….ಇಂದಿಗೂ ನಡೆಯುತ್ತಿದೆ…

ಕುಸಿಯಲೇಬೇಕಿದೆ….ಕುಸಿತಕ್ಕೆ ಆಹ್ವಾನ ಕೊಟ್ಟಾಗಿದೆ….ಇನ್ನು ಉಳಿದಿರೋದು ಕುಸಿತ ಮಾತ್ರ….. ಮಾನವ ದಾಹಕ್ಕೆ ಮಿತಿ ಇದೆಯಾ… ಗಮನಿಸಿ, ನಮ್ಮ ತೋಟದ ಬದಿಯ ತೋಡೋ,ಹೊಳೆಯೋ, ಬರೆಯೋ,ಇನ್ನೇನೋ, ಬದಿಯಲ್ಲಿ ಇದ್ದ ಒಂದು ತೆಂಗಿನ ಮರ ಬಿದ್ದೋ ,ಸತ್ತೋ ಕಡಿದರೆ ಸುಮಾರು ಏಳೆಂಟು ವರ್ಷಗಳಲ್ಲಿ ಅಲ್ಲಿ ಏನಾಗುತ್ತದೆ ಎಂದು…ಅಲ್ಲಿ ಮಣ್ಣು ಸಡಿಲವಾಗಿ…ಕುಸಿಯುತ್ತದೆಯಲ್ಲಾ….ಅದೇ ,ಅದೇ ಕಾಟ…ಮಾನವನ ದಾಹದ ಕಾಟ….ಸಾರ್ವಜನಿಕ ಆಸ್ತಿ ಕಾಡನ್ನೇ ನುಂಗಿ ನೊಣೆದ ದಾಹ….ಬೃಹತ್ ಕಿರಾಲ್ ಭೋಗಿಗಳಂತಹ ಮರಗಳನ್ನು ಕಬ್ಬಿಣದೊಂದಿಗೆ ಜೋಡಿಸಬಹುದು…. ಅದರ ಗಟ್ಟಿತನದಿಂದಾಗಿ…ರೈಲ್ವೆ ಟ್ರಾಕ್ ಮಾಡಲು ಸ್ಲೀಪರ್ ಗಾಗಿ …ನಮ್ಮೂರಿನ ಬಂಟಮಲೆಯ ತುತ್ತತುದಿಗೂ ಆ ಕಾಲದಲ್ಲೇ…ಅಂದರೆ ಸುಮಾರು ಐವತ್ತು ವರ್ಷಗಳ ಹಿಂದೆ ರಸ್ತೆ ಮಾಡಿ ಮರ ಎಳೆಸಿದ್ದಾರಂತೆ….ಆ ಕಬ್ಬಿಣ ಸದೃಶ ,ಗಗನ ಚುಂಬಿ, ನಿತ್ಯ ಹರಿದ್ವರ್ಣದ ಮರ ಬೆಳೆಯಲು ಎಷ್ಟು ವರ್ಷವಾಗಿರಬಹುದು…ಅದರ ಬೇರುಗಳು ಎಷ್ಟು ಆಳಕ್ಕೆ,ವಿಸ್ತಾರಕ್ಕೆ ಇಳಿದಿರಬಹುದು….ನಲ್ವತ್ತು ಐವತ್ತು ವರ್ಷಗಳೇ ಬೇಕು ಅದು ಜೀರ್ಣವಾಗಲು….ಅಂದು ಮಾಡಿದ ದಂಧೆ, ಇಂದು ಫಲಮಾಗಿ ಪ್ರತಿಫಲ ಕೊಡುತ್ತಿದೆ…..ಆ ಗಗನಚುಂಬೀ ಮರಗಳ ರೋಧನ ಇಂದು ಮನುಜನ ಮೂರನೇ ತಲೆಮಾರಿಗೆ ಶಾಪವಾಗಿ ತಟ್ಟುತ್ತಿದೆ…..ಅನುಭವಿಸಲೇ ಬೇಕು…. ಕುಸಿತವೇ ಕುಸಿತ…

ಮಳೆ ಹೆಚ್ಚಾಗಿಲ್ಲ… ಏನೂ ಇಲ್ಲ….ಇದೆಲ್ಲಾ ಪ್ರಕೃತಿಯ ಮಾಮೂಲು ಕ್ರಿಯೆ ಅಷ್ಟೇ…. ಅದರೆ ಬಂದ ಮಳೆಯ ಆಧರಿಸಿ ಬೂಮಿಗಿಳಿಸಿ ಹರಿಯ ಕೊಡುತ್ತಿದ್ದ ಹಸಿರ ತೋರಣಗಳಾಗಿದ್ದ ಬೃಹತ್ ಮರಗಳೇ ಇಲ್ಲ….ಇದ್ದ ಮರಗಳ ಕಡಿದುರುಳಿಸಿ ಇಂದು ಆ ಮರಗಳ ಬೇರುಗಳ ಪಳೆಯುಳಿಕೆ ಜೀರ್ಣವಾಗಿ ಭೂ ದೇವಿಯ ಗರ್ಭಾಶಯ ಸಡಿಲು ಸಡಿಲಾಗಿ….ಬೋರಲಾಗಿ….ಶಕ್ತಿ ಹೀನವಾಗಿದೆ….ಅಷ್ಟೇ ,ಇಷ್ಟೇ…. ಹೊರತಾಗಿ…ಕೃಷಿ, ಬೋರು, ನೀರಾವಿ,ಮುಗಿಲು, ಅಲ್ಲಲ್ಲ…. ಇದೇ ಅಭಿವೃದ್ಧಿಯ ಓಟ,ಹಣದ ದಾಹ….ಅಷ್ಟೇ….

ಸಾಮಾನ್ಯರಿಗೆ ಒಂದು ವ್ಯವಸ್ಥೆಯ ಹಿಂದೆ ಎಷ್ಟು ಭ್ರಷ್ಟತೆ ನಡೆದೀತು, ಸಾದ್ಯವಾದೀತು ಎಂಬ ಕಲ್ಪನೆಯೇ ಬಾರದು…
ಉದಾಹರಣೆಗೆ..

ಪವರ್ ಕಟ್… ಬೆಂಗಳೂರಿನಂತಹ ಬೃಹತ್ ಕೈಗಾರಿಕಾ ಇರುವಂತಲ್ಲಿ, ಹಾಗೂ ಇತರೆ ಊರುಗಳಲ್ಲಿ , ವಿದ್ಯುತ್ ನಿಲುಗಡೆ ಅಗುವ ಸಮಯದಲ್ಲಿ ತನ್ನ ಉತ್ಪನ್ನ ಹೊರಬರಲು ಇನ್ನೇನು ಕೆಲವೇ ನಿಮಿಷಗಳು ಬೇಕು…ವಿದ್ಯುತ್ ನಿಲುಗಡೆ ಅದರೆ ಲಕ್ಷ ಕೋಟಿಗಳ ನಷ್ಟ…. ಏನು ಪರಿಹಾರ….ಇದೆ ಇದೆ…ವಿದ್ಯುತ್ ನಿಲುಗಡೆ ಒಂದೈದು ಹತ್ತು ನಿಮಿಷಗಳಷ್ಟು ಮುಂದೂಡುವುದು…. ಹೇಗೆ…ಹೇಗೆ….ನಿಮಿಷಗಳ ಲೆಕ್ಕದಲ್ಲಿ ಲಕ್ಷ ಲಕ್ಷ, ಐದೋ ಹತ್ತೋ.. ಎಣಿಸೋದು…ಅಷ್ಟೇ… ಗ್ರಿಡ್ ಲೋಡ್ ಕಡಿಮೆ ಮಾಡಲು ಇನ್ನೆಲ್ಲೋ ಓಫ್…ಇಲ್ಲಿ ಲಕ್ಷಗಳ ಲೆಕ್ಕಾಚಾರ ಮಾಡಿದ ಲೈನ್ ಹತ್ತು ನಿಮಿಷ ಎಕ್ಸ್ಟ್ರಾ ಚಾರ್ಜಲ್ಲಿ …..ಕೆಲಸ ಅಯ್ತು…ಇವನಿಗೆ ಇವನ ಉತ್ಪನ್ನ ಹೊರ ಬಂತು….ಅವರ ಕಿಸೆಗೆ ನೋಟಿನ ಕಂತೆಗಳ ರಾಸಿ ರಾಸಿ…. ಹಳ್ಳಿಯ ಮೂಲೆಯಿಂದ ಹಲೋ ಹಲೋ…ಕರೆಂಟ್ ಬರಲಿಲ್ಲ ಎಂದು ಅರಚಿದಾಗ….ಮೇಲೆ ಫಾಲ್ಟ್, ಈಗ ಐದು ನಿಮಿಷಗಳಲ್ಲಿ ಬರುತ್ತದೆ…..ಕತೆ ಫಿನಿಷ್….
ಹಾಗೇ ಈ ಮರದ ದಂದೆಯೂ…ಒಂದಕ್ಕೆ ಅನುಮತಿ….ಒಂದರ ಮುಂದೆ ಸೊನ್ನೆಗಳ ಸೇರಿಸುತ್ತಾ ಹೋಗಿ ಕಡಿಕಡಿದು….ಖಾಲಿ ಅದ ಪರಿಣಾಮ…. ಅದು ಬಿಟ್ಟು ಕೃಷಿ ಮಾಡಿ ಅಲ್ಲ….

ನಿಜ ಕೃಷಿಯ ಪರಿಣಾಮ ನಗಣ್ಯ ಇರಬಹುದು….. ಹಣದ , ದಾಹದ ಕೃಷಿಯ ಪರಿಣಾಮ… ಕುಸಿತವೇ ಕುಸಿತ…. ಎಲ್ಲೆಲ್ಲೂ ಕುಸಿತ…ಭೂ ಕುಸಿತ, ಮನೆ ಕುಸಿತ, ನೈತಿಕತೆಯ ಕುಸಿತ……. ಇನ್ನು ಈ ರೀತಿಯ ಜನಸಂಖ್ಯೆ ಏರಿದಾಗ ಮತ್ತೊಂದು ಭಾಗ ಕುಸಿಯಲೇ ಬೇಕಲ್ಲಾ…. ಕಣ್ಮುಚ್ಚಿ , ಬಾಯ್ಮುಚ್ಚಿ, ಕುಸಿತ ನೋಡ್ತಾ ನೊಡ್ತಾ ಕುಸಿಯೋಣ…. ಟೊಳ್ಳು ಟೊಳ್ಳು ಸುಳ್ಳರ ಕೂಪದ ಜಗದೊಳಗೆ ಕುಸಿತವೇ ಅಂತಿಮ…. ಟುಸ್ಸಾ…

ಬರಹ :
ಟಿ ಆರ್‌ ಸುರೇಶ್ಚಂದ್ರ , ಕಲ್ಮಡ್ಕ

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

ಇದನ್ನೂ ಓದಿ

ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!
April 13, 2025
7:03 AM
by: ನಾ.ಕಾರಂತ ಪೆರಾಜೆ
ಹೊಸರುಚಿ | ಗುಜ್ಜೆ ಶೇಂಗಾ ಮಸಾಲಾ ಪಲ್ಯ
April 12, 2025
8:00 AM
by: ದಿವ್ಯ ಮಹೇಶ್
ಈಗ ಮನಸುಗಳಿಗೇ ಒಂದು ಬ್ರಹ್ಮಕಲಶ ಯಾಕಾಗಬೇಕು…?
April 10, 2025
8:30 AM
by: ಮಹೇಶ್ ಪುಚ್ಚಪ್ಪಾಡಿ
ಹೊಸರುಚಿ | ಗುಜ್ಜೆ ಕಡಲೆ ಗಸಿ
April 10, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group