ವಯನಾಡು ಜಿಲ್ಲೆಯ ಮಂಡಕ್ಕೈ ಪ್ರದೇಶದಲ್ಲಿ ಭಾರೀ ಮಳೆ ಹಾಗೂ ಭೂಕುಸಿತದ ಘಟನೆ ಈಗ ಚರ್ಚೆಯಾಗುತ್ತಿದೆ. ಹಲವು ಉಪಕ್ರಮಗಳ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಸರ್ಕಾರಗಳು ಹಲವು ಭರವಸೆಗಳನ್ನು ನೀಡುತ್ತಿವೆ. ಆದರೆ ಈ ಹಿಂದೆ ನಡೆದಿರುವ ಭೂಕುಸಿತ ಹಾಗೂ ಪ್ರಾಕೃತಿಕ ವಿಕೋಪದ ನಂತರ ಅಲ್ಲಿನ ಪರಿಸ್ಥಿತಿ ಹೇಗಿದೆ..? ಈ ಬಗ್ಗೆ ವಿಶೇಷವಾದ ವರದಿ ಇಲ್ಲಿದೆ……..ಮುಂದೆ ಓದಿ….
ಎರಡು ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ಪ್ರದೇಶವಾದ ಸುಳ್ಯ ತಾಲೂಕಿನ ಕಲ್ಮಕಾರು ಪ್ರದೇಶದಲ್ಲಿ ಭಾರೀ ಮಳೆಯಾಗಿತ್ತು. ಮಳೆಯಾಗುತ್ತಿದ್ದಂತೆಯೇ ಗುಡ್ಡ ಪ್ರದೇಶದಲ್ಲಿ ಕುಸಿತ ಆರಂಭವಾಗಿ ಪ್ರವಾಹ ಸೃಷ್ಟಿಯಾಯಿತು. ಕಲ್ಮಕಾರು, ಕೊಲ್ಲಮೊಗ್ರ ಹಾಗೂ ಹರಿಹರ ಪಲ್ಲತ್ತಡ್ಕ ಪ್ರದೇಶದ ನದಿ ಅಕ್ಕಪಕ್ಕದ ಕೃಷಿ ಭೂಮಿ, ಮನೆಗಳಿಗೆ ಹಾನಿಯಾಯಿತು. ಆದರೆ ಇಲ್ಲಿ ಬೆಟ್ಟದ ತಪ್ಪಲು ಪ್ರದೇಶದಲ್ಲಿ ಅಷ್ಟೊಂದು ಮನೆಗಳು ಇರಲಿಲ್ಲ ಹಾಗೂ ಮೇಘಸ್ಫೋಟ ಹಾಗೂ ಭೂಕುಸಿತದ ಪ್ರಭಾವ ಕಡಿಮೆ ಇತ್ತು. ಹೀಗಾಗಿ ಹಾನಿಗಳು ಕಡಿಮೆಯಾದವು. ಇಲ್ಲೂ ಕೂಡಾ 3 ಗ್ರಾಮಗಳ ನದಿ ಪಕ್ಕದ ಮನೆಗಳಿಗೂ ಹಾನಿಯಾಗಿತ್ತು. ಅದೇ ಮಾದರಿಯಲ್ಲಿ ಸಂಪಾಜೆ, ಚೆಂಬು ಪ್ರದೇಶದಲ್ಲಿ ಅದೇ ಮಾದರಿಯಲ್ಲಿ ಕುಸಿತವಾಗಿತ್ತು, ಭಾರೀ ಮಳೆಯೂ ಆಗಿತ್ತು. ಮಳೆಯ ಕಾರಣದಿಂದ ಬೆಟ್ಟದಲ್ಲಿ ಭಾರೀ ಸದ್ದು ಕೇಳುತ್ತಾ ಕುಸಿತವಾಗಿತ್ತು ಬೆಟ್ಟ. ಅದರ ವ್ಯಾಪ್ತಿಯೂ ಸಾಕಷ್ಟು ದೂರದವರೆಗೆ ಅಪಾರ ಹಾನಿಯಾಗಿತ್ತು.
ಈ ಘಟನೆ ನಡೆದು ಎರಡು ವಾರಗಳ ಕಾಲ ಅನೇಕ ಸ್ವಯಂಸೇವಾ ಸಂಘಟನೆಗಳು , ಸರ್ಕಾರ, ಆಡಳಿತವು ಸ್ಥಳಕ್ಕೆ ಆಗಮಿಸಿ ಗ್ರಾಮದ ಜನರಿಗೆ ನೆರವು ನೀಡಿದರು. ತಾತ್ಕಾಲಿಕ ವ್ಯವಸ್ಥೆ ಮಾಡಲಾಯಿತು. ಆಗ ಸ್ಥಳಕ್ಕೆ ಆಗಮಿಸಿದ ಎಲ್ಲಾ ಜನಪ್ರತಿನಿಧಿಗಳು, ಅಧಿಕಾರಿಗಳು ಹಾನಿಯಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮರುಸ್ಥಾಪನೆ ಮಾಡುವುದಾಗಿ ಭರವಸೆ ನೀಡಿ ತೆರಳಿದ್ದರು. ಮಾಧ್ಯಮಗಳ ಮುಂದೆ ಲಕ್ಷ-ಕೋಟಿಯ ಅನುದಾನಗಳ ಬಗ್ಗೆಯೂ ಹೇಳಿದ್ದರು. ಆ ಭರವಸೆಗಳಿಗೆಲ್ಲಾ ವರ್ಷ ಎರಡು ಕಳೆದಿದೆ. ಇಂದಿಗೂ ಕೆಲವು ಕಡೆ ಜನರು ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಮಳೆಗಾಲ ವಾಹನ ಸಂಚಾರವೂ ಇಲ್ಲದೆ ದ್ವೀಪದ ಮಾದರಿಯ ಪರಿಸ್ಥಿತಿ ಉಂಟಾಗುತ್ತದೆ. ಇದಕ್ಕೊಂದು ಉದಾಹರಣೆ ಕಲ್ಮಕಾರು-ಕೊಲ್ಲಮೊಗ್ರ ಭಾಗದ ಬೆಂಡೋಡಿ ಎನ್ನುವ ಊರು.
ಕಲ್ಮಕಾರಿನಲ್ಲಿ ಉಂಟಾದ ಭೂಕುಸಿತದಿಂದ ಸುಮಾರು 4 ಕಿಮೀ ದೂರದಲ್ಲಿರುವ ಕೊಲ್ಲಮೊಗ್ರದ ಬಳಿಯ ಬೆಂಡೋಡಿ ಸೇತುವೆ ಕೊಚ್ಚಿ ಹೋಗಿತ್ತು.ಕೆಸರು ಮಣ್ಣಿನ ಜೊತೆ ಭಾರೀ ಪ್ರಮಾಣದ ಮರದ ರಾಶಿಗಳೂ ಹರಿದು ಬಂದಿದ್ದರಿಂದ ಹಲವು ಸೇತುವೆಗಳಲ್ಲಿ ಬಿರುಕು ಬಿಟ್ಟಿತ್ತು, ಹಾನಿಗೊಳಗಾಗಿತ್ತು. ಅನೇಕ ಮನಗೆಳಿಗೆ , ಕಟ್ಟಡಗಳಿಗೆ ಹಾನಿಯಾಗಿತ್ತು. ಅದರಲ್ಲಿ ಬೆಂಡೋಡಿ ಸೇತುವೆಯೂ ಒಂದು.
ಅಂದು ಕೊಲ್ಲಮೊಗ್ರದಿಂದ ಬೆಂಡೋಡಿ ಸಂಪರ್ಕ ರಸ್ತೆ ತೀವ್ರವಾಗಿ ಹಾನಿಗೊಳಗಾಗಿ ಸುಮಾರು 250 ಮನೆಗಳು ನಗರದ ಸಂಪರ್ಕ ಕಳೆದುಕೊಂಡಿದ್ದವು. ಪ್ರವಾಹಕ್ಕೂ ಮುನ್ನ ಈ ಊರು ಸಂಕಷ್ಟದಿಂದ ಪಾರಾಗಲು ಸೇತುವೆ ನಿರ್ಮಾಣ ಮಾಡಿ ಕೆಲ ಸಮಯವಷ್ಟೇ ಆಗಿತ್ತು. ಅಷ್ಟರಲ್ಲೇ ಪ್ರವಾಹಕ್ಕೆ ಸಿಲುಕು ಅರ್ಧ ಭಾಗ ಕೊಚ್ಚಿ ಹೋಗಿತ್ತು. ಆ ನಂತರ ಸ್ಥಳೀಯರ ಪ್ರಯತ್ನದಿಂದ ಮೋರಿ ಅಳವಡಿಕೆ ಮಾಡಿದರು, ಅದೂ ಮತ್ತೆ ಕೊಚ್ಚಿ ಹೋಯಿತು. ಆ ಬಳಿಕ ಮೂರು-ನಾಲ್ಕು ಬಾರಿ ಈ ಮೋರಿ ಕೊಚ್ಚಿ ಹೋಗಿತ್ತು, ಸ್ಥಳೀಯರು ಅಳವಡಿಕೆ ಮಾಡಿದ್ದ ಕಾಲು ಸಂಕವೇ ಗತಿಯಾಗಿತ್ತು. ಈಗ ತಾತ್ಕಾಲಿಕವಾಗಿ ದುರಸ್ತಿಯಾದರೂ ಇನ್ನೊಮ್ಮೆ ಮಳೆಯಾದರೆ ಮತ್ತೆ ಕೊಚ್ಚಿ ಹೋಗುವುದೂ ನಿಶ್ಚಿತ. ಈ ನಡುವೆ ಈಗ ಸ್ಥಳೀಯ ಪಂಚಾಯತ್ ಇಲ್ಲಿ ಎಚ್ಚರಿಕೆ ಫಲಕ ಅಳವಡಿಕೆ ಮಾಡಿದೆ, ಸೇತುವೆ ಶಿಥಿಲವಾಗಿರುವ ಬಗ್ಗೆ ಪಂಚಾಯತ್ ಕೂಡಾ ಹೇಳುತ್ತದೆ.
ಪ್ರವಾಹದ ನಂತರ ಈ ಸೇತುವೆಗಾಗಿ ಸ್ಥಳೀಯರು ಅನೇಕ ಬಾರಿ ಮನವಿಯನ್ನು ಜನಪ್ರತಿನಿಧಿಗಳಿಗೆ ಸಲ್ಲಿಸಿದ್ದಾರೆ. ಅಧಿಕಾರಿಗಳಿಗೆ ಹೇಳಿದ್ದಾರೆ. ಆದರೂ ಸೇತುವೆ ಕಾಯ ನಡೆದಿಲ್ಲ. ಈ ಬಾರಿ ನೂತನ ಸಂಸದರಿಗೂ ಸ್ಥಳೀಯರು ಮನವಿ ಮಾಡಿದ್ದಾರೆ. ಸುಮಾರು 250 ಮನೆಗಳಿಗೆ ಈ ಸೇತುವೆ ಅವಶ್ಯಕತೆ ಇದೆ. ಬೆಂಡೋಡಿಯ ಶಾಲೆಯ ಸಂಪರ್ಕಕ್ಕೂ ಈ ಸೇತುವೆ ಅಗತ್ಯ ಇದೆ. ಈಚೆಗೆ ಈ ಶಾಲೆಯ ಮಕ್ಕಳು ವಿಧಾನಸಭೆಗೂ ತೆರಳಿದ ವೇಳೆ ಅಲ್ಲೂ ಮನವಿ ಮಾಡಿದ್ದಾರೆ.
ಪತ್ರಕರ್ತರ ಗ್ರಾಮ ವಾಸ್ತವ್ಯದ ವೇಳೆಯೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆನ್‌ಲೈನ್ ಮೂಲಕವೂ ಮನವಿ ಮಾಡಿದ್ದಾರೆ ಗ್ರಾಮಸ್ಥರು. ಇದೆಲ್ಲಾ ಎಲ್ಲೋ ಒಂದು ಕಡೆ ದಾಖಲಾಗಿ ನಂತರ ಸದ್ದಿಲ್ಲದಾಗುತ್ತದೆ. ಫಲಿತಾಂಶ ಮಾತ್ರಾ ಶೂನ್ಯ. ಹಲವು ಬಾರಿ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾದರೂ ಕಣ್ಣೆತ್ತಿಯೂ ನೋಡಲಿಲ್ಲ ಅಧಿಕಾರಿಗಳು, ಪ್ರತಿನಿಧಿಗಳು. ಪ್ರವಾಹದ ನೆಪದಲ್ಲಿ ಸ್ಥಳಕ್ಕೆ ಆಗಮಿಸಿ ಪರಿಹಾರದ ಭರವಸೆ ನೀಡಿ ಮರೆಯಾಗುವ ಚಾಳಿ ಹೆಚ್ಚಾಗಿದೆ. ಎರಡು ವರ್ಷ ಕಳೆದರೂ ಗ್ರಾಮೀಣ ಭಾಗದ ಸಂಪರ್ಕವನ್ನು ಸಾಧಿಸಲು ವ್ಯವಸ್ಥೆ ಮಾಡಲು ಈ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯ ಇದು ಎನ್ನಲೇಬೇಕಿದೆ.
ಸಂಪಾಜೆ, ಚೆಂಬು ಭಾಗದಲ್ಲೂ ಅದೇ ರೀತಿಯ ಪರಿಸ್ಥಿತಿ ಅಂದು ಉಂಟಾಗಿತ್ತು. ಸೇತುವೆ ಕೊಚ್ಚಿ ಹೋಗಿರುವುದು, ಮನೆಗಳಿಗೆ ಹಾನಿ, ಕೃಷಿ ನಾಶವೂ ಆಗಿತ್ತು. ಎಲ್ಲೋ ಕೆಲವು ಕಡೆ ಪರಿಹಾರದ ಸಿಕ್ಕಿದೆ, ಇನ್ನೂ ಅನೇಕರಿಗೆ ಯಾವುದೂ ಸಿಗಲಿಲ್ಲ ಎನ್ನುತ್ತಾರೆ ಸ್ಥಳೀಯರು.
ನೀವು ಇಲ್ಲಿ ಪ್ರತಿಕ್ರಿಯೆ ನೀಡಬಹುದು…..
Two years ago, there was heavy rainfall in the Kalmakaru area of Sullia taluk in the Western Ghats. The downpour led to landslides in the hilly regions and resulted in flooding. Agricultural land and houses were severely damaged along the river in Kalmakaru, Kollamogra, and Harihar Pallattadka areas.
After the arrival of all the people’s representatives at the location, the officials made assurances to restore all the damaged infrastructure . They also informed the media about the substantial grants allocated for this purpose. However, two years have elapsed since those promises were made, and in some areas, people still struggle with ongoing challenges. During the rainy season, certain areas experience a situation akin to being isolated due to lack of vehicular traffic.
ಸಹಕಾರಿ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಅಂತರಾಷ್ಟ್ರೀಯ ಮಟ್ಟದ ಕ್ಯಾಂಪ್ಕೊ ಸಂಸ್ಥೆ "ಕಲ್ಪ" ಕೊಬ್ಬರಿ ಎಣ್ಣೆ…
ಮುಂಜಾನೆಯ ಸಮಯದಲ್ಲಿ ಸ್ಥಬ್ಧವೆನ್ನಿಸುವ ವಾತಾವರಣದಲ್ಲೂ ಸಾಕಷ್ಟು ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳುತ್ತಿರುತ್ತದೆ. ಆದರೆ…
ದಕ್ಷಿಣ ಬಂಗಾಳಕೊಲ್ಲಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ ಉಂಟಾಗುವ ಸಾಧ್ಯತೆಗಳಿದ್ದು, ಜನವರಿ 18 ರಂದು…
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಹೆಚ್ಚುವರಿ…
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷ ಕಾರ್ಯಕ್ರಮ…
ನಾಗರಿಕತೆ ಬೆಳವಣಿಗೆ, ಅಭಿವೃದ್ಧಿ ಅಂದರೆ ವ್ಯಕ್ತಿತ್ವಗಳೂ ಬೆಳೆಯಬೇಕು. ಅಭಿವೃದ್ಧಿಯ ಸೂಚ್ಯಂಕವೇ ವ್ಯಕ್ತಿತ್ವದ ಬೆಳವಣಿಗೆ…