ಮುಂದುವರಿದ ಮಳೆಯ ಅಬ್ಬರ | ಗುಂಡ್ಯದ ಅಡ್ಡಹೊಳೆ ಸಮೀಪದ ಗುಡ್ಡ ಪ್ರದೇಶದಲ್ಲೂ ಎಚ್ಚರಿಕೆ |

July 18, 2024
3:15 PM
ಶಿರಾಡಿ ಘಾಟಿ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿದೆ. ಗುಡ್ಡ ಕುಸಿತದ ಭೀತಿ ಎದುರಾಗಿದೆ. ಈಗಾಗಲೇ ಕೆಲವು ಕಡೆ ರಸ್ತೆಗೆ ಮಣ್ಣುಕುಸಿತವಾಗಿದೆ. ವಾಹನ ಓಡಾಟಕ್ಕೆ ನಿಧಾನವಾಗಿ ನಡೆಯುತ್ತಿದೆ.

ಮಂಗಳೂರು ಬೆಂಗಳೂರು ಹೆದ್ದಾರಿಯ ಸಕಲೇಶಪುರ ತಾಲೂಕಿನ ಮಾರನಹಳ್ಳಿ ಸಮೀಪದ ದೊಡ್ಡ ತಪ್ಪಲು ರೈಲ್ವೆ ಟ್ರ್ಯಾಕ್ ಸಮೀಪ ಗುಡ್ಡ ಜರಿದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮಣ್ಣುಗಳ ರಾಶಿ ಹೆದ್ದಾರಿ ರಸ್ತೆಗೆ ಬೀಳುತ್ತಿದ್ದು ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ.………ಮುಂದೆ ಓದಿ……..

Advertisement
Advertisement
ಶಿರಾಡಿಯಲ್ಲಿ ಘನ ವಾಹನಗಳ ಸಾಲು

ಈ ಭಾಗದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ರಸ್ತೆ ವಿಸ್ತರಣೆಗೆ ಈ ಹಿಂದೆ ಗುಡ್ಡವನ್ನು ಅಗೆಯಲಾಗಿತ್ತು. ಮಾರನಹಳ್ಳಿ ರೈಲ್ವೆ ಟ್ರ್ಯಾಕ್ ನಿಂದ ಸುಮಾರು 50 ಅಡಿ ಮೇಲ್ಭಾಗದಿಂದ ಮಣ್ಣು ಜರಿಯುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಏಕಕಾಲದಲ್ಲಿ ಒಂದು ಬದಿಯ ವಾಹನಕಷ್ಟೇ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ನಿಧಾನ ಗತಿಯಲ್ಲಿ ಎರಡು ಬದಿಯ ವಾಹನಕ್ಕೂ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ನಿರಂತರ ಸುರಿಯಲಾರಂಭಿಸಿದರೆ ರೈಲು ಸಂಚಾರದಲ್ಲಿಯು ವ್ಯತ್ಯಾಸವಾಗಬಹುದು ಎಂದು ಹೇಳಲಾಗುತ್ತಿದೆ. ಇಂತಹದೇ ಪರಿಸ್ಥಿತಿ ಗುಂಡ್ಯದ ಅಡ್ಡ ಹೊಳೆ ಸಮೀಪದ ಗುಡ್ಡ ಪ್ರದೇಶದಲ್ಲಿಯೂ ಕಾಣಲಾರಂಬಿಸಿದೆ. ನಿರಂತರ ಮಳೆ ಸುರಿದರೆ ಈ ಪ್ರದೇಶದಲ್ಲೂ ಗುಡ್ಡ ಕುಸಿಯಬಹುದೆಂದು ಹೇಳಲಾಗುತ್ತಿದೆ.………ಮುಂದೆ ಓದಿ……..

 

ಗುಡ್ಡ ಕುಸಿತದ ಪ್ರದೇಶದಲ್ಲಿ ವಾಹನ ಸಂಚಾರ
ಕುಸಿತದ ಭೀತಿಯಲ್ಲಿರುವ ಗುಡ್ಡ

ದೊಡ್ಡ ತಪ್ಪಲು ಸಮೀಪ ಗುಡ್ಡ ಜರಿಯುತ್ತಿರುವ ಕಾರಣ ಬೆಳಗ್ಗೆ 9 ಗಂಟೆಯಿಂದ ನೆಲ್ಯಾಡಿ -ಶಿರಾಡಿ- ಗುಂಡ್ಯ ಭಾಗದಿಂದ ಸಂಚರಿಸುವ ಘನವಾಹನಗಳಾದ ಟ್ಯಾಂಕರ್, 16 ಚಕ್ರದ ಟ್ರಕ್, ಟ್ರೈಲರ್ ಗಳನ್ನು ನೆಲ್ಯಾಡಿ – ಗುಂಡ್ಯ ಭಾಗದಲ್ಲಿಯೇ ನಿಲ್ಲಿಸಲಾಗಿದೆ. ಮಾರನಹಳ್ಳಿ ಸಮೀಪ ಸಂಚಾರ ನಿರ್ಬಂಧಗೊಂಡರೆ ವಾಹನ ದಟ್ಟಣೆ ನಿಯಂತ್ರಿಸಲು ಕಷ್ಟವಾದಿತು ಎನ್ನುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದಂತೆ ಲಘು ವಾಹನಗಳು ಸಂಚಾರಿಸುತ್ತಿದೆ.

Advertisement

A landslide near Maranahalli in Sakaleshpur taluk on the Mangalore-Bangalore highway is disrupting vehicular traffic. Mud is falling onto the highway, causing traffic to move slowly. There is also a risk of hill collapse in certain areas of Shiradi Ghati. Heavy rain is still ongoing.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಬಿಹಾರ ಸೇರಿ ಹಲವು ರಾಜ್ಯಗಳಲ್ಲಿ 2 ದಿನ ಭಾರಿ ಮಳೆ
July 22, 2025
10:01 PM
by: The Rural Mirror ಸುದ್ದಿಜಾಲ
ಒಂದೇ ಕುಟುಂಬದ ಮೂವರ ಮೃತ್ಯು | ತರಕಾರಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಜೀವಕ್ಕೇ ಕುತ್ತಾಯಿತೇ ?
July 22, 2025
9:52 PM
by: The Rural Mirror ಸುದ್ದಿಜಾಲ
 ಇಂದು ವಿಶ್ವ ಮಾವು ದಿನಾಚರಣೆ | ರಾಜ್ಯದ ಮಾವಿಗೆ ಜಗತ್ತಿನಾದ್ಯಂತ ಬೇಡಿಕೆ |
July 22, 2025
9:34 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group