ಪ್ರಮುಖ

#HimachalLandslide | 55 ದಿನಗಳಲ್ಲಿ 113 ಭೂಕುಸಿತಗಳು | ಹಿಮಾಚಲ ಪ್ರದೇಶವನ್ನು ಅಸ್ಥಿರಗೊಳಿಸಲು ಕಾರಣವೇನು? | ತಜ್ಞರ ತಂಡ ಆರಂಭಿಸಿದ ಅಧ್ಯಯನ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಪ್ರತಿ ವರ್ಷದಂತೆ ಈ ಬಾರಿಯೂ ಹಿಮಾಚಲ ಪ್ರದೇಶ #HimachalPradesh ಮತ್ತು ಉತ್ತರಾಖಂಡದಲ್ಲಿ #Uttarakhand ಭಾರೀ ಮಳೆಯಿದಾಗಿ, ಭೂಕುಸಿತದ ಘಟನೆಗಳು ಹೆಚ್ಚಾಗುತ್ತಿವೆ. ಎರಡೂ ರಾಜ್ಯಗಳಲ್ಲಿ ಭೂಕುಸಿತದಿಂದ ನೂರಾರು ಮಂದಿ ಸಾವನ್ನಪ್ಪಿದ್ದು, ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ದೇಶದ ಒಟ್ಟು ಭೂಕುಸಿತ ಪ್ರಕರಣಗಳಲ್ಲಿ ವಾಯುವ್ಯ ಹಿಮಾಲಯದಲ್ಲಿ ಶೇಕಡಾ 67 ರ ಸಮೀಪದಲ್ಲಿದೆ.55 ದಿನಗಳಲ್ಲಿ 113 ಭೂಕುಸಿತಗಳ ಬಗ್ಗೆ ದಾಖಲೆ  ಹೇಳುತ್ತದೆ. ಇದು ಪ್ರಮುಖ ಹೆಚ್ಚಳವಾಗಿದೆ.ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಇತ್ತೀಚೆಗೆ 74 ಮಂದಿ ಸಾವನ್ನಪ್ಪಿದ್ದಾರೆ.

Advertisement

ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ಸಂಭವಿಸುತ್ತಿರುವ ಭೂಕುಸಿತದ #Landslide ಘಟನೆಗಳ ಬಗ್ಗೆ ತಜ್ಞರು ಚಿಂತಿತರಾಗಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಹಿಮಾಲಯದಲ್ಲಿ ಅವೈಜ್ಞಾನಿಕ ನಿರ್ಮಾಣ, ಕ್ಷೀಣಿಸುತ್ತಿರುವ ಅರಣ್ಯ ಪ್ರದೇಶ ಮತ್ತು ನದಿಗಳ ಬಳಿ ನೀರಿನ ಹರಿವನ್ನು ತಡೆಯುವ ರಚನೆಗಳು ಭೂಕುಸಿತಗಳ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ತಜ್ಞರು ಹೇಳುತ್ತಾರೆ. ಭೂವಿಜ್ಞಾನಿ ಪ್ರೊಫೆಸರ್ ವೀರೇಂದ್ರ ಸಿಂಗ್ ಧಾರ್, ಅವರ ಪ್ರಕಾರ ರಸ್ತೆ, ಸುರಂಗಗಳ ನಿರ್ಮಾಣ ಮತ್ತು ಅಗಲೀಕರಣಕ್ಕಾಗಿ ಬೆಟ್ಟದ ಇಳಿಜಾರುಗಳನ್ನು ವ್ಯಾಪಕವಾಗಿ ಕತ್ತರಿಸುವುದು ಮತ್ತು ಜಲವಿದ್ಯುತ್ ಯೋಜನೆಗಳಿಗೆ ಬ್ಲಾಸ್ಟಿಂಗ್ ಹೆಚ್ಚಳವು ಭೂಕುಸಿತಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಹಿಮಾಚಲ ಶಿಮ್ಲಾದಲ್ಲಿ ಭೂಕುಸಿತಕ್ಕೆ ಕಾರಣಗಳ ಅಧ್ಯಯನಕ್ಕೆ ಸಮಿತಿಗಳನ್ನು ರಚಿಸಲಾಗಿದ್ದು, ಹಿಮಾಚಲ ಪ್ರದೇಶ ಕೌನ್ಸಿಲ್ ಫಾರ್ ಸೈನ್ಸ್, ಟೆಕ್ನಾಲಜಿ ಅಂಡ್ ಎನ್ವಿರಾನ್ಮೆಂಟ್ ನ ಪ್ರಧಾನ ವೈಜ್ಞಾನಿಕ ಅಧಿಕಾರಿ ಡಾ.ಎಸ್.ಎಸ್.ರಾಂಧವಾ ಅವರನ್ನು ಈ ಸಮಿತಿಯ ಸಂಯೋಜಕರನ್ನಾಗಿ ನೇಮಿಸಲಾಗಿದೆ.‌ಸಮಿತಿಯ ಇತರ ಸದಸ್ಯರಲ್ಲಿ ರಾಜ್ಯದ ಭೂವಿಜ್ಞಾನಿ ಪುನೀತ್ ಗುಲೇರಿಯಾ, ಲೋಕೋಪಯೋಗಿ, ಜಲ ಶಕ್ತಿ ಇಲಾಖೆ, ಶಿಮ್ಲಾ ಮುನ್ಸಿಪಲ್ ಕಾರ್ಪೊರೇಷನ್ ಪ್ರತಿನಿಧಿಗಳು ಮತ್ತು ಶಿಮ್ಲಾ ಜಿಲ್ಲಾಧಿಕಾರಿ ಕಚೇರಿಯ ಪ್ರತಿನಿಧಿ ಸೇರಿದ್ದಾರೆ.ಇವರ ನೇತೃತ್ವದಲ್ಲಿ ತಂಡವು ಅಧ್ಯಯನ ನಡೆಸಿದರೆ, ಇನ್ನೂ ಕೆಲವು ತಂಡ ಅಧ್ಯಯನ ಆರಂಭಿಸಿದೆ. ಸಮಿತಿಯ ಅಧ್ಯಯನವು ಈ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗುವ ಅಂಶಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಹೊಂದಿದೆ. ಅರಣ್ಯನಾಶ ಮತ್ತು ಭೂಪ್ರದೇಶದ ಅತಿಯಾದ ಕಾಮಗಾರಿಗಳು, ಮಾನವ ನಿರ್ಮಿತ ಅಂಶಗಳು ಪ್ರಮುಖ ಕಾರಣಗಳೆಂದು  ಶಂಕಿಸಲಾಗಿದೆ.ಭೂವಿಜ್ಞಾನ ತಜ್ಞ ಪ್ರೊಫೆಸರ್ ವೀರೇಂದ್ರ ಸಿಂಗ್ ಧಾರ್ ಅವರ ಪ್ರಕಾರ ನಿರ್ಮಾಣ, ರಸ್ತೆ ವಿಸ್ತರಣೆ, ಸುರಂಗಗಳನ್ನು ಸ್ಫೋಟಿಸುವ ಮತ್ತು ಜಲವಿದ್ಯುತ್ ಯೋಜನೆಗಳಿಗಾಗಿ ಬೆಟ್ಟಗಳನ್ನು ಕತ್ತರಿಸುವುದು ಭೂಕುಸಿತಕ್ಕೆ ಕಾರಣವಾಗಿದೆ.

ತಜ್ಞರ ಪ್ರಕಾರ, ತಪ್ಪಲಿನಲ್ಲಿನ ಬಂಡೆಗಳ ಸವೆತ ಮತ್ತು ಸರಿಯಾದ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಹಿಮಾಚಲದ ಇಳಿಜಾರುಗಳು ಭೂಕುಸಿತಕ್ಕೆ ಹೆಚ್ಚು ಗುರಿಯಾಗುತ್ತವೆ ಮತ್ತು ಹೆಚ್ಚಿನ ತೀವ್ರತೆಯ ಮಳೆಯು ರಾಜ್ಯದಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದಿದ್ದಾರೆ. ಹವಾಮಾನ ಇಲಾಖೆಯ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಈ ವರ್ಷ ಇಲ್ಲಿಯವರೆಗೆ 742 ಮಿ.ಮೀ ಮಳೆಯಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಮಾನ್ಸೂನ್ ಪ್ರಾರಂಭವಾದ 55 ದಿನಗಳಲ್ಲಿ ಹಿಮಾಚಲದಲ್ಲಿ 113 ಭೂಕುಸಿತ ಘಟನೆಗಳು ಸಂಭವಿಸಿವೆ.

ಭೂಕುಸಿತದ ಘಟನೆಗಳು ವರ್ಷದಲ್ಲಿ 6 ಪಟ್ಟು ಹೆಚ್ಚಳಈ ಘಟನೆಗಳಿಂದ ಲೋಕೋಪಯೋಗಿ ಇಲಾಖೆ  2,491 ಕೋಟಿ ರೂಪಾಯಿ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುಮಾರು 1,000 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆ ನಷ್ಟದ ಬಗ್ಗೆ ಹೇಳುವುದಾದರೆ, ರಾಜ್ಯದಲ್ಲಿ 10,000 ಕೋಟಿ ನಷ್ಟವಾಗಿದೆ. ವಿಪತ್ತು ನಿರ್ವಹಣಾ ಇಲಾಖೆಯ ವರದಿಯ ಪ್ರಕಾರ, 2022 ರಲ್ಲಿ ಪ್ರಮುಖ ಭೂಕುಸಿತಗಳ ಸಂಭವವು 6 ಪಟ್ಟು ಹೆಚ್ಚಾಗಿದೆ. 2020 ರಲ್ಲಿ 16 ಕ್ಕೆ ಹೋಲಿಸಿದರೆ 2022 ರಲ್ಲಿ 117 ಪ್ರಮುಖ ಭೂಕುಸಿತ ಘಟನೆಗಳು ಸಂಭವಿಸಿವೆ.  ಈಗಾಗಲೇ ಹಿಮಾಚಲ ರಾಜ್ಯದಲ್ಲಿ 38,000 ಚದರ ಕಿ.ಮೀ ಪ್ರದೇಶವು ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು  ಬಹಿರಂಗಪಡಿಸಿದೆ. ಈ ಪ್ರದೇಶದಲ್ಲಿ, ಸುಮಾರು 7,800 ಚದರ ಕಿಮೀ ಹೆಚ್ಚಿನ ಅಪಾಯದಲ್ಲಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಓಂಕಾರ್ ಶರ್ಮಾ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Source : Digital Media

 

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮನೆಯೊಳಗೆ ನುಗ್ಗಿದ ಚಿರತೆ | ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ |

ಆನೇಕಲ್ ತಾಲೂಕಿನ ಜಿಗಣಿಯ ಕುಂಟ್ಲರೆಡ್ಡಿ ಬಡಾವಣೆಯ ವೇಂಕಟೇಶ್ ಎಂಬುವರ ಮನೆಗೆ ನಿನ್ನೆ ನುಗ್ಗಿದ್ದ…

10 hours ago

ರಸ್ತೆ ಸರಕು ಸಾಗಾಣೆಯಲ್ಲೂ ತೀವ್ರ ಏರಿಕೆ  |  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ

ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ದೇಶಾದ್ಯಂತ 1 ಸಾವಿರದ 600 ಚಾಲಕ ತರಬೇತಿ ಕೇಂದ್ರಗಳನ್ನು…

13 hours ago

ಹವಾಮಾನ ವರದಿ | 04-04-2025 | ಇಂದು ಕೆಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಎ.7 ರಿಂದ ಮಳೆ ಕಡಿಮೆಯಾಗುವ ಲಕ್ಷಣ |

ಇಂದು ಕೆಲವು ಕಡೆ ಗುಡುಗು ಸಹಿತ ಮಳೆಯ ಲಕ್ಷಣವಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ…

14 hours ago

ಅಡಿಕೆಯ ನಾಡಿನಲ್ಲಿ ಉಪಬೆಳೆಯಾಗಿ ತರಕಾರಿ ಕೃಷಿ ಮಾಡಿದ ಯುವಕ

ಕೃಷಿಕ ಯಶಸ್ವಿಯಾಗಬೇಕಾದರೆ , ಕೃಷಿ ಬೆಳೆಯಬೇಕಾದರೆ,ಉಳಿಯಬೇಕಾದರೆ ತಿಂಗಳಿಗೆ ಒಂದಷ್ಟು ಆದಾಯ ಸಿಗಲೇಬೇಕು. ಮುಖ್ಯ…

19 hours ago

ಅಭಯಾರಣ್ಯದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರ ನಿಷೇಧಕ್ಕೆ ಮನವಿ

ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬಾರದೆಂದು ಸಂಸತ್ ಸದಸ್ಯ ತೇಜಸ್ವಿ…

20 hours ago

ಪಂಚಗ್ರಹಿ ಯೋಗ ಎಂದರೇನು..? | ಈ ಯೋಗವು ಮಹತ್ವದ್ದಾಗಿದೆ ಏಕೆ.. ?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

20 hours ago