ಕಾನೂನು ಮತ್ತು ಸಂವಿದಾನದ ಅರಿವು ಕಾರ್ಯಾಗಾರ | ಶಿಕ್ಷಣ,ಕಾನೂನು,ಜಮೀನು ಸರ್ವರ ಹಕ್ಕು ಮತ್ತು ಕಡ್ಡಾಯವಾಗುವಂತೆ ಮಾಡಿದ್ದು ಅಂಬೇಡ್ಕರ್

January 28, 2025
9:16 PM

ಪ್ರಜಾಧ್ವನಿ ಕರ್ನಾಟಕ ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದ ಭಾಗವಾಗಿ ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಸಂವಿದಾನದ ಅರಿವು ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ  ನ್ಯಾಯವಾದಿಗಳಾದ  ದಿನೇಶ್ ಹೆಗ್ಡೆ ಉಳೆಪಾಡಿ, “ಹಿಂದೆ ಶಿಕ್ಷಣ,ಜಮೀನು,ಕಾನೂನು ಇವೆಲ್ಲಾ ಕೆಲವರ ಮಾತ್ರ ಅಥವಾ ಆರ್ಥಿಕವಾಗಿ ಬಲಾಡ್ಯರಾಗಿದ್ದವರ ಸ್ವತ್ತಾಗಿತ್ತು, ಇವತ್ತು 16 ವರ್ಷದವರೆಗಿನ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿ ಕಾನೂನು ರಚನೆಯಾಗಿದೆ. ಆರ್ಥಿಕವಾಗಿ ಬಲಾಡ್ಯರಾಗಿದ್ದವರಲ್ಲಿ ಮಾತ್ರ ಇದ್ದ ಜಮೀನು ದಿವಂಗತ ಇಂದಿರಾ ಗಾಂಧಿಯವರ ಮೂಲಕ ಒಂದು ಹಂತದವರೆಗೆ ಉಳುವವನೇ ಹೊಲದೊಡೆಯನಾಗುವ ಮೂಲಕ ಹೆಚ್ಚಿನವರಿಗೆ ಜಮೀನು ದೊರಕುವಂತಾಯಿತು. ಯಾವನೇ ಒಬ್ಬ ವ್ಯಕ್ತಿ ತನಗೆ ಅನ್ಯಾಯವಾದರೆ ಕೇವಲ ಒಂದು ಪತ್ರ ಬರೆಯುವುದರ ಮುಖೇನೆ ಹೈಕೋರ್ಟ್, ಸುಪ್ರೀಂ ಕೋರ್ಟು ಗಳು ಆ ವ್ಯಕ್ತಿಯ ಬಳಿಗೇ ಬರುವ ವ್ಯವಸ್ತೆಯಿದೆ. ಇದಕ್ಕೆಲ್ಲಾ ಕಾರಣವಾಗಿದ್ದೇ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ನಮ್ಮ ಸಂವಿದಾನ ಎಂದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಪ್ರಜಾಧ್ವನಿಯ ಗೌರವ ಸದಸ್ಯರು ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕರಾದ  ಕೆ.ಪಿ ಜಾನಿ ಇವರು ಪ್ರಸ್ತಾವಿಕ ಮಾತುಗಳನ್ನಾಡಿ, “ನಮ್ಮ ಸ್ವಾತಂತ್ರ್ಯ ಹೋರಾಟಗಾರರೆಲ್ಲರ ಮನದಾಳದ ಆಶಯವನ್ನು ಇಡಿ ಜಗತ್ತು ಸುತ್ತಾಡಿ ಎಲ್ಲಾ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಾಯನ ಮಾಡಿ ಅಕ್ಷರಗಳ ಮೂಲಕ ಜೋಡಿಸಿ ಒಂದು ಪುಸ್ತಕದ ರೂಪದಲ್ಲಿ ಜಗತ್ತಿನ ಶ್ರೇಷ್ಠ ಸಂವಿದಾನವನ್ನಾಗಿ ಡಾಕ್ಟರ್ ಬಾಬಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಅರ್ಪಿಸಿದರು ಎಂದು ಹೇಳಿದರು.

ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಇದರ ಮುಖ್ಯೋಪಾಧ್ಯಾಯರಾದ ಸೋಮಶೇಖರ್. ಪಿ  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಜಾಧ್ವನಿ ಕರ್ನಾಟಕದ ಸಂಚಾಲಕರಾದ  ಗೋಪಾಲ್ ಪೆರಾಜೆ  ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾಂತಿ ಬಿ.ಎಸ್  ಸ್ವಾಗತಿಸಿ ಪ್ರಾಧ್ಯಾಪಕರಾದ ಸುರೇಶ್ ವಾಗ್ಲೆ ಇವರು ವಂದಿಸಿದರು.ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ  ಪದ್ಮಕುಮಾರ್  ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಧ್ವನಿ ಕರ್ನಾಟಕ ಇದರ ಗೌರವ ಸದಸ್ಯರು, ಸುಳ್ಯ ನಗರಪಂಚಾಯತ್ ಸದಸ್ಯ ಉಮ್ಮರ್ ಕೆ.ಎಸ್,ರಾಜು ಪಂಡಿತ್ ,ಸಂಪಾಜೆ ಗ್ರಾಮಪಂಚಾಯತ್ ಸದಸ್ಯರಾದ  ಲೆಸ್ಸಿ ಮೊನಾಲಿಸ,ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಪ್ರಮಿಳಾ ಪೆಲ್ತಡ್ಕ,ಐ.ಎನ್.ಟಿ.ಯು.ಸಿ ತಾಲೂಕು ಅಧ್ಯಕ್ಷರಾದ  ಶಾಫಿ ಕುತ್ತಮೊಟ್ಟೆ, ಮಹೇಶ್ ಬೆಳ್ಳಾರ್ಕರ್, ಕೇಶವ ಪಾಟಾಳಿ, ಭರತ್ ಕುಕ್ಕುಜಡ್ಕ , ಸಾಹುಕಾರ್ ಅಶ್ರಫ್ , ದಿವಾಕರ್ ಪೈ, ಲಲನ ಕೆ.ಆರ್, ಸಿಲ್ವೆಸ್ಟರ್ ಡಿಸೋಜ, ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಶಿಕ್ಷಕರು ಸಿಬ್ಬಂದಿ ವರ್ಗ,ಮತ್ತಿತರರು  ಉಪಸ್ಥಿತರಿದ್ದರು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ
March 15, 2025
7:00 AM
by: ದಿವ್ಯ ಮಹೇಶ್
ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |
March 14, 2025
11:36 PM
by: ದ ರೂರಲ್ ಮಿರರ್.ಕಾಂ
ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ
March 14, 2025
11:03 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ
March 14, 2025
10:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror