ವಾರಕ್ಕೆ ಒಮ್ಮೆಯಾದರೂ ಒಂದು ಕಿ.ಮೀ ದೂರ ಚಪ್ಪಲಿ ಇಲ್ಲದೆ ನಡೆದರೆ ಆರೋಗ್ಯ ಹೆಚ್ಚುತ್ತದೆ. ದೇಹದಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ ಹಾಗೂ ಆಕ್ಯುಪ್ರೆಶರ್ ಸಾಧ್ಯವಾಗುತ್ತದೆ ಎನ್ನುವುದು ವರದಿ. ಇದಕ್ಕಾಗಿ ವಾರಕ್ಕೆ ಒಮ್ಮೆಯಾದರೂ ಒಂದು ಕಿ.ಮೀ ದೂರ ಚಪ್ಪಲಿ ಇಲ್ಲದೆ ನಡೆಯುವ ಪ್ರಯತ್ನ ಮಾಡಿದರೆ ಉತ್ತಮ ಎನ್ನುವುದು ಇಲ್ಲಿ ನೀಡಿರುವ ಸಂದೇಶ.
ಮನುಷ್ಯನ ಪಾದಗಳಲ್ಲಿ ಅನೇಕ ನರಗಳ ತುದಿ ಇರುತ್ತದೆ. ಹೆಚ್ಚು ಹೊತ್ತು ಪಾದರಕ್ಷೆಗಳನ್ನು ಬಳಸುವುದರಿಂದ ಸೂಕ್ಷ್ಮವಾದ ಈ ನರಗಳು ಸಂವೇದನೆಯನ್ನು ಕಳೆದುಕೊಳ್ಳುತ್ತವೆ. ಚಪ್ಪಲಿ ಇಲ್ಲದಂತೆ ನಡೆಯುವುದರಿಂದ ಈ ನರಗಳು ಆಕ್ಟೀವ್ ಆಗಿ ಇರುತ್ತದೆ.
ಚಪ್ಪಲಿ ಇಲ್ಲದೆ ನಡೆಯುವುದರಿಂದ ದೇಹದ ಭಂಗಿ ಸೂಕ್ತ ರೀತಿಯಲ್ಲಿರುತ್ತದೆ. ಹೊಟ್ಟೆಯ ಮೇಲೆ ಒತ್ತಡ ಉಂಟಾಗಿ, ಜೀರ್ಣಕ್ರಿಯೆ ಸೂಕ್ತ ರೀತಿಯಲ್ಲಿ ನಡೆಯುತ್ತದೆ. ಚಪ್ಪಲಿ ಇಲ್ಲದಂತೆ ನಡೆಯುವುದರಿಂದ, ಮರಳು, ಚಿಕ್ಕ ಚಿಕ್ಕ ಕಲ್ಲುಗಳು ಮೃದುವಾಗಿ ಚುಚ್ಚಿಕೊಳ್ಳುವುದರಿಂದ, ನಿಮ್ಮ ರಕ್ತದ ಒತ್ತಡ ನಿಯಂತ್ರಣದಲ್ಲಿರುತ್ತದೆ. ಹೊಸ ಸ್ಪರ್ಶವನ್ನು ಪಾದಗಳು ಪಡೆಯುವುದರಿಂದ ಮೈಂಡ್ ರಿಲ್ಯಾಕ್ಸ್ ಆಗುತ್ತದೆ.ರಕ್ತ ಸಂಚಲನೆ ವ್ಯವಸ್ಥೆ ಕ್ರಿಯೆ ಉತ್ತಮಗೊಳ್ಳುತ್ತದೆ. ಸಹನೆ ಹೆಚ್ಚುತ್ತದೆ.
ಇದಕ್ಕಾಗಿ ಎಲ್ಲೆಡೆ ಅಲ್ಲದಿದ್ದರೂ, ಕಚೇರಿಯಲ್ಲಿ, ಮನೆಯಲ್ಲಿ ಚಪ್ಪಲಿ ಇಲ್ಲದಂತೆ ನಡೆಯುವ ಅಭ್ಯಾಸ ಮಾಡಿದರೆ ಉತ್ತಮ ಎನ್ನುವುದು ವರದಿ. ಸಮೀಕ್ಷೆ ಪ್ರಕಾರ ಯಾರು ಪ್ರತಿ ವಾರ ಕನಿಷ್ಠ 2 ಗಂಟೆ ಚಪ್ಪಲಿ ಇಲ್ಲದೆ ನಡೆಯುತ್ತಾರೋ, ಅಂತಹವರಲ್ಲಿ ಹೆಚ್ಚಿನವರಿಗಿಂತ ಆರೋಗ್ಯವಾಗಿ ಮತ್ತು ಕಾಯಿಲೆ ಬರದಂತೆ ಇರುತ್ತಾರೆ.