ಆಹಾರವೇ ಔಷಧಿಯಾಗಲಿ | ಅಡುಗೆ ಮನೆಯೇ ಔಷಧಾಲಯವಾಗಲಿ | ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳು |

January 10, 2024
1:07 PM

ಕಾಲ ಬದಲಾಗುತ್ತಿದ್ದಂತೆ ಹೊಸ ಹೊಸ ವಸ್ತುಗಳ ಆವಿಷ್ಕಾರವಾಯ್ತು(Invention). ನಾವು ನಮ್ಮ ಹಿರಿಯರು ಪಾಲಿಸುತ್ತಿದ್ದ ಕ್ರಮ, ವಸ್ತುಗಳನ್ನು ಬಳಸುವುದನ್ನು ನಿಲ್ಲಿಸಿ ಆಧುನಿಕ ಯುಗಕ್ಕೆ(Modernization) ಒಗ್ಗಿಕೊಂಡೆವು. ಆದರೆ ಆರೋಗ್ಯದ(Health) ಬಗ್ಗೆ ಯೋಚನೆ ಮಾಡಿದವರು ಯಾರು ಇಲ್ಲ. ಈಗ ಅದರ ಅಡ್ಡ ಪರಿಣಾಮಗಳೇನು ಅನ್ನುವ ಬಗ್ಗೆ ಜಾಗೃತಿ(Awareness) ಮೂಡಿಸುವ ಅನಿವಾರ್ಯತೆ ಬಂದಿದೆ. ನಾವು ಎಷ್ಟೇ ವಿದ್ಯಾವಂತರಾಗಿ (Educated), ಜಗತ್ತು ಮುಂದುವರೆದರೂ, ನಮ್ಮ ಹಿರಿಯರು(Elders)ಹಾಕಿಕೊಟ್ಟ ಕೆಲವು ಸಂಪ್ರದಾಯ, ಬಳಕೆ ವಸ್ತುಗಳನ್ನು ಮರೆಯಬಾರದು.

Advertisement
Advertisement

ಎಲ್ಲರೂ ಮಾಡಬೇಕಾದ ಮೊದಲ ಕೆಲಸಗಳ ಪಟ್ಟಿ:

1) ಟೂತ್‌ಪೇಸ್ಟ್ ಬದಲಾವಣೆ ಮಾಡಿ
2) ಕಾಫಿ/ಟೀ ಇಂದ ಕಷಾಯಕ್ಕೆ ಬನ್ನಿ
3) ಮಾನವ ನಿರ್ಮಿತ ಪ್ರಾಣಿ (ನಂದಿನಿ ) ಹಾಲನ್ನು ಬದಲಾವಣೆ ಮಾಡಿ. ದೇಶೀ ಆಕಳ ಹಾಲು ಅಥವಾ ತೆಂಗಿನಕಾಯಿ ಹಾಲು ಬಳಸಿ.
4) ಸಕ್ಕರೆಯಿಂದ ಶುದ್ಧ ಬೆಲ್ಲಕ್ಕೆ ಬನ್ನಿ
5) ನೀರನ್ನು ಬದಲಾವಣೆ ಮಾಡಿ.(ತಾಮ್ರದ ಹಂಡೆಗೆ ನೀರು ಹಾಕಿ ಅದಕ್ಕೆ ನೀರಿನ ಚಕ್ಕೆ ಪುಡಿ ಮತ್ತು ಜೀರಿಗೆ ಹಾಕುವುದು)
6) ಬಿಳಿ ಉಪ್ಪಿನಿಂದ ಸಹಜ ಉಪ್ಪಿಗೆ ಬನ್ನಿ.
7) ರೀಫ಼ೈನ್ಡ್ ಎಣ್ಣೆ ಯಿಂದ ನಿಜವಾದ ಗಾಣದ ಎಣ್ಣೆಗೆ ಬನ್ನಿ.

8) ಅಡುಗೆ ಮನೆಯಲ್ಲಿ ಇರುವ ಪ್ಲಾಸ್ಟಿಕ್ ತೆಗೆದು ಸ್ಟೀಲ್ ಅಥವಾ ಗಾಜಿನ ಬಾಟಲ್ ಗೆ ಬದಲಾವಣೆ ಮಾಡಿ.
9) ಅಲ್ಯೂಮಿನಿಯಂ ಪಾತ್ರೆ ಮತ್ತು ಕುಕ್ಕರ್ ಅನ್ನು ಮನೆಯಿಂದ ಹೊರಹಾಕಿ ಮಣ್ಣಿನ ಮಡಕೆಗಳ ಉಪಯೋಗ ಮಾಡಿ.
10) ನಾನ್ ಸ್ಟಿಕ್ ಪಾತ್ರೆ ಮತ್ತು ಇತರೆ ನಾನ್ ಸ್ಟಿಕ್ ವಸ್ತುಗಳಿಂದ ಕಬ್ಬಿಣದ ಬಾಣಲಿ, ರೊಟ್ಟಿ ಹಂಚು, ದೋಸೆ ಹಂಚು ಮತ್ತು ಪಡ್ಡಿನ ಹಂಚಿಗೆ ಬನ್ನಿ.
11) ಫ಼್ರಿಜ್ ಮತ್ತು ಮೈಕ್ರೋ ಓವನ್ ಉಪಯೋಗ ನಿಲ್ಲಿಸಿ.(ಮಣ್ಣಿನ ಮಡಕೆಯಲ್ಲಿ ಸೊಪ್ಪು ತರಕಾರಿ ಇಡಿ)
12) ಮನೆಯಲ್ಲಿಯೇ ರಾಸಾಯನಿಕ ಮುಕ್ತ ಸೊಪ್ಪು, ತರಕಾರಿ, ಹಣ್ಣು ಮಾಡಿಕೊಂಡು ಸೇವಿಸಿ. (ಹುಣಸೆ ಹಣ್ಣಿನ ನೀರಿನಲ್ಲಿ ನೆನೆಸುವುದು)

13) ಅಡುಗೆ ಮಾಡುವಾಗ ಇಂಗು, ಅರಿಶಿನ ಮತ್ತು ಬೆಲ್ಲ ಉಪಯೋಗ ಮಾಡಿ.
14) ಕಡ್ಡಾಯವಾಗಿ ಕಷಾಯವನ್ನು ಮಣ್ಣಿನ ಮಡಕೆಯಲ್ಲಿ ಮಾಡಿ ಮನೆ ಮಂದಿ ಎಲ್ಲರೂ ಸೇವಿಸಿ.
15) ಮನೆ ಮಂದಿ ಎಲ್ಲರೂ ಒಟ್ಟಿಗೆ ಕೆಳಗೆ ಕುಳಿತು ಊಟ, ಉಪಹಾರ ಮಾಡಿ.
16) ಉಟದ ನಂತರ ಎಲ್ಲರೂ ತಾಂಬೂಲ ಸೇವಿಸಿ.
17) ಪಾತ್ರೆಗಳನ್ನು ತೊಳೆಯಲು ಕಡಲೆ ಹಿಟ್ಟು ಮತ್ತು ಸೀಗೇಕಾಯಿ ಪುಡಿ ಬಳಸಿ.
18) ಸ್ನಾನಕ್ಕೆ ಸೋಪಿನ ಬದಲು ಸ್ನಾನದ ಚೂರ್ಣ ಬಳಸಿ ಸ್ನಾನದ ನಂತರ ಸ್ವಲ್ಪ ಶುದ್ಧ ಕೊಬ್ಬರಿ ಎಣ್ಣೆ ಮೈಗೆ ಹಚ್ಚಿ ಚೆನ್ನಾಗಿ ತಿಕ್ಕಿ ಬಟ್ಟೆಯನ್ನು ಧರಿಸಿ.

19) ಪ್ರತಿ ದಿನವೂ ಯೋಗಾಸನ ಮತ್ತು ಪ್ರಾಣಾಯಾಮ ಮಾಡಿ.
20) ದಿನಕ್ಕೊಮ್ಮೆ ಒಂದು ಗಂಟೆ ವಾಕಿಂಗ್ ಮಾಡಿ.
21) ಆಗಾಗ, ಬಳಸಬಾರದು ಮತ್ತು ಬಳಸಬೇಕು ಎಂದು ಬರೆದುಕೊಂಡ ನೋಟ್ಸ್ ಗಮನಿಸಿ.
22) ನಾನ್ ವೆಜ್ ತಿನ್ನಬೇಡಿ.
23) ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಊಟದ ಡಬ್ಬಿ ಯಿಂದ ಸ್ಟೀಲ್ ಬಾಟಲ್ ಮತ್ತು ಸ್ಟೀಲ್ ಟಿಫಿನ್ ಬಾಕ್ಸ್ ಗೆ ಬನ್ನಿ.
24) ಬೆಳಗ್ಗೆ ಬಲಭಾಗದಲ್ಲಿ ಮಲಗಿ ಏಳುವುದು (ಶಿಶು ವಿಶ್ರಾಮಾಸನ) ರಾತ್ರಿ ಎಡಭಾಗದಲ್ಲಿ ಮಲಗುವುದನ್ನು ಮನೆ ಮಂದಿ ಎಲ್ಲರೂ ಅನುಸರಿಸಿ.

25) ಬೆಳಗ್ಗೆ ಎದ್ದೊಡನೆ ಉಷಃಪಾನ ಮಾಡಿ, ರಾತ್ರಿ ಮಲಗುವ ಮುನ್ನ ಒಂದು ಕಪ್ ನೀರು ಕುಡಿದು 15 ರಿಂದ 20 ನಿಮಿಷಗಳ ಕಾಲ ವಾಕಿಂಗ್ ಮಾಡಿ ನಂತರ ಮಲಗಿ.
26) ಹೆಚ್ಚಾಗಿ ಖಾದಿ ಬಟ್ಟೆಗಳನ್ನು ಬಳಸಿ ಆರೋಗ್ಯ ಪಡೆಯಿರಿ ಹಾಗೂ ಸ್ವದೇಶಿ ಚಿಂತನೆ ಬೆಳೆಸಿ.
27) ಅಗ್ನಿಹೋತ್ರ ಮಾಡುವುದನ್ನು ಮರೆಯಬಾರದು

ಮೂಲ : ಡಿಜಿಟಲ್‌ ಮೀಡಿಯಾ

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್
ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
January 30, 2026
7:27 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror