ವನ್ಯ ಜೀವಿಗಳಿಗೆ ಸಂಬಂಧ ಪಟ್ಟ ವಸ್ತುಗಳು ಮನೆಯಲ್ಲಿ ಇಟ್ಟುಕೊಳ್ಳುವ ಬಗ್ಗೆ ಸರ್ಕಾರ ಬೇಗ ಕಾನೂನು ರೂಪಿಸಲಿ | ಶಾಸಕ ಬಿ.ಸುರೇಶ್ ಗೌಡ

December 15, 2023
11:55 AM

ರಾಜ್ಯದಲ್ಲಿ(state) ಅನೇಕರು ಪೂರ್ವಜರ(ancestors) ಕಾಲದಿಂದಲೂ ಕೂಡ ಕೆಲವು ಮನೆಗಳಲ್ಲಿ ಇಂದಿಗೂ ಜಿಂಕೆ ಕೊಂಬು, ಕಾಡುಕೋಣದ ಕೊಂಬು ಮತ್ತಿತರ ವನ್ಯಜೀವಿಗಳ ಪರಿಕರಗಳನ್ನು(deer antlers, wild antler horns ) ಮನೆಗಳ ಗೋಡೆ ಮತ್ತು ಕಂಬಗಳಲ್ಲಿ ಅಳವಡಿಸಿರುವುದು ಕೇಳಿ ಬಂದಿದೆ. ಇದರಿಂದ ಇತ್ತೀಚೆಗೆ ಹುಲಿ ಉಗುರು ಪ್ರಕರಣ(tiger claw case) ಬೆಳಕಿಗೆ ಬಂದಾಗಿನಿಂದ ಈ ವಿಚಾರವಾಗಿ ಜನ ಭಯಭೀತರಾಗಿದ್ದಾರೆ. ಆದ್ದರಿಂದ ಮನೆಗಳಲ್ಲಿರುವ ಜಿಂಕೆ ಕೊಂಬು, ಕಾಡುಕೋಣದ ಕೊಂಬುಗಳನ್ನು ಸಕ್ರಮಗೊಳಿಸುವ ಬಗ್ಗೆ ಸರ್ಕಾರದ ಗಮನದಲ್ಲಿದೆಯೇ? ಎಂಬ ಕುರಿತಂತೆ ನಿಯಮ 73 ರಡಿ(Rule 73) ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಮಂಗಳವಾರ ಸರ್ಕಾರದ ಗಮನ ಸೆಳೆದರು.

Advertisement
Advertisement
Advertisement

ಮಾನವ-ಪ್ರಾಣಿ ಸಂಘರ್ಷ ಗಣಿಗಾರಿಕೆ ನಿಯಂತ್ರಣಕ್ಕೆ ಅಧಿವೇಶನದಲ್ಲಿ ಸುರೇಶ್ ಗೌಡ ಒತ್ತಾಯ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡ ಮಾತನಾಡಿ ಈ ಬಗ್ಗೆ ಗಮನ ಸೆಳೆದರು. ಈ ಹಿಂದೆ ಈ ರೀತಿಯ ಪ್ರಕರಣಗಳಲ್ಲಿ ಪರಿಕರಗಳನ್ನು ಸರ್ಕಾರಕ್ಕೆ ವಾಪಸ್ಸು ನೀಡಲು ಮತ್ತು ಸಕ್ರಮೀಕರಣ ಗೊಳಿಸಿಕೊಳ್ಳಲು ಸಾಕಷ್ಟು ಸಮಯಾವಾಕಾಶ ನೀಡಿತ್ತಾದರೂ ಕೂಡಾ ಕಾನೂನುಗಳ ಅರಿವಿನ ಕೊರತೆಯಿಂದ ವನ್ಯಪ್ರಾಣಿಗಳ ಅಂಗಾಂಗ ಮತ್ತು ಟ್ರೋಫಿಗಳನ್ನು ಘೋಷಿಸಿಲ್ಲ ಎಂದು ತೋರುತ್ತದೆ. ವನ್ಯ ಜೀವಿಗಳ ಅಂಗಾಂಗಗಳನ್ನು ಹೊಂದಿರುವುದರಿಂದ ಆಗುವ ಪ್ರಯೋಜನಗಳ ಕುರಿತಾಗಿರುವ ತಪ್ಪು ನಂಬಿಕೆ ಇತ್ಯಾದಿಗಳಿಂದ ಇನ್ನೂ ಕೆಲವು ಜನರು ತಮ್ಮಲ್ಲಿರುವ ವನ್ಯ ಜೀವಿಗಳ ಅಂಗಾಂಗ ಮತ್ತು ಟ್ರೋಫಿಗಳನ್ನು ಘೋಷಿಸಿಕೊಳ್ಳದೆ ಇರುವುದು ಗಮನಕ್ಕೆ ಬಂದಿರುತ್ತದೆ. ರಾಜ್ಯದಲ್ಲಿ ಸಮಾಜದ ವಿವಿಧ ಸ್ಥಳಗಳ ಜನರು ಹುಲಿ ಮತ್ತು ಚಿರತೆ ಉಗುರುಗಳು, ಕಾಡುಕೋಣದ ಕೊಂಬು, ಆನೆಯ ಬಾಲ, ದಂತ, ಮತ್ತು ಕೂದಲು ಇತ್ಯಾದಿ ಪ್ರಾಣಿಗಳ ವಸ್ತುಗಳನ್ನು ಹೊಂದಿರುವುದನ್ನು ಗಮನಿಸಿದ ಹಲವಾರು ಪ್ರಕರಣಗಳು ಗಮನಕ್ಕೆ ಬಂದಿವೆ ಮತ್ತು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇದರಿಂದ ಜನ ಭಯನೀತರಾಗಿದ್ದಾರೆ. ಆದ್ದರಿಂದ ಇದರ ಬಗ್ಗೆ ಸರ್ಕಾರ ಕೂಡಲೇ ಒಂದು ಕಾನೂನು ತಂದು ರಾಜ್ಯದ ಜನರ ರಕ್ಷಣೆಗೆ ಧಾವಿಸಬೇಕು ಎಂದು ಸುರೇಶಗೌಡ ಆಗ್ರಹಿಸಿದರು.

Advertisement

ವನ್ಯಜೀವಿ ವಸ್ತುಗಳನ್ನು ಇಟ್ಟುಕೊಳ್ಳಲು ಅನುಮತಿ ನೀಡಿ: ಸರ್ಕಾರಕ್ಕೆ ಶಾಸಕ ರಾಜೇಗೌಡ ಮನವಿ ಅಲ್ಲದೆ ವನ್ಯಜೀವಿ (ಸಂರಕ್ಷಣಾ) ಅಧಿನಿಯಮ 1972ರ ಸೆಕ್ಷನ್ 44 ರನ್ವಯ ಇಂತಹ ಟ್ರೋಫಿಗಳನ್ನು ಹೊಂದುವುದನ್ನು ನಿಷೇಧಿಸಲಾಗಿದೆ. ಆದರೆ ವನ್ಯಜೀವಿ (ಸಂರಕ್ಷಣಾ) ಅಧಿನಿಯಮ 1972ರ ಸೆಕ್ಷನ್ 64 ರನ್ವಯ ರಾಜ್ಯ ಸರ್ಕಾರಕ್ಕೆ ನೀಡಿರುವ ಅಧಿಕಾರದ ಅನ್ವಯ ಈ ಹಿಂದೆ ಒದಗಿಸಿದ ಅವಕಾಶಗಳಲ್ಲಿ ಅಂಗಾಂಗ ಮತ್ತು ಟ್ರೋಫಿಗಳ ಘೋಷಣೆಗಳನ್ನು ಮಾಡಿಕೊಂಡಿರದ ಜನರಿಗೆ ರಾಜ್ಯ ಸರ್ಕಾರದ ಆಸ್ತಿಯಾಗಿರುವ ವನ್ಯಜೀವಿ ಅಂಗಾಂಗ, ಟ್ರೋಫಿಗಳನ್ನು ರಾಜ್ಯ ಸರ್ಕಾರಕ್ಕೆ ಆರ್ಪಿಸಲು ಕಾಲಾವಕಾಶವನ್ನು ಒದಗಿಸಲು ನಿಯಮಗಳನ್ನು ರಚಿಸುವ ಕುರಿತು ಸರ್ಕಾರದ ಹಂತದಲ್ಲಿ ಪರಿಶೀಲನೆಯಲ್ಲಿರುತ್ತದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರು ಸದನಕ್ಕೆ ತಿಳಿಸಿದರು.

In the state, even from the time of ancestors, even today in some houses, it is heard that deer antlers, wild antler horns and other wildlife accessories are installed on the walls and pillars of the houses. Because of this, since the tiger claw case came to light recently, people are scared about this issue. So is the government looking at legalizing deer antlers and wild antlers in homes? B. Suresh Gowda, Rural MLA from Tumkur, drew the attention of the government on Tuesday regarding Rule 73.

– ಅಂತರ್ಜಾಲ ಮಾಹಿತಿ

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ  ಮನವಿ
November 21, 2024
7:32 PM
by: The Rural Mirror ಸುದ್ದಿಜಾಲ
ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ದೆಹಲಿಯಲ್ಲಿ ಲಭ್ಯ | 2.5 ಲಕ್ಷ ಲೀಟರ್ ಹಾಲು ದೆಹಲಿಗೆ ಪೂರೈಸಲು ತೀರ್ಮಾನ |
November 21, 2024
7:25 PM
by: ದ ರೂರಲ್ ಮಿರರ್.ಕಾಂ
ಹುಣಸೆ ಹಣ್ಣು ಸಂರಕ್ಷಣೆ, ಮಾರಾಟದ ತರಬೇತಿ ಕಾರ್ಯಾಗಾರ
November 21, 2024
7:09 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror