ಅಡಿಕೆ ಎಲೆಚುಕ್ಕಿ ರೋಗದ ದುಷ್ಪರಿಣಾಮ | ಅಡಿಕೆ ಹಾಳೆ ತಟ್ಟೆ ಉದ್ಯಮದ ಮೇಲೆ ಬೀರದಿರಲಿ ನಕಾರಾತ್ಮಕ ಪರಿಣಾಮ |

November 9, 2023
11:56 AM
ಯಾವುದೇ ಕಾರಣಕ್ಕೂ ಅಡಿಕೆ ಎಲೆಚುಕ್ಕಿ ರೋಗದ ಕರಿನೆರಳು ಅಡಿಕೆ ಹಾಳೆ ತಟ್ಟೆ ಉದ್ಯಮದ ಮೇಲೆ ಬೀಳದಿರಲಿ. ಹೀಗಾಗಿ ಹಾಳೆತಟ್ಟೆ ರಫ್ತು ಉದ್ಯಮದ ಎಚ್ಚರಿಕೆ ವಹಿಸಬೇಕಿದೆ.

ನಿಜ…, ಅಡಿಕೆ ಹಾಳೆ ತಟ್ಟೆಗೂ ಈ ಎಲೆಚುಕ್ಕಿಶಿಲೀಂದ್ರಕ್ಕೆ ಸಿಂಪಡಣೆ ಮಾಡುವ ಔಷಧಕ್ಕೂ ಯಾವುದೇ ಸಂಬಂಧವಿಲ್ಲ.
ಏಕೆಂದರೆ ಅಡಿಕೆ ಹಾಳೆ ತಟ್ಟೆ ತಯಾರಕರು ಅಡಿಕೆ ಹಾಳೆಯನ್ನು ಬಯಲು ಸೀಮೆಯ ಅಡಿಕೆ ತೋಟದಿಂದ ಆಮದು ಮಾಡಿ ಕೊಳ್ಳುತ್ತಾರೆ. ಅಲ್ಲಿನ ಹಾಳೆ ಸ್ವಚ್ಛ, ಶುಭ್ರ, ಫಂಗಸ್ ರಹಿತ (ಮಳೆ ಕಡಿಮೆ ಕಾರಣಕ್ಕೆ ಅಲ್ಲಿನ ಹಾಳೆಯಲ್ಲಿ ಫಂಗಸ್ ಇರೋಲ್ಲ) , ತೆಳು ಗಾತ್ರ ಮತ್ತು ಬಯಲು ಸೀಮೆಯ ಅಡಿಕೆ ಬೆಳೆ ಪ್ರದೇಶದಲ್ಲಿ ಅಡಿಕೆ ಹಾಳೆ ಯನ್ನು ಸಂಗ್ರಹಿಸಿ ಕ್ಯಾಂಟರ್ ನಲ್ಲಿ ತುಂಬಿ ಹಾಳೆ ತಟ್ಟೆ ತಯಾರಿಕಾ ಸಂಸ್ಥೆಗಳಿಗೆ ಒದಗಿಸುವ ವ್ಯವಸ್ಥೆ ಇದೆ.

Advertisement

ಇದೆಲ್ಲಾ ಕಾರಣಕ್ಕೆ ಮಲೆನಾಡು ಕರಾವಳಿಯ ಅಡಿಕೆ ಹಾಳೆ ತಟ್ಟೆ ಅಡಿಕೆ ಹಾಳೆ ಕಚ್ಚಾ ವಸ್ತುಗಳಿಗಾಗಿ ತಯಾರಕರು ಸ್ಥಳೀಯ ಅಡಿಕೆ ತೋಟಕ್ಕೆ ನೆಚ್ಚಿಕೊಂಡಿಲ್ಲ. ಅಡಿಕೆ ಹಾಳೆ ತಟ್ಟೆ ತಯಾರಿಸುವಾಗ ಅಡಿಕೆ ಹಾಳೆಯನ್ನು ಹೈ ಕಂಪ್ರೆಷರ್ ವಾಟರ್ ವಾಷ್ ಯಂತ್ರ ದಲ್ಲಿ ಚೆನ್ನಾಗಿ ತೊಳೆಯುತ್ತಾರೆ‌.

ಈ ಹಾಳೆ ತಟ್ಟೆ ತಯಾರಾಗಲು ಅತ್ಯಂತ ಹೆಚ್ಚಿನ ಉಷ್ಣತೆ ಯ ಡೈ ನಲ್ಲಿ ಕಾದು ಹಾಳೆ ತಟ್ಟೆ ಆಕಾರಕ್ಕೆ  ಆಗುತ್ತದೆ.
ಒಂದು ವೇಳೆ ಈ ಹಾಳೆಯಲ್ಲಿ ಈ ಯಾವುದೇ ಶಿಲೀಂದ್ರ ವೂ ಅದಕ್ಕೆ ಔಷಧ ಸಿಂಪಡಣೆ ಮಾಡಿದ್ದರೂ ಸುಟ್ಟು ಹೋಗಿರುತ್ತದೆ…ಈ ಬಗ್ಗೆ ಗ್ರಾಹಕರು ಭಯ ಪಡುವುದು ಬೇಡ ಮತ್ತು ಅಡಿಕೆ ತೋಟಕ್ಕೆ ಎಲೆಚುಕ್ಕಿ ಬಾಧಿತವಾಗಿದ್ದರೆ ಅಂತಹ ತೋಟದಲ್ಲಿ ಉತ್ತಮ ಹಾಳೆಯೂ ದೊರೆಯದು.

ಅಡಿಕೆ ಹಾಳೆತಟ್ಟೆ ತಯಾರಿಸುವಾಗ ಉಳಿದ ಅಡಿಕೆ ಹಾಳೆ ಚೂರನ್ನು ಪುಡಿ ಮಾಡಿ ಜಾನುವಾರುಗಳಿಗೆ ಮೇವಾಗಿಯೂ ಬಳಸಲಡ್ಡಿಯಿಲ್ಲ ಮತ್ತು ಅಡಿಕೆ ಹಾಳೆ ತಟ್ಟೆ ಉದ್ಯಮದ ಮಾಲಿಕರು ಕಡ್ಡಾಯವಾಗಿ ತಮ್ಮ ಉದ್ಯಮಕ್ಕೆ ಬರುವ ಕಚ್ಚಾ ವಸ್ತುಗಳ ಗುಣಮಟ್ಟದ ಬಗ್ಗೆ ಗಮನಹರಿಸಬೇಕಿದೆ.

ಅಡಿಕೆ ಹಾಳೆ ತಟ್ಟೆ ಉದ್ಯಮ ಕ್ಕೆ ಈಗಿರುವ ಮತ್ತು ಭವಿಷ್ಯದ ಮಾರುಕಟ್ಟೆ ಮತ್ತಷ್ಟು ಉಜ್ವಲವಾಗಲಿ. ಪರಿಸರಕ್ಕೆ ಈ ಹಾಳೆ ತಟ್ಟೆ ಯಿಂದ ಬಹಳ ದೊಡ್ಡ ಕೊಡುಗೆ ಇದೆ. ಈ ಉದ್ಯಮ ಚೆನ್ನಾಗಿ ಮುಂದುವರೆಯಲಿ…

ವಿದೇಶಕ್ಕೆ ರಫ್ತು ಮಾಡುವ ಹಾಳೆ ಉತ್ಪನ್ನ ಗಳ ತಯಾರಕರೂ ಈ ಗುಣಮಟ್ಟದ ಬಗ್ಗೆ ಗಮನ ಹರಿಸುವುದು ಭವಿಷ್ಯದ ದೃಷ್ಟಿಯಿಂದ ಆರೋಗ್ಯಕರ. ಯಾವುದೇ ಕಾರಣಕ್ಕೂ ಅಡಿಕೆ ಎಲೆಚುಕ್ಕಿ ರೋಗದ ಕರಿನೆರಳು ಅಡಿಕೆ ಹಾಳೆ ತಟ್ಟೆ ಉದ್ಯಮದ ಮೇಲೆ ಬೀಳದಿರಲಿ.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

ಇದನ್ನೂ ಓದಿ

ಮಣಿಪುರದಲ್ಲಿ 68 ಟನ್ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಡಿಕೆ ವಶ
April 13, 2025
7:42 AM
by: The Rural Mirror ಸುದ್ದಿಜಾಲ
ಅಡುಗೆ ಮನೆ ‘ಬೇಯಿಸುವ ಕೋಣೆ’ಯಲ್ಲ!
April 13, 2025
7:03 AM
by: ನಾ.ಕಾರಂತ ಪೆರಾಜೆ
2025ರಲ್ಲಿ ಶನಿ ತಮ್ಮ ನಕ್ಷತ್ರ ಅಥವಾ ರಾಶಿಯಲ್ಲಿ ಅಧೋಗತಿಯ ಚಲನೆ
April 13, 2025
6:38 AM
by: ದ ರೂರಲ್ ಮಿರರ್.ಕಾಂ
ತಾಪಮಾನ ಹೆಚ್ಚಳ | ಬನ್ನೇರುಘಟ್ಟ ಉದ್ಯಾನವನದಲ್ಲಿ ಪ್ರಾಣಿಗಳಿಗೆ ತಂಪಾದ ಆಹಾರ ಪದಾರ್ಥ |
April 12, 2025
9:16 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group