ಭಾರತದ(India) ಬೆನ್ನೆಲುಬುಗಳಾದ ಹಳ್ಳಿಗಳನ್ನು(Village) ಸ್ವಯಂಪೂರ್ಣ, ಸ್ವಾವಲಂಬಿಯಾಗಿ ಮಾಡಿ ಸಬಲೀಕರಿಸಿ(self-sufficient and empowering), ಎಂದೆಂದಿಗೂ ವಿಕಸನಗೊಳ್ಳುವ ಹಾಗೆ ಮಾಡೋಣ. ಹಲವಾರು ವರ್ಷಗಳಿಂದ ರಾಸಾಯನಿಕ ಗೊಬ್ಬರಗಳ(Chemical Fertilizer) ಉಪಯೋಗದಿಂದ, ಫಲವತ್ತತೆಯನ್ನು ಕಳೆದುಕೊಂಡ ಭೂಮಿಯನ್ನು(barren land), ವಿಷ ಸಿಂಪಡಣೆಯಿಂದ ಕಲುಷಿತಗೊಂಡಿರುವ/ಬೋರ್ ವೆಲ್ ನೀರನ್ನು(Boar well water) , ವಿಷಯುಕ್ತ ಗಾಳಿಯನ್ನು(Poison air), ಜಾಗತಿಕ ತಾಪಮಾನ(Global Warming) ಏರಿಕೆಯನ್ನು ತಡೆದು, ಸಹಜತೆಗೆ ತರಬೇಕಿದೆ.
ವಿಷಮುಕ್ತ, ರೋಗಮುಕ್ತ ಹಾಗೂ ಆತ್ಮನಿರ್ಭರ ಭವ್ಯ ಭಾರತ ನಿರ್ಮಾಣಕ್ಕಾಗಿ ಭೂಮಿ ಸುಪೋಷಣ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 100 ಕೋಟಿ ಭೂಮಿ ಸುಪೋಷಣ ಬಾಲ್ಸ್ ಬೃಹತ್ ಸಂಕಲ್ಪವನ್ನು ರಾಧಸುರಭಿ ಗೋಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ, ಮಂಗಳೂರು ಇವರು ಹಮ್ಮಿಕೊಂಡಿದ್ದಾರೆ. ಈ ಭೂಮಿ ಸುಪೋಷನ ಬಾಲ್ಸ್ ಅಂದರೇನು ಅನ್ನುವ ಬಗ್ಗೆ ಮುಂದೆ ಓದಿ..
ಈ ಪರಿಸ್ಥಿತಿ ಹೇಗೆ ಉದ್ಭವವಾಯಿತು? : ಸೂರ್ಯ, ಚಂದ್ರ, ಆಕಾಶ, ಅಗ್ನಿ, ವಾಯು, ಭೂಮಿ, ನೀರು ಮತ್ತು ಮನುಷ್ಯ ಇವು ಸೇರಿ ಅಷ್ಟ ಪ್ರಕೃತಿಗಳು. ಇವುಗಳಲ್ಲಿ ಯಾವುದರಲ್ಲಾದರೂ ವಿಷಮತೆ ಉಂಟಾದರೆ ಅದು ನೇರವಾಗಿ ನಮ್ಮ ಸೂಕ್ಷ್ಮಪ್ರಜ್ಞೆಯಲ್ಲಿ ಪ್ರತಿಬಿಂಬಿತವಾಗಿ ನಮ್ಮ ಚಿಂತನೆ ಮತ್ತು ಸಿದ್ದಾಂತಗಳನ್ನು ನಿಕೃಷ್ಟಗೊಳಿಸುತ್ತದೆ.
ನಾವೆಲ್ಲ ಸೇರಿ ಇದನ್ನು ಹೇಗೆ ಸರಿಪಡಿಸಬಹುದು? : ಪ್ಲಾಸ್ಟಿಕ್, ರಾಸಾಯನಿಕ ಗೊಬ್ಬರ, ವಿಷಯುಕ್ತ ಕೀಟ ನಾಶಕಗಳನ್ನು ಬಳಸದೆ; ಕೇವಲ ಗವ್ಯ ಉತ್ಪನ್ನ ಮತ್ತು ಸಾವಯವ ಆಹಾರ ಪದಾರ್ಥಗಳನ್ನು ಮಾತ್ರ ಉಪಯೋಗಿಸಬೇಕು. ಭಾರತದಾದ್ಯಂತ ಗ್ರಾಮ ವಿಕಾಸದಲ್ಲಿ 30 ವರ್ಷಗಳಿಗಿಂತಲೂ ಅಧಿಕ ಅನುಭವ ಇರುವ ನಮ್ಮ ತಂಡ ಇದಕ್ಕೆ ಸೂಕ್ತ ಪರಿಹಾರವನ್ನು ಸೂಚಿಸುತ್ತದೆ. ಅದು ಪ್ರಕೃತಿಯನ್ನು, ಭೂಮಿಯನ್ನು ಫಲವತ್ತಾಗಿ ಮಾಡುವುದಲ್ಲದೆ ನಮ್ಮ ಕಲುಷಿತ ಪ್ರಜ್ಞೆಯನ್ನು ಶುದ್ಧೀಕರಣ ಗೊಳಿಸುತ್ತದೆ.
ಪರಿಹಾರ “ಚೆಂಡು ಎಸೆಯಿರಿ, ಜಗತ್ತನ್ನು ಉಳಿಸಿರಿ” ಇದು ಸುವರ್ಣ ಘೋಷಣೆ : ಈ ಚೆಂಡು ವಿಶೇಷ ಶಕ್ತಿಯುಳ್ಳ ರತ್ನ. ಅದು ಉತ್ಪಾದಕರ ಉದ್ದೇಶವನ್ನು ಪೂರೈಸುವುದು. ಅದರ ತಯಾರಿಯ ಮೂಲರಹಸ್ಯ ನಮ್ಮ ವೈದಿಕ ಪದ್ಧತಿಯಾದ ಕಾರಣ ಅದರ ಕಾರ್ಯಕ್ಷಮತೆಯಲ್ಲಿ ಯಾವುದೇ ಕೊರತೆ/ಲೋಪ ಇಲ್ಲ. ಗೋಮೂತ್ರ, ಗೋಮಯ, ಗೋಕೃಪಾಮೃತ, ಗೋನಂದಾಜಲ ಹಾಗೂ ಗಿಡಮೂಲಿಕೆಗಳನ್ನು, ವೈದಿಕ ವಿಧಿಯಲ್ಲಿ ಮಿಶ್ರಣ ಮಾಡುವುದರಿಂದ ಅದರಲ್ಲಿನ ಸೂಕ್ಷ್ಮ ಜೀವಾಣುಗಳು ಭೂಮಿಯನ್ನು ಪುನಶ್ಚೇತನ ಗೊಳಿಸುತ್ತದೆ. ಒಣ ಅಥವಾ ಶುಷ್ಕ ಭೂಮಿಯಲ್ಲಿ ಈ ಜೀವಾಣುಗಳು ಸಮಾಧಿ ಸ್ಥಿತಿಗೆ ಹೋಗುತ್ತವೆ. ಮಳೆ ಅಥವಾ ತೇವಾಂಶಗಳಿಂದ ಕೂಡಿದ ವಾತಾವರಣದಲ್ಲಿ, 20 ವರ್ಷಗಳ ನಂತರವೂ ಪುನಃ ಕ್ರಿಯಾಶೀಲವಾಗುತ್ತವೆ.
ಆ ಜೀವಾಣುಗಳು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿ ಗಿಡಮರಗಳು ಚೆನ್ನಾಗಿ ಬೆಳೆಯುವಂತೆ ಮಾಡುತ್ತವೆ. ಮರದ ಬೇರುಗಳು ಮಣ್ಣನ್ನು ತಡೆಹಿಡಿಯುತ್ತವೆ. ಮರ ಗಿಡಗಳಿಂದ ತಾಜಾ ಶುದ್ಧ ಗಾಳಿಯು ಲಭಿಸುತ್ತದೆ. ದೇಶಿ ಗೋವನ್ನು ಪಾಲನೆ ಮಾಡುವ ರೈತರಿಗೆ, ಗೋಮೂತ್ರ, ಸೆಗಣಿ ಮೊದಲಾದ ಕಚ್ಚಾವಸ್ತುಗಳಿಗೆ ಬೇಡಿಕೆ ಬರುತ್ತದೆ. ನಾವೂ ರೈತರಿಂದ ಗೋಮೂತ್ರ ಲೀಟರ್ ಗೆ 20 ರೂಪಾಯಿ, ಗೋಮಯ ಕೆ.ಜಿ ಗೆ 50 ರೂಪಾಯಿ ಮೌಲ್ಯ ನೀಡಿ ಖರೀದಿ ಮಾಡುತ್ತೇವೆ. ಮನೆಗಳಲ್ಲೇ ಚೆಂಡು ತಯಾರಿ ಮಾಡುವ ತರಬೇತಿ ನೀಡಿ ಅದನ್ನು ಖರೀದಿ ಮಾಡುವ ಮೂಲಕ ಗೃಹ ಉದ್ಯೋಗ ಮತ್ತು ಮಹಿಳೆಯರ ಸಬಲೀಕರಣ ಮಾಡಬಹುದು. ನಗರಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟಲು ಸಾಧ್ಯ.
ಡಿ.ಎ.ಪಿ, ಯೂರಿಯಾ, ಕೀಟನಾಶಕ, ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸದೆ, ಗೋ ಆಧಾರಿತ ಸ್ವಾವಲಂಬಿ ಕೃಷಿಯನ್ನು ಮಾಡಿ ಬದುಕುವ ಮಾರ್ಗವನ್ನು ಹಳ್ಳಿಯ ಜನರಿಗೆ ತರಬೇತಿ ಕೊಡುತ್ತೇವೆ. ಇದರಿಂದ ಪ್ರಕೃತಿಯ ಸುಪೋಷಣೆಯಾಗುತ್ತದೆ, ಗ್ರಾಮ, ನಗರದಲ್ಲಿ ವಾಸಿಸುವ ಜನರು ವಿಷರಹಿತವಾದ, ಅಮೃತ ಸಮಾನ, ಗುಣಮಟ್ಟದ ಆಹಾರ ಪದಾರ್ಥಗಳನ್ನು ಪಡೆಯುತ್ತಾರೆ.
ರಾಷ್ಟ್ರೀಯ ಗೋ ಸಂಸ್ಥಾನ ವತಿಯಿಂದ ಈ ಮಹತ್ತರ ಕೆಲಸವನ್ನು ಕಳೆದ 25-30 ವರ್ಷಗಳಿಂದ ಮಾಡುತ್ತಿದ್ದಾರೆ. ಇವರ ಮೂಲ ಅಜೆಂಡಾ ಒಣರಕ್ಷಾ, ಜಲರಕ್ಷಾ, ಪಶುರಕ್ಷಾ, ಭೂರಕ್ಞಾ ಹಾಗೂ ಧರ್ಮ ರಕ್ಷಾ. ನೆಲ, ಜಲ ಭೂಮಿ, ಗಿಡಮರಗಳ ರಕ್ಷಣೆಗಾಗಿ, ಮಣ್ಣಿನ ಪಲವತ್ತತೆಯನ್ನು ಮರು ಹೂರಣ ಮಾಡುವ ಪ್ರಯತ್ನದ ಫಲವಾಗಿ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಹಾಗೆ ಚೆಂಡನ್ನು ನೀವಾಗಿ ತಯಾರಿಸುವ ತರಬೇತಿಯನ್ನು ನೀಡುತ್ತಾರೆ. ಅಲ್ಲದೆ ಕೇವಲ 5 ರೂಪಾಯಿಗೆ ಅವರೇ ನಿಮ್ಮಗೆ ಚೆಂಡು ತಯಾರಿಸಿ ನೀಡುತ್ತಾರೆ. ಅದನ್ನು ತಮ್ಮ ಭೂಮಿಗಳಿಗೆ ಹಾಕುವ ಮುಖಾಂತರ ನಿಮ್ಮ ಭೂಮಿಯ ಫಲವತ್ತತೆಯನ್ನು ಮರಳಿ ಪಡೆಯಬಹುದು.
ಒಳ್ಳೆಯ ಆಹಾರ, ಒಳ್ಳೆಯ ಜೀವನ : ಆಯುರ್ವೇದದ ಪ್ರಕಾರ ಒಳ್ಳೆಯ ಆಹಾರವು ನಮ್ಮ ಪ್ರಜ್ಞೆಯ ಮೇಲೆ ವಿಶೇಷವಾದ ಪರಿಣಾಮವನ್ನು ಬೀರುತ್ತದೆ. ಮರಗಳ ಮೂಲಕ ಒಳ್ಳೆಯ ವಾತಾವರಣ, ಶುದ್ಧ ಆಮ್ಲಜನಕ ಲಭಿಸುತ್ತದೆ. ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಇದು ಅತ್ಯಗತ್ಯ. ಇದರಿಂದ ಜಗತ್ತಿನ ಮುಂದಿರುವ ಎಲ್ಲಾ ಸಮಸ್ಯೆಗಳನ್ನು ನಾವು ಪರಿಹರಿಸಬಹುದು.
ಈ ಚೆಂಡು ಎಲ್ಲಾ ಸಮಸ್ಯೆಗಳಿಗೆ ಪರಿಹಾರ, ಎಂದು ಎಲ್ಲರೂ ದೊಡ್ಡ ಸ್ವರದಲ್ಲಿ ಘೋಷಣೆ ಮಾಡುವ ಅಗತ್ಯ ಇದೆ. ಈ ಚೆಂಡುಗಳನ್ನು ಜನ್ಮದಿನ, ವಿವಾಹ, ಹಬ್ಬಗಳು, ವಿಶೇಷ ದಿನಗಳಲ್ಲಿ ತೋಟದಲ್ಲಿ/ಭೂಮಿಗೆ/ರಸ್ತೆ ಬದಿಯಲ್ಲಿ ಎಸೆಯಬಹುದು. ತಾರಸಿ ತೋಟ, ಹೂ-ತರಕಾರಿ ಗಿಡಗಳ ಬುಡದಲ್ಲಿ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ 8296185877; 9538857077; 79757799301.