Advertisement
ಸುದ್ದಿಗಳು

ಶುದ್ಧತೆಯ ಮೂಲಕ ಶಾಶ್ವತ ಸುಖದತ್ತ ಸಾಗೋಣ : ರಾಘವೇಶ್ವರ ಶ್ರೀ ಕರೆ

Share

ಸ್ವಭಾಷೆ, ಸ್ವಭೂಷಾ, ಸ್ವದೇಶಿ ಚಿಂತನೆಯ ಮೂಲಕ ನಮ್ಮ ಜೀವನ, ಭಾಷೆ, ಹಬ್ಬ- ಆಚರಣೆಗಳನ್ನು ಶುದ್ಧೀಕರಿಸಿಕೊಂಡು ಶಾಶ್ವತ ಸುಖದತ್ತ ಮುಖ ಮಾಡೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.

Advertisement
Advertisement

ಅಶೋಕೆಯಲ್ಲಿ ಸ್ವಭಾಷಾ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು 50ನೇ ದಿನವಾದ ಗುರುವಾರ ಶ್ಯಾಮಸೂರ್ಯ ಮುಳಿಗದ್ದೆ ಕುಟುಂಬದವರಿಂದ ಸರ್ವಸೇವೆ ಸ್ವೀಕರಿಸಿ ಗುರಿಕ್ಕಾರರ ಸಮಾವೇಶದಲ್ಲಿ ಆಶೀರ್ವಚನ ಅನುಗ್ರಹಿಸಿದರು.

ಗುರು- ಗಣಪತಿಯ ಸಾನ್ನಿಧ್ಯ ಜತೆಜತೆಗೆ ಸಿಗುವುದು ಅಪರೂಪ. ಗುರು ನಮ್ಮ ಬದುಕಿಗೆ ದಾರಿ ತೋರಿದರೆ, ಆ ದಾರಿಯಲ್ಲಿ ಯಾವುದೇ ವಿಘ್ನಗಳು ಬಾರದಂತೆ ನಿವಾರಿಸುವವನು ಗಣಪತಿ. ಗುರು- ಗಣಪತಿಯ ಅನುಗ್ರಹದಿಂದ ಎಲ್ಲರ ಬದುಕಿನಲ್ಲಿ ಶಾಶ್ವತ ಸುಖದ ದಾರಿ ತೆರೆದುಕೊಳ್ಳಲಿ ಎಂದು ಆಶಿಸಿದರು.
ಕೃಷಿಕರು ಕಳೆ ಕಿತ್ತು ತೋಟ ಸ್ವಚ್ಛಗೊಳಿಸುವಂತೆ ನಮ್ಮ ಭಾಷೆಯಲ್ಲಿ ಸೇರಿಕೊಂಡಿರುವ ಆಂಗ್ಲಪದಗಳನ್ನು ಬಿಡಬೇಕು.ಸ್ವಭಾಷೆಯನ್ನು ಶುದ್ಧಗೊಳಿಸುವುದು ವಾಗ್ಮಯ ತಪಸ್ಸು ಎಂದು ಬಣ್ಣಿಸಿದರು.

ದಿನಕ್ಕೊಂದು ಆಂಗ್ಲಪದ ತ್ಯಜಿಸುವ ಅಭಿಯಾನದಲ್ಲಿ ಟಿಕೆಟ್ ಪದ ಕೈಬಿಡುವಂತೆ ಸಲಹೆ ಮಾಡಿದರು. ಪುರಾತನ ಕಾಲದಿಂದಲೂ ಕನ್ನಡದಲ್ಲಿ ಚೀಟಿ ಪದ ವ್ಯಾಪಕ ಬಳಕೆಯಲ್ಲಿತ್ತು. ಇದನ್ನು ಮತ್ತೆ ಚಾಲ್ತಿಗೆ ತರಬೇಕು. ದೇಶವನ್ನು ಕೊಳ್ಳೆಹೊಡೆಯಲು, ದಬ್ಬಾಳಿಕೆ ಮಾಡಲು ಬಂದವರ ಶಬ್ದಗಳನ್ನು ಉಳಿಸಿಕೊಳ್ಳುವುದು ನಮ್ಮ ಸೋಲಿನ ಸಂಕೇತ; ದಾಸ್ಯದ ಸಂಕೇತ. ಭಾಷಾಸಂಕರ ಯಾವ ಭಾಷೆಗೂ ಶೋಭೆಯಲ್ಲ; ಇಂಗ್ಲಿಷ್ ಭಾಷೆಯನ್ನೂ ವಿಕಾರ ಮಾಡಿ ಮಾತನಾಡಬಾರದು. ಇಂಗ್ಲಿಷ್ ಪದಗಳು ಅವರ ಭಾಷೆ ಸೇರಿಕೊಳ್ಳಲಿ; ಕನ್ನಡದಲ್ಲಿ ನಮ್ಮ ಪದಗಳೇ ವಿಜೃಂಭಿಸಲಿ ಎಂದು ಆಶಿಸಿದರು.
ಭಾಷೆಯಂತೆ ನಮ್ಮ ಹಬ್ಬ- ಆಚರಣೆಗಳನ್ನೂ ಶುದ್ಧ ಮಾಡಿಕೊಳ್ಳುವ ಸಂದರ್ಭ ಬಂದಿದೆ. ಭಕ್ತಿ, ಆರಾಧನೆಯ ವಿಷಯವಾದ ಗಣಪತಿಯನ್ನು ಹಾಸ್ಯದ ವಸ್ತುವಾಗಿ ಇಂದು ಬಿಂಬಿಸಲಾಗುತ್ತಿದೆ. ಗಣಪತಿ ಹಬ್ಬದ ಆಚರಣೆಯನ್ನು ನೋಡಿದರೆ ವಿವಿಧ ಭಂಗಿಗಳ ಗಣಪತಿಯನ್ನು ಎಲ್ಲೆಂದರಲ್ಲಿ ಪ್ರತಿಷ್ಠಾಪಿಸಿ ಹಬ್ಬದ ಹೆಸರಿನ ಆಚರಣೆಗಳು ನಡೆಯುತ್ತವೆ. ಆದರೆ ಸಂಸ್ಕøತಿಯ ಹೆಸರಿನಲ್ಲಿ ಇಂಥ ವಿಕೃತ ಸಲ್ಲದು ಎಂದು ವಿಶ್ಲೇಷಿಸಿದರು.

ಮೂಲಾಧಾರಚಕ್ರದಲ್ಲಿ ದರ್ಶನ ನೀಡಿವಂತೆ ಆ ರೂಪದಲ್ಲೇ ಗಣಪತಿಯನ್ನು ನಿರ್ಮಿಸಬೇಕು. ಗಣಪತಿ ಮೂರ್ತಿ ನಿರ್ಮಾಣದಲ್ಲೂ ಹಲವು ಅಪಚಾರಗಳು ನಡೆಯುತ್ತಿವೆ. ಗಣಪತಿಗೆ ಬಣ್ಣದ ಹೆಸರಿನಲ್ಲಿ ವಿಷ ಬಳಿಯಲಾಗುತ್ತದೆ. ಯಾವುದೇ ವಿಗ್ರಹಗಳನ್ನು ಶುದ್ಧ ದ್ರವ್ಯಗಳಿಂದ ಮಾಡಬೇಕೇ ವಿನಃ ಕಲುಷಿತ ದ್ರವ್ಯಗಳಿಂದ ಮಾಡಬಾರದು. ಅಶುಚಿ ಪ್ರದೇಶದಲ್ಲಿ ಗಣಪತಿಪ್ರತಿಷ್ಠಾಪಿಸುವುದೂ ನಿಷಿದ್ಧ; ಬಲವಂತದ ಸಂಗ್ರಹ, ಸುಲಿಗೆ, ವಿಕೃತಿಯ ಮೆರೆದಾಟ ನಡೆಯುತ್ತಿದೆ. ಇದರಿಂದ ಖಂಡಿತವಾಗಿಯೂ ಗಣಪತಿ ಸಂತುಷ್ಟನಾಗಲಾರ ಎಂದರು. ಗಣಪತಿ ಹಬ್ಬದ ಸಂದರ್ಭದಲ್ಲಿ ಮಹಾಭಾರತ ಬರೆದ ಗಣಪತಿಯ ಅನುಗ್ರಹದೊಂದಿಗೆ ವಿಷ್ಣು ಸಹಸ್ರನಾಮ ಲೇಖನಯಜ್ಞದ ಮೂಲಕ ಗೋಲೋಕ ಪ್ರಕಲ್ಪದಲ್ಲಿ ಪಾಲ್ಗೊಳ್ಳುವ ಸಂಕಲ್ಪ ಕೈಗೊಳ್ಳಿ ಎಂದು ಕರೆ ನೀಡಿದರು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ ಸೇರಿಕೊಳ್ಳಿ…. 

ಇದು ಮಳೆಗಾಲ ಮಣ್ಣು ಮತ್ತು ನೀರಿನ ಸಮಯ. ಮೃಣ್ಮಯ ಗಣಪತಿಯ ಬಿಂಬ ನಿಮ್ಮ ಮುಂದಿದೆ. ಮಣ್ಣಿನ ಗಣಪ ಮತ್ತೆ ನೀರಿನಲ್ಲಿ ವಿಸರ್ಜನೆಗೊಳ್ಳುತ್ತಾನೆ. ಮೂಲಾಧಾರ ಚಕ್ರದಲ್ಲಿ ಹುಟ್ಟಿ, ಸ್ವಾಧಿಷ್ಟಾನದಲ್ಲಿ ಲೀನವಾಗುವುದು ಗಣಪತಿಯ ವಿಶೇಷ. ಚಾತುರ್ಮಾಸ್ಯ ಗುರು ಮತ್ತು ಗಣಪತಿಯ ಸಂಯೋಗ. ದಾರಿ ತೋರಿಸುವ ಗುರು ಮತ್ತು ವಿಘ್ನನಾಶಕ ಗಣಪತಿ ಸೇರಿರುವ ಅಪೂರ್ವ ಸಂದರ್ಭ ಎಂದು ಬಣ್ಣಿಸಿದರು. ಮಂಗಳೂರು ಹೋಬಳಿಯ ಶಿಷ್ಯರು ದೊಡ್ಡಸಂಖ್ಯೆಯಲ್ಲಿ ಬಂದು ಲಕ್ಷ ತುಳಸಿ ಅರ್ಚನೆ ಸಂಪನ್ನಗೊಳಿಸಿದ್ದಾರೆ. ಶಂಕರರ ಆದಿಯಾಗಿ ಗುರುಪರಂಪರೆಯ ಪ್ರೀತ್ಯರ್ಥವಾಗಿ ಇದು ನಡೆದಿದ್ದು, ಆರ್ಷವಿದ್ಯೆಗಳ ಅಧ್ಯಯನ- ಅಧ್ಯಾಪನ ನಡೆದ ಸ್ಥಳದಲ್ಲಿ ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಶಾಸನತಂತ್ರ ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಚಾತುರ್ಮಾಸ್ಯ ತಂಡದ ಮಂಜುನಾಥ ಸುವರ್ಣದ್ದೆ, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಪ್ಪು, ಪದಾಧಿಕಾರಿಗಳಾದ ಈಶ್ವರ ಪ್ರಸಾದ್, ಕೃಷ್ಣಮೂರ್ತಿ ಮಾಡಾವು, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ಕಾರ್ಯದರ್ಶಿ ರಮೇಶ್ ಭಟ್ ಸರವು, ಮುಳ್ಳೇರಿಯಾ ಮಂಡಲ ಕಾರ್ಯದರ್ಶಿ ಕೆರೆಮೂಲೆ ಸುಬ್ರಹ್ಮಣ್ಯ ಭಟ್, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಅರವಿಂದ ಧರ್ಬೆ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಹೆಗಡೆ, ಎಂಜಿನಿಯರ್ ವಿಷ್ಣು ಬನಾರಿ ಮತ್ತಿತರರು ಉಪಸ್ಥಿತರಿದ್ದರು. ಗುರುಪರಂಪರಾ ಪ್ರೀತ್ಯರ್ಥವಾಗಿ ಹಮ್ಮಿಕೊಂಡಿರುವ ಲಕ್ಷತುಳಸಿ ಅರ್ಚನೆಯ ಏಳನೇ ದಿನ ಗುರುವಾರ ಸಂಪನ್ನಗೊಂಡಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಂಕಗಳಾಚೆಗೂ ಒಂದು ಲೋಕವಿದೆ : ಇದು ಮಕ್ಕಳಿಗೆ ಬದುಕನ್ನು ಕಲಿಸುವ ಶಿಕ್ಷಣ

ಶಾಲೆಯ ಹಂತದಲ್ಲಿ ಮಕ್ಕಳಿಗೆ ಕಲಿಸಬೇಕಾದ ಶಿಕ್ಷಣ ಏನು..?.  ಈ ಪ್ರಶ್ನೆಗೆ ಹಲವರದು ಹಲವು…

2 hours ago

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

9 hours ago

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!

ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…

15 hours ago

ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ

ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…

16 hours ago

ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ

ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…

16 hours ago

ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು

ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…

16 hours ago