ಜಗತ್ತನ್ನು ಹವಾಮಾನ ವೈಪರೀತ್ಯದಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ | ಪ್ರಧಾನಿ ಮೋದಿ |

September 11, 2024
11:11 PM

ಇಡೀ ವಿಶ್ವ ಇಂದು  ಹವಾಮಾನ ವೈಪರೀತ್ಯಕ್ಕೆ  ಒಳಗಾಗಿದೆ.  ಜಗತ್ತನ್ನು  ಹವಾಮಾನ ವೈಪರೀತ್ಯದಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ  ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ವಿಶ್ವ ಹಸಿರು ಜಲಜನಕ ಸಮಾವೇಶ ಉದ್ದೇಶಿಸಿ ವರ್ಚುವಲ್ ಮಾಧ್ಯಮದ ಮೂಲಕ ಪ್ರಧಾನಿ, ಭಾರತ  ಹಸಿರು ಇಂಧನಕ್ಕೆ  ಹೆಚ್ಚಿನ ಆದ್ಯತೆ ನೀಡಿದ್ದು, ರಾಷ್ಟ್ರೀಯ  ಹಸಿರು ಇಂಧನ ಮಿಷನ್ ಕಾರ್ಯಕ್ರಮ ಜಾರಿಗೊಳಿಸಿದೆ. ಮುಂದಿನ  ಪೀಳಿಗೆಗೆ  ಸ್ವಾಸ್ಥ್ಯ ಪರಿಸರ ನೀಡುವುದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸುಸಜ್ಜಿತ, ಸುಭದ್ರ ಹಸಿರು ಜಲಜನಕ ಬಳಕೆ  ನಮ್ಮ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಭಾರತ,  ಜಿ-20   ಶೃಂಗಸಭೆಯ ಅಧ್ಯಕ್ಷತೆ  ವಹಿಸಿಕೊಂಡಿದ್ದ ಸಂದರ್ಭದಲ್ಲಿ  ಹಸಿರು ಹೈಡ್ರೋಜನ್  ಪ್ರಾಮುಖ್ಯತೆ ಪ್ರತಿಪಾದಿಸಿತ್ತು.    ಹಸಿರು ಇಂಧನ ಬಳಕೆಯಲ್ಲಿ  ಜಿ-20 ರಾಷ್ಟ್ರಗಳ  ಪಾತ್ರ ಹಿರಿದು ಎಂದರು. ವಿಶ್ವ ಇಂದು   ಎದುರಿಸುತ್ತಿರುವ ಹವಾಮಾನ ಬದಲಾವಣೆ  ಸವಾಲನ್ನು  ಸಮರ್ಥವಾಗಿ ನಿಭಾಯಿಸಬೇಕಾದರೆ,  ಜಾಗತಿಕ ಸಮೂಹದ  ಒಗ್ಗೂಡುವಿಕೆ ಅಗತ್ಯ. ಹೊಸ ಅಲೋಚನೆಗಳು, ಆವಿಷ್ಕಾರಗಳಿಂದ  ಈ ಸಮಸ್ಯೆಯನ್ನು  ನಿವಾರಿಸಬಹುದು ಎಂದು ತಿಳಿಸಿದ ನರೇಂದ್ರ ಮೋದಿ ಅವರು, ಇಂದು  ನಾವು ತೆಗೆದುಕೊಳ್ಳುವ ನಿರ್ಣಯ, ಮುಂದಿನ ಪೀಳಿಗೆಯ ಮೇಲೆ ಪ್ರಭಾವ ಬೀರಲಿದೆ. ಹಾಗಾಗಿ  ಹೊಸ ಕ್ಷೇತ್ರದಲ್ಲಿ  ನವ ಚಿಂತನೆಯ ಅಗತ್ಯವಿದೆ ಎಂದು  ಹೇಳಿದರು.

 

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!
April 16, 2025
11:18 AM
by: ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ
ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |
April 16, 2025
10:50 AM
by: The Rural Mirror ಸುದ್ದಿಜಾಲ
ದೆಹಲಿಯಲ್ಲಿ ಹೀಟ್‌ವೇವ್‌ , ಬಿಹಾರದಲ್ಲಿ ಮಳೆ, ಕರ್ನಾಟಕದಲ್ಲಿ ಬಿಸಿ ಗಾಳಿ ಎಚ್ಚರಿಕೆ |
April 16, 2025
8:14 AM
by: The Rural Mirror ಸುದ್ದಿಜಾಲ
ಹೊಸರುಚಿ| ಗುಜ್ಜೆ ರೋಲ್
April 16, 2025
8:00 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror

Join Our Group