Advertisement
ಅನುಕ್ರಮ

ಪುರಾಣ–ಇತಿಹಾಸ–ಜನಪದದಿಂದ ಬರುವ ಬದುಕಿನ ಪಾಠಗಳು

Share

ಮಾನವ ಸಮಾಜವು ತನ್ನ ಬದುಕಿನ ಅರ್ಥವನ್ನು ಅರಿತುಕೊಳ್ಳಲು ಕಥೆಗಳನ್ನೂ, ಪುರಾಣಗಳನ್ನೂ, ಇತಿಹಾಸವನ್ನೂ, ಜನಪದವನ್ನೂ ನಿರಂತರವಾಗಿ ಆಶ್ರಯಿಸಿದೆ. ಅವುಗಳಲ್ಲಿ ಪ್ರತಿಯೊಂದು ಕತೆ ಕೇವಲ ಮನರಂಜನೆಗಾಗಿ ಅಲ್ಲ; ಮನುಷ್ಯನು ಹೇಗೆ ಬದುಕಬೇಕು ಎಂಬ ತತ್ತ್ವ, ಮೌಲ್ಯ ಮತ್ತು ಮಾರ್ಗಸೂಚಿ ಅಡಗಿದೆ. “इतिहासः पुरावृत्तं पुराणं च कथायते” –  ಇತಿಹಾಸಃ ಪುರಾವೃತ್ತಂ ಪುರಾಣಂ ಚ ಕಥಾಯತೆ ಎಂದು ಶಾಸ್ತ್ರವು ಹೇಳುತ್ತದೆ. ಅಂದರೆ ಇತಿಹಾಸವು ನಿಜಘಟನೆಗಳನ್ನು ತೋರಿಸಿದರೆ, ಪುರಾಣವು ಆಳವಾದ ತತ್ತ್ವವನ್ನು ಕಥೆಯ ರೂಪದಲ್ಲಿ ಸಾರುತ್ತದೆ. ಜನಪದವು ಜನಜೀವನದ ಪ್ರತಿಫಲನ. ಪುರಾಣ–ಇತಿಹಾಸ–ಜನಪದವನ್ನು ಅಂಧನಂಬಿಕೆ ಅಥವಾ ಮೂಢಪ್ರಜ್ಞೆಯ ದೃಷ್ಟಿಯಿಂದವಲ್ಲ, ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳುವ ವೈಜ್ಞಾನಿಕ ಮನೋಭಾವದಿಂದ ನೋಡಿದಾಗ ಅವು ಇಂದಿಗೂ ಪ್ರಸ್ತುತವಾಗುತ್ತವೆ..

ಪುರಾಣಗಳು ಅದ್ಭುತ ಕಥೆಗಳ ಸಮೂಹವೆಂಬ ಭ್ರಮೆ ಅನೇಕರಲ್ಲಿದೆ. ವಾಸ್ತವದಲ್ಲಿ ಅವು “ಧರ್ಮಶಾಸ್ತ್ರಗಳ ಜನಪ್ರಿಯ ರೂಪಾಂತರಗಳು”.

ರಾಮಾಯಣದಲ್ಲಿ ರಾಮನ ವನವಾಸ  ನಿಷ್ಠೆಯ ಪಾಠವಾದರೆ , ಮಹಾಭಾರತದಲ್ಲಿ ಪಾಂಡವರ ಹೋರಾಟ  ಅಧರ್ಮವನ್ನು ಎದುರಿಸುವ ಧೈರ್ಯದ ಪಾಠವನ್ನು ಹೇಳುತ್ತದೆ. ಭಾಗವತದಲ್ಲಿ ಕೃಷ್ಣ , ಬುದ್ಧಿ, ಪ್ರೀತಿ ಮತ್ತು ಚಾತುರ್ಯದ ಪ್ರಾತಿನಿಧಿಕನಾಗಿದ್ದಾನೆ

ವೈಜ್ಞಾನಿಕ ಮನೋಭಾವದಿಂದ ನೋಡಿದರೆ, ಪುರಾಣಗಳಲ್ಲಿ ಬರುವ “ಅದ್ಭುತ”ಗಳು ನಿಜಘಟನೆಗಳಲ್ಲ; ಅವು ರೂಪಕಗಳು. ಉದಾಹರಣೆಗೆ ಸಮುದ್ರಮಥನ ಎಂಬುದು  ಮಾನವನ ಒಳಮನಸ್ಸಿನ ಘರ್ಷಣೆಯ ಪ್ರತೀಕ. ಒಳ್ಳೆಯ–ಕೆಟ್ಟ ಗುಣಗಳ ಸಮರದಿಂದ ಅಮೃತವಾದ ಜ್ಞಾನ ಹೊರಹೊಮ್ಮುತ್ತದೆ ಎಂಬದು  ಅರ್ಥ. ಹೀಗಾಗಿ ಪುರಾಣಗಳನ್ನು ಮೌಲ್ಯಗಳ ಪ್ರತೀಕಗಳಾಗಿ ಅರ್ಥೈಸಿದರೆ ಇಂದಿನ ಜೀವನಕ್ಕೂ ಸಂಬಂಧಿಸುತ್ತದೆ.

ಇತಿಹಾಸವು ನಿಜಘಟನೆಗಳ ಪ್ರತಿಬಿಂಬ. ಅಶೋಕ ಚಕ್ರವರ್ತಿ ಹಿಂಸೆಯಿಂದ ಶಾಂತಿಯತ್ತ ತಿರುಗಿದನು ಎಂಬುದು ಅಹಿಂಸೆಎಂಬುದು  ಶಾಶ್ವತ ಮತ್ತು ಶಾಂತಿಯ  ಮಾರ್ಗವನ್ನು ಪ್ರತಿಪಾದಿಸಿತು . ಕಿತ್ತೂರು  ರಾಣಿ ಚೆನ್ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದಳು ಎಂಬುದು  ನ್ಯಾಯಕ್ಕಾಗಿ ಧೈರ್ಯ ಅನಿವಾರ್ಯಎಂಬುದನ್ನು ತೋರಿಸಿಕೊಟ್ಟಿತು  ಮಹಾತ್ಮ ಗಾಂಧಿ ಸತ್ಯಾಗ್ರಹವನ್ನು ಆಯ್ದುಕೊಂಡದ್ದು  ಸತ್ಯ–ಅಹಿಂಸೆಯು ಸಮಾಜವನ್ನು ಪರಿವರ್ತಿಸುತ್ತದೆ ಎಂಬುದನ್ನು ತೋರಿಸಿಕೊಟ್ಟಿತು.

Advertisement

ವೈಜ್ಞಾನಿಕ ದೃಷ್ಟಿಯಿಂದ ಇತಿಹಾಸ ನಮಗೆ “ಕಾರಣ–ಕಾರ್ಯ ಸಂಬಂಧ”ವನ್ನು ತೋರಿಸುತ್ತದೆ. ಯಾವ ತೀರ್ಮಾನ ಯಾವ ಫಲಿತಾಂಶ ತರುತ್ತದೆ ಎಂಬುದನ್ನು ಅಧ್ಯಯನ ಮಾಡುವ ಮೂಲಕ ಭವಿಷ್ಯಕ್ಕೆ ಮಾರ್ಗ ರೂಪಿಸಬಹುದು.

ಜನಪದವು ಜನಜೀವನದ ಕನ್ನಡಿಯಾಗಿದೆ. ಗ್ರಾಮೀಣ ಹಾಡು–ಕಥೆಗಳಲ್ಲಿ ಪರಿಶ್ರಮ, ಸಂಬಂಧ, ಪ್ರಕೃತಿಪ್ರೀತಿ ಅಡಕವಾಗಿದೆ.

ಜನಪದವನ್ನು ವೈಜ್ಞಾನಿಕವಾಗಿ ನೋಡಿದರೆ, ಅದು ಸಮೂಹ ಮನೋವಿಜ್ಞಾನದ ಅಭಿವ್ಯಕ್ತಿ. ಗ್ರಾಮೀಣ ಜನರು ತಮ್ಮ ಅನುಭವವನ್ನು ಹಾಡಿನ ರೂಪದಲ್ಲಿ ಹಂಚಿಕೊಂಡು, ಮುಂದಿನ ತಲೆಮಾರಿಗೆ ಬದುಕಿನ ನೈಜ ಮಾರ್ಗಸೂಚಿಯನ್ನು ನೀಡಿದರು. ಇದು ಇಂದಿನ “ಸಸ್ಟೈನಬಲ್ ಲೈಫ್” ಎಂಬ ಕಲ್ಪನೆಯ ಮೂಲವೆಂದೇ ಹೇಳಬಹುದು.

ಪುರಾಣ–ಇತಿಹಾಸ–ಜನಪದವನ್ನು ಇಂದಿನ ಭಾಷೆಯಲ್ಲಿ ಅನ್ವಯಿಸಿದರೆ,ಪುರಾಣದಿಂದ ಬಂದ ಧರ್ಮ–ಅಧರ್ಮ ವ್ಯತ್ಯಾಸವನ್ನು ನೈತಿಕತೆ–ಅನೈತಿಕತೆ ಎಂದು ಅರ್ಥೈಸಬಹುದು.

ಇತಿಹಾಸದಿಂದ ಬಂದ ಸಾಮಾಜಿಕ ಹೋರಾಟವನ್ನು ಮಾನವ ಹಕ್ಕು, ಪರಿಸರ ಸಂರಕ್ಷಣೆ, ಸಮಾನತೆಯ ಹೋರಾಟಗಳಲ್ಲಿ ಬಳಸಬಹುದು.

Advertisement

ಜನಪದದಿಂದ ಬಂದ ಸರಳ ಬಾಳುವನ್ನು ಪರಿಸರ ಸ್ನೇಹಿ ಜೀವನಶೈಲಿ, ಮಿನಿಮಲಿಸಂ, ಸಮೂಹ ಬದುಕಿನಲ್ಲಿ ಅಳವಡಿಸಬಹುದು.

ಇವುಗಳನ್ನು ವೈಜ್ಞಾನಿಕ ಮನೋಭಾವದಿಂದ ಅರ್ಥೈಸಿದರೆ, ಹಳೆಯದನ್ನು ತಳ್ಳಿಹಾಕದೆ, ಹೊಸ ಬದುಕಿಗೆ ಬೆಳಕು ತರುವ ದಾರಿಯಾಗಿ ಮಾಡಬಹುದು.

ಶಾಸ್ತ್ರವು ಮೌಲ್ಯ ಕಲಿಸುತ್ತದೆ, ವಿಜ್ಞಾನವು ಪ್ರಮಾಣ ಕಲಿಸುತ್ತದೆ. “सत्यमेव जयते” ” ಸತ್ಯಮೇವ ಜಯತೆ ” (ಮಂಡೂಕೋಪನಿಷತ್ ) –ಸತ್ಯವೇ ಜಯಿಸುತ್ತದೆ. ಎಂಬುದನ್ನು ವಿಜ್ಞಾನವು ಸತ್ಯವನ್ನು ಪರಿಶೀಲನೆಯ ಮೂಲಕ ದೃಢಪಡಿಸುತ್ತದೆ. ಪುರಾಣ–ಇತಿಹಾಸ–ಜನಪದವು ಕಥೆಗಳ ಮೂಲಕ ಸತ್ಯವನ್ನು ಬದುಕಿನ ಹಾದಿಯಲ್ಲಿ ತೋರಿಸುತ್ತದೆ. ಈ ಸಮನ್ವಯವೇ ನವಯುಗದ ಅಗತ್ಯ.

ಪುರಾಣ–ಇತಿಹಾಸ–ಜನಪದವನ್ನು ಮೂಢನಂಬಿಕೆಯ ದೃಷ್ಟಿಯಿಂದ ತಳ್ಳಿಬಿಡುವುದು ತಪ್ಪು; ಅದೇ ರೀತಿಯಲ್ಲಿ ಅಂಧವಿಶ್ವಾಸದಿಂದ ಅಳವಡಿಸಿಕೊಳ್ಳುವುದೂ ತಪ್ಪು. ಅವುಗಳನ್ನು ವೈಜ್ಞಾನಿಕ ಮನೋಭಾವದಿಂದ, ಅರ್ಥಪೂರ್ಣವಾಗಿ ಓದಿದಾಗ, ಅವುಗಳ ಪಾಠಗಳು ಇಂದಿನ ಬದುಕಿಗೂ ಜೀವಂತವಾಗುತ್ತವೆ.

ಆದುದರಿಂದ ಪುರಾಣವೆಂಬುದು ಮೌಲ್ಯಗಳ ಪ್ರತೀಕ,ಇತಿಹಾಸವೆಂಬುದು  ಸತ್ಯಘಟನೆಯ ಪಾಠ,ಜನಪದವೆಂಬುದು ಜನಜೀವನದ ಜ್ಞಾನ, ವಿಜ್ಞಾನವೆಂಬುದು ಪರಿಶೀಲನೆ–ಪ್ರಮಾಣದ ಪ್ರತೀಕ. ಈ ನಾಲ್ಕನ್ನೂ ಸಮನ್ವಯಗೊಳಿಸಿದಾಗ ಮಾನವ ಜೀವನ ಸಮಗ್ರವಾಗಿ ಬೆಳೆಯುತ್ತದೆ.

Advertisement

ಪುರಾಣದಿಂದ ಧರ್ಮ–ನೈತಿಕತೆ, ಇತಿಹಾಸದಿಂದ ಧೈರ್ಯ–ನಾಯಕತ್ವ, ಜನಪದದಿಂದ ಸರಳತೆ–ಸಹಜತೆ, ಶಾಸ್ತ್ರದಿಂದ ಆಧ್ಯಾತ್ಮಿಕ ಮೌಲ್ಯ, ವಿಜ್ಞಾನದಿಂದ ಪ್ರಮಾಣ–ತರ್ಕ.ಇವುಗಳನ್ನು ಒಟ್ಟುಗೂಡಿಸಿದಾಗಲೇ ಮಾನವ ಜೀವನವು ಸಮತೋಲನ ಮತ್ತು ಸಾರ್ಥಕತೆಯ ದಾರಿಯಲ್ಲಿ ಸಾಗುತ್ತದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಅಡಿಕೆ ಸಿಂಗಾರ ಒಣಗುತ್ತಿದೆಯೇ..? ನಿಮ್ಮ ತೋಟದ ಶತ್ರು ನೀವು ಬಳಸುವ ಬೇವಿನ ಎಣ್ಣೆಯೇ ಇರಬಹುದು…!

ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…

4 hours ago

ಕಳಪೆ ಅಡಿಕೆ ಪತ್ತೆ | 15.5 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…

5 hours ago

ತೆಂಗಿನಕಾಯಿಯಿಂದ Gen-Z ಫೇವರಿಟ್ ಫುಡ್‌…! ವೆಗನ್ ಕುಲ್ಫಿ ಮತ್ತು ಚಾಕೊಲೇಟ್ ಬಿಡುಗಡೆ

ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್‌ Z ಗಾಗಿ…

13 hours ago

ತೆಂಗು ರೈತರಿಗೆ ಹೊಸ ದಾರಿ | ಮೌಲ್ಯವರ್ಧನೆ ಮತ್ತು ಬಹುಬೆಳೆ ಪದ್ಧತಿಗೆ ಉತ್ತೇಜನ

ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…

13 hours ago

ತೆಂಗಿನಕಾಯಿ ಬೆಲೆ ಏಕೆ ಇಳಿಯುತ್ತಿದೆ? ರೈತರಿಗೆ ಮುಂದೇನು?

ತೆಂಗಿನಕಾಯಿ ಬೆಲೆ ಇಳಿಕೆ ಆತಂಕ ಹೆಚ್ಚಾಗಿದೆ. ಉತ್ಪಾದನೆ ಏರಿಕೆ ನಡುವೆಯೇ ರಫ್ತು ಮತ್ತು…

14 hours ago

ಡಿಜಿಟಲ್ ಕೃಷಿ, ಹವಾಮಾನ ಸಹಿಷ್ಣು ಬೆಳೆಗಳಿಗೆ ಬೆಂಬಲ -ಕೃಷಿ ಸಚಿವರಿಂದ ಸಭೆ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾನ್‌ ಅವರು…

14 hours ago