ದೇಹದಲ್ಲಿ ಗ್ಲುಕೋಸ್ #Glucose ಪದಾರ್ಥದ ನಿಯಂತ್ರಣ ವ್ಯವಸ್ಥೆಯು ಸರಿಯಾಗದೆ ಉಂಟಾಗುವ ಒಂದು ಕಾಯಿಲೆಯ ಸ್ಥಿತಿ ಹಾಗೂ ವಂಶ ಪಾರಂಪರ್ಯದಿಂದ ಬರಬಹುದಾದ ಕಾಯಿಲೆ ಮಧುಮೇಹ #Diabetes. ಗ್ಲುಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ #Pancreas ಅಂಗವು ಉತ್ಪತ್ತಿ ಮಾಡಿ ಇನ್ಸುಲಿನ್ ಎಂಬ ಹಾರ್ಮೋನ್ ಅನ್ನು ನಿಯಂತ್ರಿಸುತ್ತದೆ.
ವಿಧಗಳು (Types):3
1) ಇನ್ಸುಲಿನ್ ಅವಲಂಬಿತ #InsulinDependent – ಮೇದೋಜೀರಕ ಗ್ರಂಥಿ ಇನ್ಸುಲಿನ ಉತ್ಪಾದಿಸಲು ವಿಫಲವಾದಾಗ ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗಿ ಬರುವಂತದ್ದು
2) Non insulin Dependent- ಇನ್ಸುಲಿನ್ ಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಇರುವಾಗ ಸಕ್ಕರೆ ಅಂಶ ಹೆಚ್ಚಾಗಿ ಬರುವಂತಹ ಮಧುಮೇಹ. Type 1 & Type 2 ಮಧುಮೇಹ ವನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಟೈಪ್ 3 ಸಿ ಮಧುಮೇಹ ಅತ್ಯಂತ ಮಾರಕ ರೋಗವಾಗಿದೆ.
3) Type 3 c ಇದರಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಲು ಪ್ರಾರಂಭಿಸುತ್ತದೆ ಅಲ್ಲದೆ ದೇಹದಲ್ಲಿ ಹಾರ್ಮೋನ್ ಗಳ ಜೊತೆಗೆ ಜೀರ್ಣವಾಗುವ ಪ್ರೋಟೀನ್ ಗಳ ಪ್ರಮಾಣವೂ ಕಡಿಮೆ ಆಗುತ್ತದೆ. ಸಿಟಿ ಸ್ಕ್ಯಾನ್ ಅಥವಾ ಎಂಆರ್‌ಐ (CT scan orMRI scan ) ಮೂಲಕ ಇದನ್ನು ಪತ್ತೆ ಹಚ್ಚುತ್ತಾರೆ ಇದರಲ್ಲಿ ಅಲ್ಜ್ಯಮರ್ ಅಥವಾ ಮರೆವು ರೋಗ ಲಕ್ಷಣಗಳು ಪ್ರಮುಖವಾಗಿರುತ್ತದೆ ಅಧಿಕ ತೂಕ ಹೊಂದಿದ್ದು ಕುಟುಂಬದಲ್ಲಿ ಮಧುಮೇಹ ಇದ್ದರೆ ಅಥವಾ ಪಿಸಿಒಎಸ್ (pcos )ಒಳಗಾದವರಲ್ಲಿ ಹಾಗೂ ಖಿನ್ನತೆಗೆ ಒಳಗಾದವರಲ್ಲಿ ಹೆಚ್ಚಾಗಿ ಕಾಣಬಹುದು ಟೈಪ್1 ಹಾಗೂ ಟೈಪ್ 2 ಮಧುಮೇಹಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದೆ ಹೋದಲ್ಲಿ ಟೈಪ್ ತ್ರಿ ಸಿ ಮಧುಮೇಹ ಬರುವ ಸಾಧ್ಯತೆ ಇದೆ.
ದೈಹಿಕ ವ್ಯಾಯಾಮವಿಲ್ಲದೆ ಇರುವುದರಿಂದ ಹಾಗೂ ಅತಿಯಾದ ಕಾರ್ಬೋಹೈಡ್ರೇಟ್ಸ್ ಸೇವನೆಯಿಂದ ದೇಹದಲ್ಲಿ ಕೊಬ್ಬು ಮತ್ತು ಸಕ್ಕರೆ ಅಂಶ ಹೆಚ್ಚಾಗುತ್ತದೆ.
ಸಾಮಾನ್ಯ ಲಕ್ಷಣಗಳು :
* ಪದೇ ಪದೇ ಮೂತ್ರ ವಿಸರ್ಜನೆ
* ಅತಿ ಬಾಯಾರಿಕೆ
* ಹಸಿವು ಹೆಚ್ಚಾಗುವಿಕೆ
*ತೂಕದಲ್ಲಿ ಹೆಚ್ಚಳ ಅಥವಾ ಅಸಾಮಾನ್ಯ ತೂಕ ಇಳಿಕೆ
* ಅತಿಯಾದ ಆಯಾಸ
* ಪುರುಷರಲ್ಲಿ ಲೈಂಗಿಕ ದೌರ್ಬಲ್ಯತೆ
* ದೃಷ್ಟಿ ಮಂಜಾಗುವಿಕೆ
*ಗಾಯ ಬಹು ಸಮಯದವರೆಗೆ ವಾಸಿಯಾಗದೇ ಇರುವುದು… ಮುಂತಾದವುಗಳು
ಮಧುಮೇಹ ನಿಯಂತ್ರಣ:
– ಮಧುಮೇಹ ನಿಯಂತ್ರಣ ಮಾಡಲು ಆಯುರ್ವೇದದಲ್ಲಿ ಹಲವು ಪರಿಹಾರಗಳಿವೆ. ಮಧುಮೇಹ ರೋಗಿಗಳಿಗೆ ಆಯುರ್ವೇದ ಔಷಧಗಳು ಮತ್ತು ಔಷಧೀಯ ಮೌಲ್ಯಗಳಿಂದ ಸಮೃದ್ಧವಾಗಿರುವ ಆಹಾರ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ ಹಾಗೂ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಿ ಮಧುಮೇಹವನ್ನು ನಿಯಂತ್ರಿಸುತ್ತದೆ
– ಮಧುಮೇಹ ನಿಯಂತ್ರಣದಲ್ಲಿ ಸಹಕಾರಿಯದ ಕೆಲವು ಆಹಾರ ಪದಾರ್ಥಗಳು : ಹಾಗಲಕಾಯಿ, ಮೆಂತ್ಯ ಬೀಜಗಳು, ನೇರಳೆ ಹಣ್ಣು, ನೆಲ್ಲಿಕಾಯಿ, ಅಮೃತಬಳ್ಳಿ, ಬೇವು ಇತ್ಯಾದಿ
– ದಿನನಿತ್ಯ ಅರ್ಧ ಗಂಟೆ ವಾಕಿಂಗ್ ಯೋಗಾಸನ ಪ್ರಾಣಾಯಾಮ ಧ್ಯಾನ ಸರಳ ವ್ಯಾಯಾಮಗಳನ್ನು ಮಾಡುವುದರಿಂದ ನಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು
ಮಧುಮೇಹವನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಅನೇಕ ಉಪದ್ರವಗಳು ಕಾಣಿಸಿಕೊಳ್ಳುತ್ತವೆ
– Diabetic retinopathy – ಕಣ್ಣಿನ ತೊಂದರೆ
– Diabetic Neuropathy – ನರಗಳ ತೊಂದರೆ
ಹೀಗೆ ಕಿಡ್ನಿ ಸಮಸ್ಯೆ, ಹೃದಯ ತೊಂದರೆ ಅನೇಕ ಸಮಸ್ಯೆಗಳು ಕಾಣಿಸಬಹುದು. ಆದ ಕಾರಣ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ತೆಗೆದು ಕೊಂಡು ಮಧುಮೇಹ ನಿಯಂತ್ರಣದಲ್ಲಿರಿಸುವು ದು ಉತ್ತಮ …
WHO ನಿಲುವನ್ನುಮರುಪರಿಶೀಲಿಸುವಂತೆ ಮಾಡಲು ICMR, ICAR, AIUMS, CSIR, CFTRI ಮೈಸೂರು ಅಥವಾ…
ಸುಳ್ಯ ತಾಲೂಕಿನ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶತಮಾನೋತ್ಸವ ಕಾರ್ಯಕ್ರಮ…
ರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದಾರೆ. ಇಂತಹ ನಕಲಿ ವೈದ್ಯರ…
ನಬಾರ್ಡ್ ಸಾಲದ ಮಿತಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೆಹಲಿಯಲ್ಲಿ ಕೇಂದ್ರ ಹಣಕಾಸು…
ನಾಡಿನ ಹೆಮ್ಮೆಯ ಸಂಸ್ಥೆ ಕೆಎಂಎಫ್ ನಂದಿನಿ ಉತ್ಪನ್ನಗಳು ಈಗ ರಾಷ್ಟ್ರ ರಾಜಧಾನಿಯಲ್ಲಿ ಲಭ್ಯವಿರಲಿದೆ.…