ಕೇರಳದ ತ್ರಿಶೂರ್(Trishur) ಮತ್ತು ಪಾಲಕ್ಕಾಡ್(Palakhad) ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಲಘು ಭೂಕಂಪನವಾಗಿದೆ(LIGHT EARTHQUAKE). ಬೆಳಗ್ಗೆ 8.16ಕ್ಕೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಸೆಂಟರ್ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಮೂರು ತೀವ್ರತೆಗಳು ದಾಖಲಾಗಿವೆ.
ತ್ರಿಶೂರ್ ಜಿಲ್ಲೆಯ ಕುನ್ನಂಕುಲಂ, ವೆಲ್ಲರಕಾಡ್, ಮುಂಡೂರು, ಎರುಮಪೆಟ್ಟಿ ಕರಿಯನ್ನೂರ್, ವೆಲ್ಲತೇರಿ, ವೆಲ್ಲೂರು ಮತ್ತು ನೆಲ್ಲಿಕುನ್ ಭಾಗಗಳಲ್ಲಿ ಭೂಕಂಪ ಸಂಭವಿಸಿದೆ. ಪಾಲಕ್ಕಾಡ್, ತಿರುಮಿಟಕೋಡ್, ಕುಮಾರನೆಲ್ಲೂರ್ ಮತ್ತು ಆಲತ್ತೂರ್ ಪ್ರದೇಶದಲ್ಲಿ ಈ ಕಂಪನ ಕಂಡು ಬಂದಿದೆ. ಭೂಕಂಪನವು ಮೂರ್ನಾಲ್ಕು ಸೆಕೆಂಡುಗಳ ಕಾಲ ಸಂಭವಿಸಿತು. ಕೆಲ ಮನೆಗಳಲ್ಲಿ ತಟ್ಟೆಗಳು ಅಲುಗಾಡಿದ್ದು, ಗೃಹೋಪಯೋಗಿ ವಸ್ತುಗಳು ಕೆಳಗೆ ಬಿದ್ದಿವೆ. ದೊಡ್ಡ ಶಬ್ದದಿಂದ ಭೂಮಿ ಕಂಪಿಸಿತು. ಜನರು ಗಾಬರಿಗೊಂಡು ಮನೆಯಿಂದ ಹೊರಗೆ ಓಡಿ ಬಂದರು. ಈ ಘಟನೆಯಲ್ಲಿ ಯಾವುದೇ ಹಾನಿ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಇದೇ ವೇಳೆ ಜನತೆ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳ ತಂಡಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ. ಅದರಂತೆ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಭೂಕಂಪದ ಕೇಂದ್ರ ಬಿಂದು ತ್ರಿಶೂರ್ನಿಂದ 18 ಕಿ.ಮೀ ಉತ್ತರ ಭಾಗದಲ್ಲಿತ್ತು ಎಂಬುದು ದೃಢಪಟ್ಟಿದೆ.
- ಅಂತರ್ಜಾಲ ಮಾಹಿತಿ