ಇಂದು ಸುರಿದ ಗುಡುಗು ಸಹಿತ ಬಾರಿ ಮಳೆಗೆ ಇತಿಹಾಸ ಪ್ರಸಿದ್ದ ಬೇಲೂರು ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದ ರಾಜಗೋಪುರದ ಬಲಪಾರ್ಶ್ವಕ್ಕೆ ಸಿಡಿಲು ಬಡಿದಿದ್ದು ಸ್ವಲ್ಪ ಮಟ್ಟಿನ ಸಿಮೆಂಟ್ ಕಿತ್ತು ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾಕ್ಟರ್ ನಾರಾಯಣ ಸ್ವಾಮಿ ಹೇಳಿದರು.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ವರ್ಷಗಳಿಂದ ಮಳೆ ಸಿಡಿಲು ಬಂದರೂ ಇದುವರೆವಿಗೂ ಏನೂ ಹಾನಿಯಾಗದಂತಿದ್ದ ರಾಜಗೋಪುರ ಸಿಡಿಲಿಗೆ ಸಿಡಿಲು ನಿರೋಧಕ ಅಳವಡಿಸಿದ್ದರೂ ಕೂಡ ಇಂದಿನ ಭಾರೀ ಸಿಡಿಲಿಗೆ ಅಲ್ಪಮಟ್ಟಿನ ಹಾನಿಯಾಗಿದೆ ಈ ವಿಚಾರವಾಗಿ ಈಗಾಗಲೇ ದೇವಾಲಯಕ್ಕೆ ಸಂಬಂಧಿಸಿದ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ತಿಳಿಸಲಾಗಿದೆ, ಮುಂದಿನ ದಿನಗಳಲ್ಲಿ ಸಿಡಿಲು ನಿರೋಧಕ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತೇವೆ ಎಂದು ಹೇಳಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel