Live food fest ನಲ್ಲಿ ಭಾಗವಹಿಸುತ್ತಿರುವ ಸುಳ್ಯದ ಗುತ್ತಿಗಾರಿನ ಮಹಿಳೆಯರು | ದಕ್ಷಿಣ ಕನ್ನಡ ಜಿಲ್ಲೆಯಿಂದ ಏಕೈಕ ತಂಡ ಭಾಗಿ |

December 21, 2022
8:44 PM

ಬೆಳಗಾವಿಯಲ್ಲಿ ನಡೆಯುತ್ತಿರುವ “ಅಸ್ಮಿತೆ” ಸರಸ್ ಮೇಳದ Live food fest ನಲ್ಲಿ  ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ದೀಪ ಸಂಜೀವಿನಿ ತಂಡದ ಸದಸ್ಯೆಯರು ಭಾಗವಹಿಸುತ್ತಿದ್ದಾರೆ.ಈ ತಂಡದಲ್ಲಿ  ಶಾರದ ನಡುಗಲ್ಲು, ಇಂದಿರಾ ಬಾಳುಗೋಡು,ಸೆಲಿನ ಸೆಬಾಸ್ಟಿನ್,ರಮ್ಯ ಉಜಿರಡ್ಕ,ಚೈತನ್ಯ ಇವರ ತಂಡ ಇದ್ದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಿಂದ ಪ್ರತಿನಿಧಿಸುತ್ತಿರುವ ಏಕೈಕ ತಂಡ ಇದಾಗಿದೆ.ಡಿ.22 ರಿಂದ 30 ರವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತದೆ.

Advertisement
Advertisement
Advertisement

Live food fest ಬೆಳಗಾವಿಯಲ್ಲಿನಡೆಯುತ್ತಿದೆ.  ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಿಂದ ಪ್ರತಿನಿಧಿಸುತ್ತಿರುವ ಏಕೈಕ ತಂಡ ಇದಾಗಿದ್ದು, ಕಳೆದ  ಬಾರಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ  ಅಮರ ಸಂಜೀವಿನಿ ಒಕ್ಕೂಟದ ಸಿದ್ದಿದಾತ್ರಿ ತಂಡದ ಸ್ಪೂರ್ತಿ ಈ ಬಾರಿ ರಾಜ್ಯ ಮಟ್ಟದಲ್ಲಿ ನಡೆಯುವ ಸರಸ್ ಮೇಳದಲ್ಲಿ ದೀಪ ಸಂಜೀವಿನಿ ಭಾಗವಹಿಸುವಂತೆ ಮಾಡಿದೆ. ಮಹಿಳೆಯರನ್ನು ಸ್ವಾವಲಂಬಿ ಜೀವನದತ್ತ ಕೊಂಡೊಯ್ಯುವಲ್ಲಿ ಸಂಜೀವಿನಿಯು ಪ್ರೇರಣೆಯಾಗಿದೆ. ಈ ನಿಟ್ಟಿನಲ್ಲಿ  ಒಕ್ಕೂಟದ ಪ್ರಯತ್ನವು ಸಾಗಿದೆ.

Advertisement

ಅನುಭವದಿಂದ ಕಲಿಯುವ ಪಾಠ ಹಾಗು ಸೃಜನಶೀಲ ಚಟುವಟಿಕೆಗಳ ವೀಕ್ಷಣೆ  ಪ್ರತೀ ಊರಿನ ಮಹಿಳೆಯರಿಗೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ಸರಸ್ ಮೇಳದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಅವಕಾಶ ಸಿಕ್ಕಾಗ ಬಳಸಿಕೊಳ್ಳುವುದು ಅನುಭವದ ಮಾತು ಈ ನಿಟ್ಟಿನಲ್ಲಿ ಇಂದು ದೀಪ ಸಂಜೀವಿನಿ ಸದಸ್ಯೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದಾರೆ.

Advertisement

ಈ ತಂಡವನ್ನು ಗುತ್ತಿಗಾರಿನಿಂದ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವತಿ ಆಚಳ್ಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ತಾಲೂಕು ಕಾರ್ಯಕ್ರಮ ಸಂಯೋಜಕಿ  ಶ್ವೇತ, ಒಕ್ಕೂಟದ ಅಧ್ಯಕ್ಷರಾದ ದಿವ್ಯ ಸುಜನ್ ಗುಡ್ಡೆಮನೆ, ಪಂಚಾಯತ್ ಸದಸ್ಯೆ  ಲತಾ ಕುಮಾರಿ ಆಜಡ್ಕ,  ಮಿತ್ರಕುಮಾರಿ ಚಿಕ್ಮುಳಿ,  ದಿವ್ಯ ಚತ್ರಪ್ಪಾಡಿ, ಸವಿತ ಕುಳ್ಳಂಪಾಡಿ,ಗೀತ ವಳಲಂಬೆ, ಗ್ರಂಥಪಾಲಕಿ ಅಭಿಲಾಷ ಉಪಸ್ಥಿತರಿದ್ದರು.

 

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ಹಳದಿ ಎಲೆರೋಗ ಬಾಧಿಸಿದ ನಂತರದ ಕೃಷಿ ಬದುಕು ಹೇಗೆ ? ಕೃಷಿಕರು ಸವಾಲನ್ನು ಹೇಗೆ ಸ್ವೀಕರಿಸಬಹುದು..? | ಸಂಪಾಜೆಯ ಕೃಷಿಕ ಶಂಕರಪ್ರಸಾದ್‌ ರೈ ಅವರ ಅಭಿಪ್ರಾಯ |
November 25, 2024
6:52 AM
by: ದ ರೂರಲ್ ಮಿರರ್.ಕಾಂ
ಅಡಿಕೆಯಲ್ಲಿ ಮಿಶ್ರ ಬೆಳೆ ಏಕೆ..? ಹೇಗೆ ಮತ್ತು ಯಾವ ಬೆಳೆಯನ್ನು ಮಾಡಬಹುದು..?
November 25, 2024
6:40 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror