ಬೆಳಗಾವಿಯಲ್ಲಿ ನಡೆಯುತ್ತಿರುವ “ಅಸ್ಮಿತೆ” ಸರಸ್ ಮೇಳದ Live food fest ನಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ದೀಪ ಸಂಜೀವಿನಿ ತಂಡದ ಸದಸ್ಯೆಯರು ಭಾಗವಹಿಸುತ್ತಿದ್ದಾರೆ.ಈ ತಂಡದಲ್ಲಿ ಶಾರದ ನಡುಗಲ್ಲು, ಇಂದಿರಾ ಬಾಳುಗೋಡು,ಸೆಲಿನ ಸೆಬಾಸ್ಟಿನ್,ರಮ್ಯ ಉಜಿರಡ್ಕ,ಚೈತನ್ಯ ಇವರ ತಂಡ ಇದ್ದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಿಂದ ಪ್ರತಿನಿಧಿಸುತ್ತಿರುವ ಏಕೈಕ ತಂಡ ಇದಾಗಿದೆ.ಡಿ.22 ರಿಂದ 30 ರವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯುತ್ತದೆ.
Live food fest ಬೆಳಗಾವಿಯಲ್ಲಿನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನಿಂದ ಪ್ರತಿನಿಧಿಸುತ್ತಿರುವ ಏಕೈಕ ತಂಡ ಇದಾಗಿದ್ದು, ಕಳೆದ ಬಾರಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಅಮರ ಸಂಜೀವಿನಿ ಒಕ್ಕೂಟದ ಸಿದ್ದಿದಾತ್ರಿ ತಂಡದ ಸ್ಪೂರ್ತಿ ಈ ಬಾರಿ ರಾಜ್ಯ ಮಟ್ಟದಲ್ಲಿ ನಡೆಯುವ ಸರಸ್ ಮೇಳದಲ್ಲಿ ದೀಪ ಸಂಜೀವಿನಿ ಭಾಗವಹಿಸುವಂತೆ ಮಾಡಿದೆ. ಮಹಿಳೆಯರನ್ನು ಸ್ವಾವಲಂಬಿ ಜೀವನದತ್ತ ಕೊಂಡೊಯ್ಯುವಲ್ಲಿ ಸಂಜೀವಿನಿಯು ಪ್ರೇರಣೆಯಾಗಿದೆ. ಈ ನಿಟ್ಟಿನಲ್ಲಿ ಒಕ್ಕೂಟದ ಪ್ರಯತ್ನವು ಸಾಗಿದೆ.
ಅನುಭವದಿಂದ ಕಲಿಯುವ ಪಾಠ ಹಾಗು ಸೃಜನಶೀಲ ಚಟುವಟಿಕೆಗಳ ವೀಕ್ಷಣೆ ಪ್ರತೀ ಊರಿನ ಮಹಿಳೆಯರಿಗೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಇಂತಹ ಸರಸ್ ಮೇಳದಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಅವಕಾಶ ಸಿಕ್ಕಾಗ ಬಳಸಿಕೊಳ್ಳುವುದು ಅನುಭವದ ಮಾತು ಈ ನಿಟ್ಟಿನಲ್ಲಿ ಇಂದು ದೀಪ ಸಂಜೀವಿನಿ ಸದಸ್ಯೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗಿಗಳಾಗಲಿದ್ದಾರೆ.
ಈ ತಂಡವನ್ನು ಗುತ್ತಿಗಾರಿನಿಂದ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇವತಿ ಆಚಳ್ಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಧನಪತಿ, ತಾಲೂಕು ಕಾರ್ಯಕ್ರಮ ಸಂಯೋಜಕಿ ಶ್ವೇತ, ಒಕ್ಕೂಟದ ಅಧ್ಯಕ್ಷರಾದ ದಿವ್ಯ ಸುಜನ್ ಗುಡ್ಡೆಮನೆ, ಪಂಚಾಯತ್ ಸದಸ್ಯೆ ಲತಾ ಕುಮಾರಿ ಆಜಡ್ಕ, ಮಿತ್ರಕುಮಾರಿ ಚಿಕ್ಮುಳಿ, ದಿವ್ಯ ಚತ್ರಪ್ಪಾಡಿ, ಸವಿತ ಕುಳ್ಳಂಪಾಡಿ,ಗೀತ ವಳಲಂಬೆ, ಗ್ರಂಥಪಾಲಕಿ ಅಭಿಲಾಷ ಉಪಸ್ಥಿತರಿದ್ದರು.
25.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ಬಗ್ಗೆ ಡಾ.ಭವಿಷ್ಯ ಅವರು ನೀಡಿರುವ ಮಾಹಿತಿ ಇಲ್ಲಿದೆ..(ಸಂಪೂರ್ಣ…
ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಹೇಗೆ..? ಕೃಷಿ ವಿಚಾರಗೋಷ್ಟಿಯಲ್ಲಿ ಮಾತನಾಡಿರುವ ಆಡಿಯೋ ಇಲ್ಲಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…