ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಕಲ ತಯಾರಿ ನಡೆಯುತ್ತಿದ್ದು, ಸೆ.1ಕ್ಕೆ ಗಜಪಯಣಕ್ಕೆ ಚಾಲನೆ ದೊರಕಲಿದೆ.ಸೆ.4ಕ್ಕೆ ಅರಮನೆಗೆ ಆನೆಗಳ ಪ್ರವೇಶವಾಗಲಿದೆ. ಜಂಬೂಸವಾರಿ ಮೆರವಣಿಗೆಗೆ ಆನೆಗಳ ಆಯ್ಕೆ ಬಹುತೇಕ ಪೂರ್ಣವಾಗಿದೆ. ಈಗಾಗಲೇ ಆನೆಗಳ ಆಯ್ಕೆ ಅರಣ್ಯಾಧಿಕಾರಿಗಳು ಮಾಡಿದ್ದಾರೆ.ಜಂಬೂಸವಾರಿ ಮೆರವಣಿಗೆಗೆ ಆಯ್ಕೆ ಮಾಡಿರುವ ಆನೆಗಳಿಗೆ ವಿವಿಧ ರೀತಿ ಪರೀಕ್ಷೆಗಳನ್ನು ಮಾಡಿದ್ದಾರೆ. ಆನೆಗಳನ್ನು ತಯಾರು ಮಾಡ್ತಿದ್ದಾರೆ.
ಸೆಪ್ಟೆಂಬರ್ 1ರಂದು ವೀರನಹೊಸಳ್ಳಿಯಲ್ಲಿ ಗಜಪಯಣಕ್ಕೆ ಮುಹೂರ್ತ ನಿಗದಿಯಾಗಿದ್ದು, ಸಾಂಪ್ರದಾಯಿಕವಾಗಿ ಗಜಪಡೆಗೆ ಜಿಲ್ಲಾಡಳಿತ ಸ್ವಾಗತ ಕೋರಲಿದೆ. ಸೆಪ್ಟೆಂಬರ್ 4ರಂದು ಗಜಪಡೆ ಅರಮನೆ ಪ್ರವೇಶ ಮಾಡಲಿದೆ. ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಜಂಬೂಸವಾರಿ ಮೆರವಣಿಗೆಗೆ ಕ್ಯಾಪ್ಟನ್ ಅಭಿಮನ್ಯು ರೆಡಿಯಾಗುತ್ತಿದ್ದು, 750 ಕೆಜಿಯ ಚಿನ್ನದ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದೆ ಅಭಿಮನ್ಯು.ಅಕ್ಟೋಬರ್ 15ರಂದು ದಸರಾ ಮಹೋತ್ಸವ ಉದ್ಘಾಟನೆ ಆಗಲಿದೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಆಗುತ್ತೆ. ವಸ್ತು ಪ್ರದರ್ಶನ ಕೂಡ ಅಂದೇ ಆರಂಭವಾಗಲಿದೆ.