ಲೋಕಸಭೆ ಚುನಾವಣೆ ಎಫೆಕ್ಟ್‌ | ಕೊನೆಗೂ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮೆಗೆ ಗ್ಯಾರಂಟಿ ಡೆಡ್‍ಲೈನ್

November 6, 2023
1:17 PM
ರಾಜ್ಯದ ಜನತೆಗೆ `ಗ್ಯಾರಂಟಿ’ ಗುಡ್‍ನ್ಯೂಸ್ ಸಿಕ್ಕಿದೆ.

ಅಧಿಕಾರಕ್ಕೆ ಏರಬೇಕು ಅನ್ನುವ ಧಾವಂತದಲ್ಲಿ ಕಾಂಗ್ರೆಸ್‌ ಸರ್ಕಾರ(Congress Govt) ಹಲವು ಭರವಸೆ ನೀಡಿದೆ. ಈಗ ಭರವಸೆಗಳನ್ನು ಈಡೇರಿಸದಿದ್ದರೆ  ವಿರೋಧ ಪಕ್ಷಗಳು ಬಿಡುತ್ತವಾ..? ಒಟ್ಟಿನಲ್ಲಿ ಕೊಟ್ಟ ಉಚಿತ ಭರವಸೆಗಳನ್ನು(Congress Annabhagya Scheme) ಈಡೇರಿಸದೆ ಕಾಂಗ್ರೆಸ್‌ಗೆ  ಬೇರೆ ದಾರಿ ಇಲ್ಲ…

ಇದೀಗ ಕೊನೆಗೂ ಅನ್ನಭಾಗ್ಯದ ಹಣಭಾಗ್ಯಕ್ಕೆ ಮುಹೂರ್ತ ಕೂಡಿಬಂದಿದೆ. ವಿರೋಧ ಪಕ್ಷಗಳ ಪಟ್ಟು ಹಾಗೂ ಪ್ರತಿಭಟನೆ ಜೊತೆಗೇ ರಾಜ್ಯ ಸರ್ಕಾರ (State Government) ಈ ನಿರ್ಧಾರಕ್ಕೆ ಬಂದಿದೆ. ಲೋಕಸಭೆ ಚುನಾವಣೆ (Loksabha Election) ಬೆನ್ನಲ್ಲೆ ಗ್ಯಾರಂಟಿ ಸಮರ್ಪಕ ಜಾರಿಗೆ ಸರ್ಕಾರ ಕಸರತ್ತು ನಡೆಸುತ್ತಿದೆ. ರಾಜ್ಯದ ಜನತೆಗೆ `ಗ್ಯಾರಂಟಿ’ ಗುಡ್‍ನ್ಯೂಸ್ ಒಂದು ಸಿಕ್ಕಿದೆ. ರಾಜ್ಯದಲ್ಲಿ ಅನ್ನಭಾಗ್ಯ (Anna Bhagya) ಹಾಗೂ ಗೃಹಲಕ್ಷ್ಮಿ (Gruhalakshmi) ಹಣ ವಿಳಂಬವಾಗುತ್ತಿದ್ದ ಬೆನ್ನಲ್ಲೇ ಫಲಾನುಭವಿಗಳಿಗೆ ಹಣ ತಲುಪಿಸೋಕೆ ನಿಗದಿತ ಡೆಡ್‍ಲೈನ್ ಅನ್ನು ಆರ್ಥಿಕ ಇಲಾಖೆ ನೀಡಿದೆ.

ಆರ್ಥಿಕ ಇಲಾಖೆಯ ಡಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈ ಮೂಲಕ ಹಣ ತಲುಪಲು ಪ್ರತಿ ತಿಂಗಳಲ್ಲೂ ದಿನಾಂಕ ಫಿಕ್ಸ್ ಮಾಡಲಾಗುತ್ತಿದೆ. ಗೃಹಲಕ್ಷ್ಮಿ, ಅನ್ನಭಾಗ್ಯದ ಹಣ ಖಾತೆಗೆ ಜಮೆ ಆಗಲು ಇನ್ಮುಂದೆ ಡೆಡ್ ಲೈನ್ ಇರಲಿದೆ. ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳ 20ಕ್ಕೆ ಹಾಕಲು ಆರ್ಥಿಕ ಇಲಾಖೆ ಸುತ್ತೋಲೆ ನೀಡಿದೆ. ಅನ್ನಭಾಗ್ಯದ ದುಡ್ಡನ್ನು 10-15 ದಿನಾಂಕದೊಳಗೆ ಪ್ರಕ್ರಿಯೆಗೆ ಸೂಚನೆ ನೀಡಲಾಗಿದೆ. ಹಾಗೆಯೇ ಗೃಹಲಕ್ಷ್ಮಿ ಹಣ ತಿಂಗಳ 15- 20 ರೊಳಗೆ ಜಮೆಗೆ ಸೂಚನೆ ನೀಡಲಾಗಿದೆ.

After the Loksabha Election, the government is conducting an exercise to adequately implement the guarantee. The people of the state have got a ‘guaranteed’ good news. After the Anna Bhagya and Gruhalakshmi funds were delayed in the state, the finance department has given a fixed deadline to deliver the money to the beneficiaries. Strict instructions have been given to the DDOs of the Finance Department, through which a date is being fixed every month for the receipt of money. – ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಹಳದಿ ಎಲೆ ರೋಗಕ್ಕೆ ಶಾಶ್ವತ ಪರಿಹಾರದ ಭರವಸೆ..! ಟಿಶ್ಯೂ ಕಲ್ಚರ್‌ನಲ್ಲಿ ಮೊದಲ ಹಂತದ ಅಡಿಕೆ ಗಿಡಗಳು ನಾಟಿಗೆ ಸಿದ್ಧ
May 30, 2026
7:08 AM
by: ದ ರೂರಲ್ ಮಿರರ್.ಕಾಂ
ಈ ಬಾರಿಯ ಮುಂಗಾರು ದುರ್ಬಲವೇ..? ಐಎಂಡಿ ಎರಡನೇ ಮುನ್ಸೂಚನೆ ಬಿಡುಗಡೆ – 11 ವರ್ಷಗಳಲ್ಲೇ ಅತೀ ದುರ್ಬಲ ಮುಂಗಾರು ಸಾಧ್ಯತೆ..?
May 29, 2026
10:11 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 29.05.2026 | ಕರ್ನಾಟಕಕ್ಕೆ ಮುಂಗಾರು ಪ್ರವೇಶಕ್ಕೆ ಕ್ಷಣಗಣನೆ | ಜೂನ್ 7 ಬಳಿಕ ಕರಾವಳಿಯಲ್ಲಿ ಭಾರೀ ಮಳೆಯ ಸೂಚನೆ!
May 29, 2026
2:43 PM
by: ಸಾಯಿಶೇಖರ್ ಕರಿಕಳ
ಭಾರತದಲ್ಲಿ 191 ಜಾತಿಯ ಜಿರಳೆಗಳು ದಾಖಲೆ – ವಿಜ್ಞಾನಿಗಳ ಹೊಸ ಅಧ್ಯಯನದಲ್ಲಿ ಬಹಿರಂಗವಾದ ಅಚ್ಚರಿಯ ಜೀವ ವೈವಿಧ್ಯ
May 29, 2026
7:12 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror