Advertisement
ಪ್ರಮುಖ

ಲೋಕ ಸಭೆ ಚುನಾವಣೆಯ ದಿಕ್ಸೂಚಿ ಪಂಚ ರಾಜ್ಯಗಳ ಚುನಾವಣೆ |ಇಂದು ಮಧ್ಯಪ್ರದೇಶ, ಛತ್ತೀಸಗಢ ವಿಧಾನಸಭಾ ಚುನಾವಣೆಯ ಮತದಾನ

Share

ಮುಂದಿನ ಲೋಕ ಸಭೆ ಚುನಾವಣೆಯ(Lok sabha Election) ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚ ರಾಜ್ಯಗಳ(State) ಚುನಾವಣೆಯಲ್ಲಿ ಮಧ್ಯಪ್ರದೇಶ(MadyaPradesh) ಹಾಗೂ ಛತ್ತೀಸಗಢ(Chhattisgarh) ರಾಜ್ಯ ವಿಧಾನಸಭಾ ಚುನಾವಣೆಯ(Assembly election) ಮತದಾನ ಇಂದು ಮುಂಜಾನೆ ಆರಂಭವಾಗಿದೆ. ಇಲ್ಲಿ ಕಾಂಗ್ರೆಸ್(Congress) ಮತ್ತು ಬಿಜೆಪಿ(BJP) ನಡುವೆ ಬಹುತೇಕ ನೇರ ಸ್ಪರ್ಧೆ ಇದೆ.. ಮಧ್ಯಪ್ರದೇಶದ 230 ವಿಧಾನಸಭಾ ಸ್ಥಾನಗಳಿಗೆ ಹಾಗೂ ಛತ್ತೀಸಗಢ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ 90 ಸ್ಥಾನಗಳ ಪೈಕಿ 70 ಕ್ಷೇತ್ರಗಳಲ್ಲಿ ಮತದಾನ ಬೆಳಿಗ್ಗೆ 7ಕ್ಕೆ ಆರಂಭವಾಗಿದೆ. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲನಾಥ್ ಸೇರಿದಂತೆ 2533 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

Advertisement
Advertisement

ಮಧ್ಯಪ್ರದೇಶದಲ್ಲಿ ಅಳುವ ಬಿಜೆಪಿ ಮತ್ತು ವಿರೋಧಪಕ್ಷ ಕಾಂಗ್ರೆಸ್ ನಡುವೆ ತೀವ್ರ ತುರುಸಿನ ಸ್ಪರ್ಧೆ ನಡೆದಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಮೋದಿ ನಾಮಬಲ ಹಿಂದುತ್ವ ಹಾಗೂ ಕಲ್ಯಾಣ ಕಾರ್ಯಕ್ರಮಗಳನ್ನು ಪಣಕ್ಕಿಟ್ಟರೆ, ‘ಆಪರೇಷನ್ ಕಮಲ’ದಿಂದ ಮೂರುವರೆ ವರ್ಷಗಳ ಹಿಂದೆ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪಕ್ಷ ಆಡಳಿತ ವಿರೋಧಿ ಅಲೆಯನ್ನೇ ನಂಬಿಕೊಂಡಿದೆ. ಬಿಜೆಪಿ ಪುನಃ ಅಧಿಕಾರ ಹಿಡಿಯುತ್ತದೆಂದು ನಿಶ್ಚಿತವಾಗಿ ಹೇಳುವ ಸ್ಥಿತಿ ಇಲ್ಲ. 18 ವರ್ಷಗಳ ಆಡಳಿತದ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಅವರ ಸಾಂಪ್ರದಾಯಿಕ ಬೆಂಬಲಿಗರು ನಿಧಾನಕ್ಕೆ ಕೈಕೊಡಲಾರಂಭಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆಗಿಂತ ಚೌಹಾಣ್ ವಿರೋಧಿ ಅಲೆಯೇ ಬಲವಾಗಿದೆ.

Advertisement

ಬಿಜೆಪಿ ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆಯ ಬಿಸಿ ಜೋರಾಗಿ ತಟ್ಟಿದೆ. ಇದನ್ನು ಕಡಿಮೆ ಮಾಡಲು ಕಮಲ ಪಡೆಯು ಮಹಿಳೆಯರ ಮನ ಗೆಲ್ಲಲು ಹಲವು ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಲಾಡ್ಲಿ ಬೆಹನಾ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 31,250 ಹಣ ವರ್ಗಾಯಿಸುತ್ತಿದೆ. ಮಹಿಳೆಯರ ಖಾತೆಗೆ ಒಂದಷ್ಟು ದುಡ್ಡು ಬಂದಿದೆ. ಹಿಂದೂ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹೇರಳ ಅನುದಾನ ನೀಡಿದೆ. ಕಾಂಗ್ರೆಸ್ ಪಕ್ಷವು ಕರ್ನಾಟಕದ ಮಾದರಿಯಲ್ಲೇ `ಗ್ಯಾರಂಟಿ’ಗಳನ್ನು ಘೋಷಿಸಿದೆ. ಒಬಿಸಿ ಮತದಾರರೇ ನಿರ್ಣಾಯಕವಾಗಿರುವ ರಾಜ್ಯದಲ್ಲಿ ಜಾತಿ ಗಣತಿಯ ಅಸ್ತ್ರ ಬಿಟ್ಟಿದೆ. ಮೀಸಲಾತಿ ರಾಜಕಾರಣ ಚುನಾವಣೆಗಳ ಆಸುಪಾಸಿನಲ್ಲಿ ತಲೆಯೆತ್ತಿದೆ.

ಮತದಾನ ಮುಕ್ತ ಹಾಗೂ ಶಾಂತಿಯುತವಾಗಿ ನಡೆಯಲು ಅನುವಾಗುವಂತೆ ಕೇಂದ್ರೀಯ ಪಡೆಗಳ 700ಕ್ಕೂ ಹೆಚ್ಚು ತುಕಡಿಗಳನ್ನು ಮತ್ತು 2 ಲಕ್ಷಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸುಮಾರು 42 ಸಾವಿರ ಮತಗಟ್ಟೆಗಳಲ್ಲಿ ವೆಬಾಸ್ಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಮತದಾನ ಮುಂಜಾನೆ 7ರಿಂದ ಸಂಜೆ 6ರವರೆಗೆ ನಡೆಯಲಿದೆ.

Advertisement

– ಅಂತರ್ಜಾಲ ಮಾಹಿತಿ

Voting for Madhya Pradesh and Chhattisgarh state assembly elections in the five state elections, which is said to be the compass of the next Lok Sabha elections, has started early today. There is almost a direct contest between the Congress and the BJP here. Voting for 230 assembly seats in Madhya Pradesh and 70 constituencies out of 90 seats in the second phase of Chhattisgarh assembly elections has started at 7 am.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬ್ರೆಜಿಲ್‌ನಲ್ಲಿ ಹೆಚ್ಚಿದ ಪ್ರವಾಹ ತೀವ್ರತೆ : ಸಾವಿನ ಸಂಖ್ಯೆ 78ಕ್ಕೆ ಏರಿಕೆ, 105 ಮಂದಿ ನಾಪತ್ತೆ : 1,15,000ಕ್ಕೂ ಹೆಚ್ಚು ಜನರ ಸ್ಥಳಾಂತರ

ಎಲ್‌ ನಿನೋ ಪ್ರಭಾವ ಹಿನ್ನೆಲೆ ದೇಶದಾದ್ಯಂತ ಬರಗಾಲದ ಛಾಯೆ ಆವರಿಸಿತ್ತು. ಕಳೆದ ೧೫…

27 seconds ago

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಬೃರೋಬ್ಬರಿ 2 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ

ಒಬ್ಬ ಅಮಯಾಕ ಯುವಕನ ಹತ್ಯೆ(Murder) ಮಾಡಿದ ಆರೋಪಿಯನ್ನು ಕಂಡು ಹಿಡಿಯಲು ಸರ್ಕಾರ ಬರೋಬ್ಬರಿ…

32 mins ago

Karnataka Weather | 10-05-2024 | ಮಳೆ ಮುನ್ಸೂಚನೆ ಇಂದೂ ಇದೆ | ಆದರೆ….?

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇರುವುದರಿಂದ ಇಂತಹಲ್ಲೆ ಮಳೆಯಾಗುತ್ತದೆ ಅಂತ ಹೇಳಲು…

2 hours ago

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಸ ಎಸೆದರೂ “ದಂಡ” | ರಥಬೀದಿಯಲ್ಲಿ ಮಲಗಿದರೂ “ದಂಡ” |

ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಪಾವಿತ್ರ್ಯತೆ ಹೇಗೆಲ್ಲಾ ಉಳಿಸಬಹುದು..ಒಮ್ಮೆ ಯೋಚಿಸಿ ನೋಡಿ..

15 hours ago

ಬೆಳೆಗಳಿಗೆ ಕೀಟನಾಶಕ ಸಿಂಪಡಣೆಗೆ ಡ್ರೋನ್‌ ಬಳಕೆ | 1 ವರ್ಷಕ್ಕೆ ಅನುಮೋದನೆಯನ್ನು ವಿಸ್ತರಿಸಿದ ಸರ್ಕಾರ

ಕೃಷಿಯಲ್ಲಿ ಡ್ರೋನ್‌ ಬಳಕೆಯ ಬಗ್ಗೆ ಸರ್ಕಾರ ಒಂದು ವರ್ಷದ ಅವಧಿಗೆ ಅನುಮೋದನೆ ವಿಸ್ತರಣೆ…

17 hours ago