MIRROR FOCUS

ಚುನಾವಣಾ ಕಣ | ಚುನಾವಣೆಯಲ್ಲಿ ಏನಾಗಬಹುದು..? | ರಾಜಕೀಯ ವಿಶ್ಲೇಷಕ-ತಂತ್ರಗಾರ ಪ್ರಶಾಂತ್ ಕಿಶೋರ್‌ ಅಭಿಪ್ರಾಯವೇನು..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಲೋಕಸಭೆ ಚುನಾವಣೆಯಲ್ಲಿ(Lok sabhe Election) ಬಿಜೆಪಿ(BJP) ಅಧಿಕಾರಕ್ಕೆ ಬರಲು ಬೇಕಾದ ಬಹುಮತ(Majority) ಪಡೆಯಲಿದೆ. ಪಕ್ಷದ ಹಿಡಿತವಿಲ್ಲದ ದಕ್ಷಿಣ ಮತ್ತು ಪೂರ್ವ ರಾಜ್ಯಗಳಲ್ಲಿ ತನ್ನ ಸ್ಥಾನ ಮತ್ತು ಮತಗಳ ಪಾಲನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲಿದೆ ಎಂದು ಖ್ಯಾತ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್(Prashanth Kishor) ಭವಿಷ್ಯ ನುಡಿದಿದ್ದಾರೆ.

Advertisement

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲೋಕಸಮರದ ಬಗ್ಗೆ ಮಾತನಾಡಿರುವ ಅವರು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರನ್ನು ಕಟ್ಟಿಹಾಕಲು ಇದ್ದ ಅವಕಾಶಗಳನ್ನು ಕಾಂಗ್ರೆಸ್(Congress) ಕಳೆದುಕೊಂಡಿದೆ. ಹೀಗಾಗಿ ಅದು ಚುನಾವಣೆಯಲ್ಲಿ ಸಮರ್ಥ ಎದುರಾಳಿಯಾಗಿ ಉಳಿದಿಲ್ಲ. ತಪ್ಪಾದ ತಂತ್ರಗಳೇ ಅದಕ್ಕೆ ತಿರುಗುಬಾಣವಾಗಿವೆ ಎಂದು ಹೇಳಿದ್ದಾರೆ.

ಅಚ್ಚರಿಯ ಸಂಗತಿಯೆಂದರೆ, ದಕ್ಷಿಣ ಭಾರತದ ರಾಜ್ಯವಾದ ತೆಲಂಗಾಣದಲ್ಲಿ ಬಿಜೆಪಿ ಮೊದಲ ಅಥವಾ ಎರಡನೆಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪಶ್ಚಿಮಬಂಗಾಳ, ಒಡಿಶಾದಲ್ಲಿ ನಂಬರ್​ 1 ಪಕ್ಷವಾಗಿ ಸಾಧನೆ ಮಾಡಲಿದೆ. ತಮಿಳುನಾಡಿನಲ್ಲಿ ಅದರ ಮತ ಗಳಿಕೆಯನ್ನು ಎರಡಂಕಿಗೆ ಹೆಚ್ಚಿಸಿಕೊಳ್ಳಲಿದೆ. ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ಬಿಹಾರ ಮತ್ತು ಕೇರಳದಲ್ಲಿ 204 ಸ್ಥಾನಗಳನ್ನು ಅದು ಗಳಿಸಲಿದೆ. 2014 ಹಾಗೂ 2019ರಲ್ಲಿ ಈ ಎಲ್ಲ ರಾಜ್ಯಗಳಲ್ಲಿ 50 ಸ್ಥಾನಗಳನ್ನೂ ದಾಟಲು ಸಾಧ್ಯವಾಗಿರಲಿಲ್ಲ. ಈ ಬಾರಿ ದಾಖಲೆ ಪ್ರಮಾಣದಲ್ಲಿ ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.

ಬಿಜೆಪಿ ಗುರಿಯಾದ 370 ಸ್ಥಾನ ಗೆಲ್ಲಲ್ಲ: ಬಿಜೆಪಿ ಈ ಬಾರಿ 370 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಇದು ಸಾಧ್ಯವಾಗಲ್ಲ ಎಂಬುದು ಚುನಾವಣಾ ಚಾಣಕ್ಯನ ಹೇಳಿಕೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತನ್ನ ಗುರಿಯನ್ನು ತಲುಪಲು ಸಾಧ್ಯತೆ ಕಮ್ಮಿ. ಕಾಂಗ್ರೆಸ್​, ತನ್ನ ಪ್ರಾಬಲ್ಯವಿರುವ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಕನಿಷ್ಠ 100 ಸ್ಥಾನಗಳನ್ನು ಖೋತಾ ಮಾಡಬೇಕು. ಆಗ ಬಿಜೆಪಿಗೆ ಹಿನ್ನಡೆ ಉಂಟಾಗಲಿದೆ. ಆದರೆ, ಕಾಂಗ್ರೆಸ್​ನ ಪ್ರಸ್ತುತ ತಂತ್ರಗಳು ಬಿಜೆಪಿ ವಿರುದ್ಧವಾಗಿಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ವಿವಿಧ ನಾಯಕರು ಈ ರಾಜ್ಯಗಳಿಗೆ ಆಗಾಗ್ಗೆ ಭೇಟಿ ನೀಡುತ್ತಿರುವುದು ಸೀಟಿನ ಲೆಕ್ಕಾಚಾರದಲ್ಲಿ ಏರಿಕೆ ತರುವ ಸಾಧ್ಯತೆ ಇದೆ. ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಇದು ಕಂಡುಬರುತ್ತಿದೆ. ಪ್ರತಿಪಕ್ಷಗಳು ಈ ರಾಜ್ಯಗಳಲ್ಲಿ ತಮ್ಮ ನಿಜವಾದ ಪ್ರಯತ್ನವನ್ನೇ ಮಾಡಿಲ್ಲ ಎಂದು ಕಿಶೋರ್​ ಹೇಳಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ತಮಿಳುನಾಡು, ಕೇರಳಕ್ಕೆ ನೀಡಿದ ಭೇಟಿಗಳೆಷ್ಟು ಎಂಬುದನ್ನು ಗಮನಿಸಿ. ಅದೇ ರೀತಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಯಾವುದೇ ವಿರೋಧ ಪಕ್ಷಗಳ ನಾಯಕರ ಪ್ರವಾಸವನ್ನು ಲೆಕ್ಕ ಹಾಕಿ ನೋಡಿ. ಮೋದಿ-ಶಾ ಜೋಡಿ ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಠಿಕಾಣಿ ಹೂಡುತ್ತಿದ್ದರೆ, ಕಾಂಗ್ರೆಸ್ಸಿಗರು ಮಣಿಪುರ ಮತ್ತು ಮೇಘಾಲಯದಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಇದು ಹೇಗೆ ನಿಮಗೆ ಯಶಸ್ಸು ತಂದುಕೊಡುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಅಮೇಠಿ ಬಿಟ್ಟರೆ ತಪ್ಪು ಸಂದೇಶ ರವಾನೆ: 2019 ರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತ ನಂತರ ಗಾಂಧಿ ಕುಟುಂಬದ ಅಲ್ಲಿ ಸ್ಪರ್ಧೆ ಮಾಡಲು ಹಿಂಜರಿದರೆ, ಇದು ತಪ್ಪು ಸಂದೇಶಕ್ಕೆ ದಾರಿ ಮಾಡಿಕೊಡುತ್ತದೆ. ಆ ಪಕ್ಷ ಉತ್ತರಪ್ರದೇಶ, ಮಧ್ಯಪ್ರದೇಶ ಜಯಿಸದೇ, ಕೇರಳದಲ್ಲಿ ಮಾತ್ರ ಗೆದ್ದರೆ ಲಾಭವಿಲ್ಲ. 2014 ರಲ್ಲಿ ಮೋದಿ ಅವರು ಗುಜರಾತ್​ ಜೊತೆಗೆ ಉತ್ತರಪ್ರದೇಶವನ್ನೂ ಆಯ್ಕೆ ಮಾಡಿಕೊಂಡರು. ಇದಕ್ಕೆ ಕಾಣ ಹಿಂದಿ ರಾಜ್ಯಗಳಲ್ಲಿ ಪ್ರಭುತ್ವ ಸಾಧಿಸದ ಹೊರತು ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ರಾಜಕೀಯ ಕಾಗುಣಿತದ ಬಗ್ಗೆ ಬಿಚ್ಚಿಟ್ಟರು.

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹೆಚ್ಚುತ್ತಿರುವ ತಾಪಮಾನ | 2030 ರ ವೇಳೆಗೆ ಭಾರತದಲ್ಲಿ ಶೇ.5 ರಷ್ಟು ಉತ್ಪಾದನೆ ಕುಸಿತ

ಹೆಚ್ಚುತ್ತಿರುವ ತಾಪಮಾನದ ಕಾರಣದಿಂದ 2030 ರ ವೇಳೆಗೆ ಭಾರತವು ತನ್ನ ಒಟ್ಟು ದೇಶೀಯ…

6 hours ago

ರೈತರ ಹಿತಾಸಕ್ತಿ ರಕ್ಷಿಸಲು ಪಿಎಂ-ಕಿಸಾನ್ | ರೈತರಿಗೆ ನಿಖರ ಹವಾಮಾನ ಮುನ್ಸೂಚನೆಗೂ ಕ್ರಮ |

ಭಾರತೀಯ ಕೃಷಿ ವಲಯದ ಮೇಲೆ ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಲು ಸರ್ಕಾರ ಸುಸ್ಥಿರ…

8 hours ago

ದೇಶದಲ್ಲಿ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ…!

ದೇಶದ 40 ಸಾವಿರ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗಳಿಲ್ಲ, 2.28 ಲಕ್ಷ ಪಂಚಾಯತ್‌…

9 hours ago

ರಕ್ಷಣೆಗೂ ಭಕ್ಷಣೆಗೂ ಒಂದೇ ಕಾನೂನು

ಮಂತ್ರಗಳನ್ನು ಬೇರೆಯವರು ಉಪಯೋಗಿಸದಂತೆ ಹಿಂದೆ ಬ್ರಾಹ್ಮಣರು ಮಾಡಿದಂತೆ ಈಗ ತಾಂತ್ರಿಕತೆಯನ್ನು ತಿಳಿದವರು ಮಾಡುತ್ತಿದ್ದಾರೆ.…

9 hours ago

ಹವಾಮಾನ ವರದಿ | 02-04-2025 | ಮುಂದೆ 10 ದಿನಗಳ ಕಾಲ ಮಳೆಯ ವಾತಾವರಣ ಸಾಧ್ಯತೆ |

ಇಂದು ರಾಜ್ಯದ ವಿವಿದೆಡೆ ಮಳೆಯ ವಾತಾವರಣ ಇದೆ. ಮಳೆಯ ವಾತಾವರಣವು ಮುಂದಿನ 10…

18 hours ago

ಹೊಸರುಚಿ | ಗುಜ್ಜೆ ಬೋಂಡಾ

ಗುಜ್ಜೆ ಬೋಂಡಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ :  ಗುಜ್ಜೆ 3/4…

21 hours ago