ಲೋಕಸಮರ(Lok Sabha Election) ದಿನದಿಂದ ದಿನಕ್ಕೆ ಕಾವೇರುತ್ತಿದೆ. ಜೆಡಿಎಸ್(JDS) ಏಕಾಂಗಿಯಾಗಿ ಚುನಾವಣೆ(Election) ಎದುರಿಸುತ್ತಿತ್ತು. ಈ ಬಾರಿ ಬಿಜೆಪಿಯೊಂದಿಗೆ(BJP) ಮೈತ್ರಿ ಮಾಡಿಕೊಂಡು ಗೆಲುವಿಗಾಗಿ ಬಿಜೆಪಿ ಜೊತೆ ಶ್ರಮಿಸುತ್ತಿದೆ. ಈ ಮಧ್ಯೆ ದೇಶದ ಮೂರು ರಾಜ್ಯಗಳಲ್ಲಷ್ಟೇ ಅಧಿಕಾರದಲ್ಲಿರುವ ಕಾಂಗ್ರೆಸ್(Congress), ಕೇಂದ್ರದಲ್ಲಿ(Central) ಅಧಿಕಾರ ಹಿಡಿಯುವುದು ಅಸಾಧ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (H.D.Deve Gowda) ಭವಿಷ್ಯ ನುಡಿದರು.
ಹಾಸನದ ನಾಗರಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. 28 ಗ್ಯಾರೆಂಟಿಗಳನ್ನು ದೇಶದಲ್ಲಿ ಜಾರಿಗೆ ತರ್ತೀವಿ ಅಂತ ಹೇಳಿದ್ದಾರೆ. ಮೂವತ್ತು ಲಕ್ಷ ಜನಕ್ಕೆ ಕೆಲಸ ಕೊಡ್ತೀವಿ ಎಂದಿದ್ದಾರೆ. ಆದರೆ ದೇಶದಲ್ಲಿ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಮಾತ್ರ ಅವರ ಅಧಿಕಾರ ಇದೆ. ಇಂಥವರು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಎಲ್ಲಾ ರೀತಿಯ ಸಾಲಮನ್ನಾ ಮಾಡ್ತೀವಿ ಎಂದಿದ್ದಾರೆ. ಮೋದಿ ಅವರಿಂದ ಹೆಣ್ಣುಮಕ್ಕಳಿಗೆ 33 ಪರ್ಸೆಂಟ್ ಮೀಸಲಾತಿ ಮಸೂದೆ ಪಾಸ್ ಆಯ್ತು. ಇದನ್ನು ನಾನು ಮಾಡಿದ್ದು. ಅದನ್ನು ಪಾಸ್ ಮಾಡಿದ್ದಾರೆ. ಕಾಂಗ್ರೆಸ್‌ನವರು ಸುಳ್ಳು ಹೇಳಿ ಜನರಿಗೆ ಮೋಸ ಮಾಡಲು ಸಾಧ್ಯನಾ? ಎಲ್ಲಾ ಸಾಲ ಮನ್ನಾ ಮಾಡಲು ಎಲ್ಲಿದೆ ಬಜೆಟ್? ಕೇಂದ್ರದ ಬಜೆಟ್‌ನ ನಾಲ್ಕು ಪಟ್ಟು ಭರವಸೆ ಪ್ರಣಾಳಿಕೆಯಲ್ಲಿದ್ದು, ಈಡೇರಿಸಲು ಅಷ್ಟು ಹಣ ಕೂಡಿಸುವುದು ಹೇಗೆ ಎಂದು ಕೇಳಿದರು.
ಎಂಟು ಸಾವಿರ ಕೋಟಿ ಮನೆ ಕಟ್ಟಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ. ಅಧಿಕಾರದಲ್ಲಿದ್ದಾಗ ಏನೇನು ಮಾಡಿದ್ದೀರಾ? ಮನಮೋಹನ್ ಸಿಂಗ್ ಪಿಎಂ ಆದಾಗ ಎಷ್ಟು ಹಗರಣ ಆಯ್ತು ಎಂದು ಪ್ರಶ್ನಿಸಿದರು. ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆ ಕುರಿತು ಮಾತನಾಡಿ, ಇದು ಸತ್ಯಕ್ಕೆ ದೂರವಾದ ಪ್ರಣಾಳಿಕೆ. ಇದರಿಂದ ನಿಮಗೆ ಏನೇನು ಆಗಲ್ಲ. ಇದರಿಂದ ನೀವು ಯಾವ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಈ ಪ್ರಣಾಳಿಕೆಯನ್ನು ಜನ ಓದ್ತಾರೆ. ಆದರೆ ನಂಬಲ್ಲ ಎಂದು ‘ಕೈ’ ನಾಯಕರಿಗೆ ತಿರುಗೇಟು ನೀಡಿದರು.
ಮೊನ್ನೆ ಮೋದಿಯವರ ಬಳಿ ಕೊಬ್ಬರಿ ಬೆಲೆ ಬಿದ್ದು ಹೋಯ್ತು ಅಂದೆ. ಅವರು ನನ್ನನ್ನು ತಬ್ಬಿಕೊಂಡು ಕೂರಿಸಿದರು. ಕೂಡಲೇ ಕೊಬ್ಬರಿ ಖರೀದಿಗೆ ಆದೇಶ ನೀಡಿದರು.
- ಅಂತರ್ಜಾಲ ಮಾಹಿತಿ
Speaking at the JDS election campaign meeting in Nagarahalli village of Hassan, he said that the Congress had released a manifesto yesterday. He said that 28 guarantees will be implemented in the country. They said that they will give jobs to thirty lakh people. But in the country they have power only in Karnataka, Telangana, Himachal Pradesh. He questioned whether such people can come to power at the centre.