ಚಂದ್ರಗ್ರಹಣ ಹಿನ್ನೆಲೆ ಶ್ರೀವಾರಿ ದೇವಸ್ಥಾನವನ್ನು ಮುಚ್ಚಲಾಗಿದ್ದು, ನವೆಂಬರ್ 8 ರಂದು ಚಂದ್ರಗ್ರಹಣದ ಕಾರಣ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನವನ್ನು 11 ಗಂಟೆಗಳ ಕಾಲ ಮುಚ್ಚಲಾಗುವುದು.
Advertisement
ಬೆಳಗ್ಗೆ 8.40ರಿಂದ ಸಂಜೆ 7.20ರವರೆಗೆ ದೇವಸ್ಥಾನದ ಬಾಗಿಲು ಮುಚ್ಚಿರುತ್ತದೆ.
Advertisement
ಚಂದ್ರಗ್ರಹಣವು ಮಧ್ಯಾಹ್ನ 2.39 ರಿಂದ 6.27 ರವರೆಗೆ ಮುಂದುವರಿಯುತ್ತದೆ. ನವೆಂಬರ್ 7 ರಂದು ಚಂದ್ರಗ್ರಹಣದ ಹಿನ್ನೆಲೆ ಶಿಫಾರಸು ಪತ್ರಗಳನ್ನು ಸ್ವೀಕರಿಸುವುದಿಲ್ಲ ಎಂದು ಟಿಟಿಡಿ ತಿಳಿಸಿದೆ.
ನವೆಂಬರ್ 8 ರಂದು ಗ್ರಹಣ ದಿನದಂದು ತಿರುಪತಿಯಲ್ಲಿ ಸರ್ವದರ್ಶನಂ ಟೋಕನ್‌ಗಳ ವಿತರಣೆಯನ್ನು ನಿಲ್ಲಿಸಲಾಗುತ್ತದೆ. ಟಿಟಿಡಿ ವಿರಾಮ ದರ್ಶನಗಳು, ಆರ್ಜಿತ ಸೇವೆಗಳು ಮತ್ತು 300ರೂ. ವಿಶೇಷ ಪ್ರವೇಶ ದರ್ಶನಗಳನ್ನು ಸಹ ರದ್ದುಗೊಳಿಸಿದೆ.
Advertisement
ಗ್ರಹಣ ಮುಗಿದ ನಂತರ, ಸಂಪ್ರೋಕ್ಷಣೆ ಮತ್ತು ಪ್ರದೋಷ ಕಾಲದ ಪೂಜೆಗಳನ್ನು ನೆರವೇರಿಸಿದ ನಂತರ ದೇವಾಲಯವನ್ನು ಪುನಃ ತೆರೆಯಲಾಗುತ್ತದೆ. ವೈಕುಂಠಂ-2 ಕ್ಯೂ ಕಾಂಪ್ಲೆಕ್ಸ್ ಮೂಲಕ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement