88 ವರ್ಷ ಪ್ರಾಯದ ವೃದ್ಧರೊಬ್ಬರಿಗೆ ತಮ್ಮ ಇಳಿವಯಸ್ಸಿನಲ್ಲಿ ಲಕ್ಷ್ಮಿ ಒಲಿದಿದ್ದಾಳೆ. ಮಹಂತ್ ದ್ವಾರಕಾ ದಾಸ್ ಎಂಬ ವೃದ್ಧರಿಗೆ ಬರೋಬ್ಬರಿ 5 ಕೋಟಿ ಮೊತ್ತದ ಲಾಟರಿ ಹೊಡೆದಿದ್ದು, ಫುಲ್ ಖುಷ್ ಆಗಿದ್ದಾರೆ. ಇವರು ಕಳೆದ 35 ವರ್ಷಗಳಿಂದಲೂ ಲಕ್ಷ್ಮಿ ಒಲಿಯುವ ಆಸೆಯಿಂದ ಲಾಟರಿ ಟಿಕೆಟ್ ಅನ್ನು ಖರೀದಿಸುತ್ತಲೇ ಇದ್ದರೂ ಇವರ ಸತತ ಪ್ರಯತ್ನ ನೋಡಿದ ಲಕ್ಷ್ಮಿಗೂ ಒಲಿಯಬೇಕೆನಿಸಿತೇನೋ ಬರೋಬ್ಬರಿ 5 ಕೋಟಿ ಮೊತ್ತದ ಭರ್ಜರಿ ಲಾಟರಿ ಇವರ ಪಾಲಾಗಿದೆ.
ಲೊಹರಿ ಮಕರ ಸಂಕ್ರಾಂತಿ ಹಬ್ಬದ ಬಂಪರ್ ಲಾಟರಿ ಇದಾಗಿದ್ದು, ಅವರ ಬಹು ದಿನದ ಕನಸು ನನಸಾಗಿದೆ. ಪಂಜಾಬ್‌ನ ಡೆರಾ ಬಸ್ಸಿ ನಿವಾಸಿಯಾಗಿರುವ ಮಹಂತ್ ದ್ವಾರಕಾ ದಾಸ್ ಕಳೆದ 35 ವರ್ಷಗಳಿಂದಲೂ ಲಾಟರಿ ಟಿಕೆಟ್ ಖರೀದಿಸುತ್ತಲೇ ಇದ್ದರು. ಆದರೆ ಇದೇ ಮೊದಲ ಬಾರಿ ಅವರಿಗೆ ಲಾಟರಿ ಹೊಡೆದಿದ್ದು, ಅವರ ಬಹು ವರ್ಷಗಳ ಕನಸು ನನಸಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel