Advertisement
MIRROR FOCUS

ಗ್ಯಾಸ್‌ ಸರಬರಾಜು ಆತಂಕ : ಹೋಟೆಲ್‌ ಉದ್ಯಮಕ್ಕೆ ಹೊಡೆತ, ಗೃಹ ಬಳಕೆದಾರರಿಗೆ ಆದ್ಯತೆ

Share

ಭಾರತದ ಹಲವು ಮಹಾನಗರಗಳಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ಕೊರತೆ ಕಂಡುಬರುತ್ತಿರುವುದು ಹೋಟೆಲ್‌ ಮತ್ತು ಆಹಾರ ವಿತರಣೆ ಕ್ಷೇತ್ರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ಸಾಗಣೆ ಅಡಚಣೆಗಳಿಂದ LPG ಆಮದು ಸರಬರಾಜು ಸರಪಳಿ ಮೇಲೆ ಒತ್ತಡ ಉಂಟಾಗಿ, ಕೆಲವು ನಗರಗಳಲ್ಲಿ  ಅಡುಗೆ ಗ್ಯಾಸ್  ಲಭ್ಯತೆ ಕುಸಿದಿರುವ ವರದಿಗಳು ಬರುತ್ತಿವೆ.‌ ಈ ನಡುವೆ ಭಾರತದಲ್ಲಿ LPG ಸರಬರಾಜು ಬಗ್ಗೆ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗೃಹ ಬಳಕೆ LPG ಗೆ ಆದ್ಯತೆ ನೀಡಲು ರಾಜ್ಯಗಳಿಗೆ ಸೂಚನೆ ನೀಡಿದೆ.

ಫೈನಾಶ್ಸಿಯಲ್‌ ಎಕ್ಸ್‌ಪ್ರೆಸ್‌ ವರದಿ ಪ್ರಕಾರ,  ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಸಣ್ಣ ಹೋಟೆಲ್‌ಗಳು, ಧಾಬಾಗಳು, ಸೇರಿದಂತೆ ಸಣ್ಣ ಅಂಗಡಿಗಳು ಗ್ಯಾಸ್ ಸಿಗದೇ ಮೆನು ಕಡಿಮೆ ಮಾಡುವುದು ಅಥವಾ ತಾತ್ಕಾಲಿಕವಾಗಿ ಕಾರ್ಯಾಚರಣೆ ಕಡಿಮೆ ಮಾಡುವ ಪರಿಸ್ಥಿತಿ ಎದುರಿಸುತ್ತಿವೆ. ಕೆಲವೆಡೆ ವಾಣಿಜ್ಯ ಸಿಲಿಂಡರ್ ಗಳ ಬೆಲೆ ಹೆಚ್ಚಾಗಿ ಬ್ಲಾಕ್‌ ಮಾರ್ಕೆಟ್ ಚಟುವಟಿಕೆಗಳ ಆತಂಕವೂ ವ್ಯಕ್ತವಾಗಿದೆ ಎಂದು ವರದಿ ಮಾಡಿದೆ.

ಸರ್ಕಾರ ಗೃಹ ಬಳಕೆದಾರರಿಗೆ LPG ಸರಬರಾಜಿಗೆ ಆದ್ಯತೆ ನೀಡಲು ತೈಲ ಕಂಪನಿಗಳಿಗೆ ಸೂಚಿಸಿರುವ ಹಿನ್ನೆಲೆ, ವಾಣಿಜ್ಯ ಬಳಕೆದಾರರಿಗೆ ಸಿಲಿಂಡರ್‌ ಸರಬರಾಜು ಕಡಿಮೆಯಾಗಿರುವುದಾಗಿ ಉದ್ಯಮ ವಲಯ ಹೇಳುತ್ತಿದೆ. ಇದರಿಂದ ಆಹಾರ ಸರಬರಾಜು ಇಳಿಕೆ ಹಾಗೂ ಇತರ ಆದಾಯಕ್ಕೂ ಪರಿಣಾಮ ಬೀರುತ್ತಿರುವುದು ಗಮನಾರ್ಹ.

ಇನ್ನೊಂದೆಡೆ‌ ಭಯದಿಂದ ಅನಗತ್ಯ ಬುಕಿಂಗ್ ಹಾಗೂ ಸರಬರಾಜು ಒತ್ತಡದಿಂದ ಕೆಲವು ಪ್ರದೇಶಗಳಲ್ಲಿ ಗೃಹಬಳಕೆಯ ಅನಿಲ ವಿತರಣೆಗಳಲ್ಲಿ ತಡವಾಗುತ್ತಿರುವ ವರದಿಗಳೂ ಲಭ್ಯವಾಗಿವೆ. ಆದರೆ ದೊಡ್ಡ ಮಟ್ಟದ ಗೃಹ ಬಳಕೆ LPG ಕೊರತೆ ಇನ್ನೂ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಜ್ಞರ ಪ್ರಕಾರ ತೈಲ ಸಾಗಣೆ ಅಡಚಣೆ ಮುಂದುವರಿದರೆ LPG ಮಾರುಕಟ್ಟೆಯಲ್ಲಿ ಇನ್ನಷ್ಟು ಒತ್ತಡ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಹೋಟೆಲ್‌, ಕ್ಯಾಟರಿಂಗ್‌, ಸಣ್ಣ ಆಹಾರ ಉದ್ಯಮಗಳು ಪರ್ಯಾಯ ಅಡುಗೆ ವಿಧಾನಗಳತ್ತ ತಿರುಗುವ ಅನಿವಾರ್ಯತೆ ಎದುರಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Commercial LPG shortages in major Indian cities are affecting restaurants, cloud kitchens, and food delivery operations due to supply disruptions linked to West Asian tensions. While the government is prioritizing domestic LPG consumers, delays and localized panic booking have been reported in some regions.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಬೆಂಗಳೂರಿನಲ್ಲಿ ಭಾರತದ ಅತಿದೊಡ್ಡ ಕಾಫಿ ಉತ್ಸವ- ತೋಟದಿಂದ ಕಪ್‌ವರೆಗೆ ಭಾರತದ ಕಾಫಿಯ ಹೊಸ ಪಯಣ

ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…

3 hours ago

‘ಅರ್ಥ’ ಮತ್ತು ‘ಅಪಾರ್ಥ’ದ ನಡುವೆ ಇರುವ ‘ಪಾ’ ಯಾವುದು?

ಅಪಾರ್ಥವಾಗುವುದು ಮಾನವ ಸಹಜ; ಆದರೆ ಅಪಾರ್ಥವಾಯಿತೆಂಬ ಅರಿವು ಬಂದ ನಂತರ ಮತ್ತೆ ‘ಅರ್ಥ’ದೆಡೆಗೆ…

4 hours ago

ಹವಾಮಾನ ವರದಿ | 31-08-2026 | ಸೆ.3ರಿಂದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಸದ್ಯ ವ್ಯಾಪಕ ಭಾರಿ ಮಳೆಯ ಸಾಧ್ಯತೆ ಕಡಿಮೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10…

20 hours ago

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

2 days ago

ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ

ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…

2 days ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…

2 days ago