ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ 2 ನೇ ವಾರ್ಡ್ ನ ಮುರ ಪಚ್ಚಡ್ಕ ನಿವಾಸಿ ಬಿತೂರು ಎಂಬವರ ಸುಮಾರು 30 ದನಗಳಿಗೆ ಚರ್ಮಗಂಟು ರೋಗ ಸಂಭವಿಸಿದ್ದು, ರೋಗದ ತೀವ್ರತೆಯಿಂದ 7 ದನಗಳು ಮೃತಪಟ್ಟಿವೆ.
Advertisement
Advertisement
ಮಾನವೀಯತೆಯ ನೆಲೆಯಲ್ಲಿ ಬಂದಾರು ಗ್ರಾಮ ಪಂಚಾಯತ್ ವತಿಯಿಂದ ಸತ್ತಿರುವ ದನಗಳನ್ನು ಜೆಸಿಬಿ ಮೂಲಕ ಗುಂಡಿ ತೆಗದು ದಪನ ಮಾಡಲಾಯಿತು. ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪರಮೇಶ್ವರಿ ಕೆ.ಗೌಡ, ಉಪಾಧ್ಯಕ್ಷರಾದ ಗಂಗಾಧರ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ದಿನೇಶ್ ಗೌಡ ಖಂಡಿಗ, ಮಂಜುಶ್ರೀ, ಸಿಬ್ಬಂದಿ ಪ್ರವೀಣ್ ಗೌಡ ಹಾಗೂ ಸ್ಥಳೀಯರಾದ ಮುಸನ್ ಪಚ್ಚಡ್ಕ ಮುರ ಉಪಸ್ಥಿತರಿದ್ದರು. ಪಶುವೈದ್ಯರಿಗೆ ಮಾಹಿತಿ ನೀಡಲಾಗಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement