ಪ್ರತಿ ವರ್ಷ ಅದ್ಧೂರಿಯಾಗಿ ನಡೆಯುತ್ತೆ ಮಡಿಕೇರಿ ದಸರಾ | ಮಡಿಕೇರಿ ದಸರಾ ಬದಲಾವಣೆ ಬೇಡುತ್ತಿದೆ..

October 28, 2023
7:21 PM

ಮಡಿಕೇರಿ‌(Madikeri) ನಗರದ ರಸ್ತೆಗಳು ಬಹಳಾ ಇಕ್ಕಟ್ಟಿನದ್ದು. ಮಡಿಕೇರಿ ನಗರವೂ ಪುಟಾಣಿ. ಸುಮಾರು ಒಂದು ಲಕ್ಷ ಜನ ಜಮಾಯಿಸಿದರೆ ಇಲ್ಲಿ ಕಾಲಿಡಲೂ ಕಷ್ಟ ಸಾಧ್ಯ. ಒಂದು ಲಕ್ಷ ಮಂದಿಯನ್ನು ಎಂಟು ಸಾವಿರ ಪೋಲಿಸರು ನಿಭಾಯಿಸಲು ಸಾಧ್ಯವೇ?.

Advertisement
Advertisement
Advertisement
Advertisement

ಮೊನ್ನೆ ದಿನ ಸಂಪನ್ನವಾದ ದಸರಾ(dasara) ರಾತ್ರಿ ದಶಮಂಟಪಗಳ ಚಲನವಲನ ನೋಡಲು ಸಾರ್ವಜನಿಕರಿಗೆ ಪ್ರವಾಸಿಗರಿಗೆ ಹತ್ತಿರ ಸುಳಿದಾಡಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಫ್ಯಾಮಿಲಿಯಾಗಿ ದಸರಾ ನೋಡಲು ಅಂತೂ ಕಷ್ಟ ಸಾಧ್ಯವೇ ಆಗಿತ್ತು. ಆ ನೂಕು ನುಗ್ಗಲಲ್ಲಿ ಹೆಣ್ಣಮಕ್ಕಳು, ಮಹಿಳೆಯರು ಅನುಭವಿಸಿದ ಕಿರಿಕಿರಿ ಉಂಟಲ್ಲ ಅದನ್ನು ಅವರೂ ಹೇಳಿಕೊಳ್ಳಲು ಆಗಲ್ಲ. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಎಣ್ಣೆ ನಿಷಿದ್ಧ ಆಗಿದ್ದರೂ ಬಹುತೇಕ ಪ್ರವಾಸಿಗರು ಹಾಗೂ ಒಂದಿಷ್ಟು ಸ್ಥಳೀಯರು ಬೆಳಗ್ಗಿನ ಜಾವದವರೆಗೂ ಅಮಲಿನಲ್ಲೇ ಇದ್ದರು. ಕೋಟೆ ಶ್ರೀ ಮಹಾಗಣಪತಿ ಶೋ ಮುಗಿಸಿ ಚೌಡೇಶ್ವರಿ ಶೋ‌ ನೋಡಲು ಹೊರಟ ನನ್ನನ್ನು ನಗರ ಪೊಲೀಸ್ ಸ್ಟೇಷನ್ ಡೌನಿಂದ ಕೆಳಗೆ ಪೊಸ್ಟ್ ಆಫಿಸ್ ವರೆಗೂ ಎತ್ತಿಕೊಂಡೆ ಬಂದು ಬಿಟ್ಟರು. ಆ ಭವ್ಯ ಮೆರವಣಿಗೆಯಲ್ಲಿ ನನ್ನ ಪಾದಗಳಿಗೆ, ಕಾಲಿನ ಮೂಳೆಗೆ ಬಿದ್ದ ಒದೆತವನ್ನು ನನಗಿಲ್ಲಿ ಪದಗಳಲ್ಲಿ ವಿವರಿಸಲು ಆಗಲ್ಲ.

Advertisement

ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಆ ರಾತ್ರಿ ಬೆಳಕಿಲ್ಲದ , ಕುರುಚಲು ಕಾಡುಗಳಲ್ಲಿ ಲೀಟರುಗಟ್ಟಲೆ ಚೆಲ್ಲಿದ ಹುಚ್ಚೆ ವಾಸನೆ ಇನ್ನೊಂದು ವಾರಗಳ ತನಕ ಸುವಾಸನೆ ಬೀರುತ್ತಲೇ ಇರುತ್ತದೆ. ಈ ಇಕ್ಕಟ್ಟಿನಲ್ಲಿ, ಬಿಝಿಯಲ್ಲಿ ಶೌಚಾಲಯ ವ್ಯವಸ್ಥೆ ಮಾಡಲು ಆಡಳಿತ ವ್ಯವಸ್ಥೆ ಮರೆತೇ ಹೊಗಿತ್ತು ಮಾಡುವುದಾದರೂ ಎಲ್ಲಿ? ಎಲ್ಲಾ ದಶಮಂಟಪಗಳ ಶೋಭಾಯಾತ್ರೆಗಳನ್ನು ಮೀಡಿಯಾದವರು ಹಾಗೂ ತೀರ್ಪುಗಾರರು ಬಿಟ್ಟರೆ ಇನ್ಯಾರಿಗೂ ಕಣ್ತುಂಬಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಒಂದು ಮಂಟಪದ ಕಮಿಟಿಯ ಸದಸ್ಯರಿಗೆ ಅವರ ಮಂಟಪವನ್ನು ಬಿಟ್ಟು ಕದಲಲೂ ಆಗುವುದಿಲ್ಲ. ಕುಂದುರುಮೊಟ್ಟೆ ಚೌಟಿಮಾರಿಯಮ್ಮ ಮಂಟಪದ ಟ್ಯಾಕ್ಟರ್ ಕುಸಿದು, ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಅಮ್ಮನ ಕೃಪೆ‌ ಸಾರ್ವಜನಿಕರು, ಮಂಟಪದ ಸದಸ್ಯರು ಬಚಾವ್ ಆಗಿದ್ದಾರೆ.

ಇದಕ್ಕೆಲ್ಲಾ ಏನು ಪರಿಹಾರ? ಈ ವಿದ್ಯಮಾನಗಳು ಹೀಗೆ ಮುಂದುವರೆದರೆ ಮುಂದಿನ ದಿನಮಾನಗಳಲ್ಲಿ ಸಾರ್ವಜನಿಕರು ಸ್ಥಳೀಯರು ದಸರಾ ದಿನ ಬಾಗಿಲು ಬಡಿದು ಒಳಗೆ ಕೂರಬೇಕಾಗಿ ಬರಬಹುದು.

Advertisement

ನವರಾತ್ರಿ ಒಂಭತ್ತು ದಿನ ನಡೆಯುತ್ತದೆ. ನಗರದ ಹೃದಯ ಭಾಗದಲ್ಲಿ ದಿನಕ್ಕೊಂದು ಮಂಟಪಗಳ ಶೋ ನೀಡಲು ವ್ಯವಸ್ಥೆ ಮಾಡಬಹುದು. ಈ ನೂಕು ನುಗ್ಗಲು ತಪ್ಪುತ್ತದೆ. ಎಲ್ಲರೂ ಎಂಜಾಯ್ ಮಾಡಿ ದಸರಾ ಕಣ್ತುಂಬಿಕೊಳ್ಳಬಹುದು. ಹತ್ತೂ ದಿನ ಈ ಹಬ್ಬ ನಡೆಯಲಿ. ಸಂಜೆ‌ ಎಂಟರಿಂದ ಹನ್ನೆರಡುಗಂಟೆಗಳ ವರೆಗೆ ಕುಣಿದು ಕುಪ್ಪಳಿಸಲಿ. ಅದರ ಪಾಡಿಗೆ ವೇದಿಕೆ ಕಾರ್ಯಕ್ರಮಗಳು ನಡೆಯಲಿ. ಹತ್ತೂ ದಿನವೂ ಪ್ರವಾಸಿಗರು‌ ಬರಲಿ ಕೊಡಗಿನ ಹೋಂ ಸ್ಟೇ, ರೆಸಾರ್ಟ್ ಸೇರಿದಂತೆ, ಹೋಟೆಲ್, ಸ್ಪೈಸಸ್ ಎಲ್ಲರಿಗೂ ಲಾಭವಾಗಲಿ. ಇದರಿಂದ ಒಂದೇ ದಿನ ಇಕ್ಕಟ್ಟಾಗಿ ಅಸ್ತವ್ಯಸ್ತತೆಯಿಂದ ಕಂಗಾಲಾವುದು ತಪ್ಪುತ್ತದೆ. ನೂಕು ನುಗ್ಗಲೂ ಆಗುವುದಿಲ್ಲ. ಹುಡುಗಿಯರು, ಹೆಂಗಸರು, ಮಕ್ಕಳೂ ದಸರಾ ಎಂಜಾಯ್ ಮಾಡುತ್ತಾರೆ.

ಬರಹ – ರಂಜಿತ್ ಕವಲಪಾರ

Advertisement
Madikeri city roads are very narrow. Madikeri city is also small. If around one lakh people gather, it can be difficult to even set foot here. Can eight thousand police handle one lakh people?

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Weather Updates | ಕರಾವಳಿ ಭಾಗದಲ್ಲಿ ಮಳೆಯ ಸಾಧ್ಯತೆ ಕ್ಷೀಣ |
January 30, 2025
11:47 AM
by: ಸಾಯಿಶೇಖರ್ ಕರಿಕಳ
ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಕ್ರಮ | ರೈತರ ಜತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚರ್ಚೆ
January 30, 2025
7:28 AM
by: The Rural Mirror ಸುದ್ದಿಜಾಲ
5 ಲಕ್ಷ ರಸ್ತೆ ಅಪಘಾತ, 1.80 ಲಕ್ಷ ಮಂದಿ ಬಲಿ |
January 30, 2025
7:24 AM
by: ದ ರೂರಲ್ ಮಿರರ್.ಕಾಂ
ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸದಂತೆ ಎಚ್ಚರವಹಿಸಲು ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ
January 30, 2025
7:19 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror