ವಂಚನೆ ಅನುಮಾನಗಳ ಮೇಲೆ ಶ್ರೀಲಂಕಾದಿಂದ ಆಮದು ಮಾಡಿಕೊಂಡ ಅಡಿಕೆಯನ್ನು ಕಸ್ಟಮ್ಸ್ ಇಲಾಖೆ ವಶಕ್ಕೆ ತೆಗೆದುಕೊಂಡಿತ್ತು. ಇದೀಗ ಮದ್ರಾಸ್ ಹೈಕೋರ್ಟ್ ಷರತ್ತುಗಳೊಂದಿಗೆ ತಾತ್ಕಾಲಿಕವಾಗಿ ಬಿಡುಗಡೆಗೆ ನಿರ್ದೆಶನ ನೀಡಿದೆ.
ವಂಚನೆ ಆರೋಪದಡಿ ವಶಪಡಿಸಿಕೊಂಡಿರುವ ಶ್ರೀಲಂಕಾದಿಂದ ಆಮದು ಮಾಡಿಕೊಂಡಿರುವ ಅಡಿಕೆಯನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡುವಂತೆ ಕಸ್ಟಮ್ಸ್ ಇಲಾಖೆಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ವಿಶ್ವ ಎಂಟರ್‌ಪ್ರೈಸ್ ಅವರು ಶ್ರೀಲಂಕಾ ಮೂಲದ ಡಿಎಲ್‌ಕೆ ಎಂಬ ರಫ್ತುದಾರರಿಂದ 540 ಚೀಲ ಅಡಿಕೆಯನ್ನು ಆಮದು ಮಾಡಿಕೊಂಡಿದ್ದರು. ಇದನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿತ್ತು. ಇಂಡೋ-ಶ್ರೀಲಂಕಾ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ವಿವರಿಸಿರುವ ನಿಬಂಧನೆಗಳ ಪ್ರಕಾರ, ಅಡಿಕೆಯನ್ನು ಸುಂಕ-ಮುಕ್ತವಾಗಿ ಆಮದು ಮಾಡಿಕೊಳ್ಳಬಹುದು ಎಂದು ಇಲ್ಲಿ ವಾದಿಸಲಾಗಿತ್ತು.ಕಸ್ಟಮ್ಸ್ ನಿಯಮಗಳ ಪ್ರಕಾರ, ಮೂಲ ಪ್ರಮಾಣಪತ್ರವನ್ನು ಸಲ್ಲಿಸಿದ್ದರೂ ಮತ್ತು ಅದರ ದೃಢೀಕರಣದ ಪರಿಶೀಲನೆಯ ಹೊರತಾಗಿಯೂ, ಅಡಿಕೆಯನ್ನು ಬಿಡುಗಡೆ ಮಾಡಲಾಗಿಲ್ಲ ಎಂದು ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಇಲ್ಲಿ ಅಡಿಕೆ ಸಾಗಾಟದ ಸರಕುಗಳಿಗೆ ಸಂಬಂಧಿಸಿದಂತೆ, ಮೂಲದ ಪ್ರಮಾಣಪತ್ರವನ್ನು 22.06.2023 ರಂದು ನೀಡಲಾಗಿದೆ ಎಂದು ಪ್ರತಿಪಾದಿಸಲಾಗಿದೆ. ಶ್ರೀಲಂಕಾದ ವಾಣಿಜ್ಯ ಇಲಾಖೆಯು 31.10.2023 ರಂದು ಪರಿಶೀಲನಾ ಪ್ರಮಾಣಪತ್ರವನ್ನು ನೀಡಿದೆ. ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ಒಳಗೊಂಡ ಪತ್ರವ್ಯವಹಾರಗಳ ನಂತರ ಈ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ವಕೀಲರು ವಾದಿಸಿದ್ದರು.
ಇದೀಗ ಷರತ್ತುಗಳೊಂದಿಗೆ ವಶಪಡಿಸಿಕೊಂಡ ಅಡಿಕೆಯನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡುವಂತೆ ಕೋರ್ಟ್ ನಿರ್ದೇಶನ ನೀಡಿದೆ.
ಮೂಲ : ತೆರಿಗೆ ಸುದ್ದಿಗಳು
ಕೇಂದ್ರ ಸರ್ಕಾರದ ಫಸಲ್ ಭೀಮಾ ಯೋಜನೆಯಡಿ ಅತಿ ಹೆಚ್ಚು ಬೆಳೆ ವಿಮೆ ಪಡೆದ…
ಲಡಾಖ್‌ನ ದ್ರಾಸುದಲ್ಲಿಂದು 26ನೇ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ…
ಧರ್ಮ ಎನ್ನುವ ತಳಹದಿಯಲ್ಲಿ ಬದುಕು ನಿಂತಿದೆ. ಅರ್ಥ ಮತ್ತು ಕಾಮನೆಗಳಿಗೆ ಧರ್ಮವೇ ತಳಹದಿ.…
ಬಂಗಾಳಕೊಲ್ಲಿಯ ವಾಯುಭಾರ ಕುಸಿತವು ಜುಲೈ 27 ರಂದು ಮಧ್ಯಪ್ರದೇಶ ದಾಟಿ ರಾಜಸ್ಥಾನ ಗಡಿ…
ಭಾರತದಲ್ಲಿ, ಮೇ ತಿಂಗಳಿನಲ್ಲಿ ಉಂಟಾದ ತೀವ್ರ ಉಷ್ಣತೆಯು ಬೆಳೆ ಇಳುವರಿ ಮತ್ತು ಪೂರೈಕೆ…
ಗಂಡ-ಹೆಂಡತಿ ಸಂಬಂಧವು ಜೀವನದ ಅತ್ಯಂತ ಗಾಢವಾದ ಮತ್ತು ಆಧ್ಯಾತ್ಮಿಕ ಬಂಧವಾಗಿದೆ. ಜ್ಯೋತಿಷ್ಯ ಶಾಸ್ತ್ರದ…