ಮಿತ್ರ ಕಲಾಬಳಗದ ನೇತೃತ್ವದಲ್ಲಿ ತಯಾರಾಗುತ್ತಿರುವ “ಮಧ್ಯಂತರ” ಕಿರುಚಿತ್ರದ ಪೋಸ್ಟರ್ ಬಿಡುಗಡೆ ಈಚೆಗೆ ನಡೆಯಿತು. ಚಿತ್ರವನ್ನು “ಐಡಿಯಾ ಬಾಸ್ಕೆಟ್” ಯೂ ಟ್ಯೂಬ್ ಚಾನಲ್ ಸಹಯೋಗದೊಂದಿಗೆ ನಿರ್ಮಿಸಲಾಗುತ್ತಿದ್ದು, ಚಿತ್ರಕ್ಕೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಡಾ. ಆದಿತ್ಯ ಭಟ್ ಚಣಿಲ ಅವರು ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಮಾಡಿದ್ದಾರೆ. ಚಿತ್ರದ ಟ್ರೈಲರ್ ಎ.14 ರಂದು ಸಂಜೆ 6 ಗಂಟೆಗೆ ಬಿಡುಗಡೆ ಆಗಲಿದೆ. ಚಿತ್ರ ಬಿಡುಗಡೆಯ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುತ್ತದೆ ಎಂದು ಚಿತ್ರ ತಂಡ ಹೇಳಿದೆ.
ಜೀವನದಲ್ಲಿ ಕೆಲವೊಮ್ಮೆ ಹಣ ಮತ್ತು ಸಂಸಾರದ ನಡುವೆ ಆಗುವ ಸಂಘರ್ಷದಲ್ಲಿ ನಮ್ಮನ್ನು ನಾವೇ ಮರೆತು ಹೋಗುತ್ತೇವೆ. ಅದೇ ಈ ಮಧ್ಯಂತರ. ಅತ್ಯಂತ ನಿರೀಕ್ಷೆ ಹುಟ್ಟಿಸಿದ ಈ ಕಿರುಚಿತ್ರ ಈಗಾಗಲೇ ಸದ್ದು ಮಾಡುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel