ಶಿವಂ… ಶಿವೋಹಂ… ನಿರಾಭರಣ ಶಿವನಿಗೆ ಇಂದು ಬಿಲ್ವಪತ್ರೆ ತನ್ನಿರೋ…..

March 11, 2021
7:00 AM

ಶಿವಂ ಶಿವೋಹಂ… ಶಿವಮಯವಾದ ಈ ದಿನ ಶಿವರಾತ್ರಿ. ಶಿವನಿಗೆ  ಪ್ರಿಯವಾದ ದಿನ ಶಿವರಾತ್ರಿ.

Advertisement
Advertisement
ಮಾಘ ಮಾಸದ ಶುಕ್ಲ ಪಕ್ಷದ ಚತುರ್ದಶಿಯ ದಿನವೇ ಮಹಾಶಿವರಾತ್ರಿ.  14 ಇಂದ್ರಿಯಗಳನ್ನು ಜಯಿಸಿದವನು ಶಿವ.  14 ಲೋಕಗಳಿಗೆ ಒಡೆಯನಾಗಿರುವ ಪರಮೇಶ್ವರನಿಗೆ ಚತುರ್ದಶಿ ಯಂದು ಪೂಜಿಸುವುದು ಬಹು ವಿಶೇಷವಾಗಿರುತ್ತದೆ.  ಶಿವರಾತ್ರಿ ಯಂದು   ಶಿವಪಾರ್ವತಿಯರು ಜತೆಗೂಡಿ  ಪ್ರಪಂಚ ಪರ್ಯಟನೆ ಮಾಡುತ್ತಾರೆ. ತನ್ನನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ  ಶಿವ ಅವರಿಗೊಲಿಯುತ್ತಾನೆ, ಇಷ್ಟಗಳನ್ನು ಈಡೇರಿಸುತ್ತಾನೆ, ತಪ್ಪುಗಳನ್ನು ಮನ್ನಿಸುತ್ತಾನೆ , ಪಾಪಗಳಿಂದ ಮುಕ್ತನಾಗಿಸುತ್ತಾನೆ, ಎಂಬುದು ಭಕ್ತರ  ನಂಬುಗೆ.  ನಿರಾಭರಣನಾದ ಶಿವನಿಗೆ ಬಿಲ್ವಪತ್ರೆ, ಎಕ್ಕದ ಹೂಗಳೆಂದರೆ ಬಲು ಪ್ರಿಯ. 
 
ಸಾಮಾನ್ಯವಾಗಿ ಹಬ್ಬಗಳೆಂದರೆ  ನೆನಪಾಗುವುದು ಭಕ್ಷ್ಯ ಭೋಜನಗಳು. ಆದರೆ ಶಿವರಾತ್ರಿ ಇದಕ್ಕೆ ಅಪವಾದ.  ಈ ದಿನ ಉಪವಾಸಕ್ಕೇ ಪ್ರಾಮುಖ್ಯತೆ.  ನಮ್ಮಲ್ಲಿ ಶಿವರಾತ್ರಿಯ ದಿನ ರಾತ್ರಿ ನೈವೇದ್ಯಕ್ಕಾಗಿ  ಬಾಳೆಕಾಯಿ ದೋಸೆ ಅದೂ ಉಪ್ಪು ಹಾಕದೆ ಮಾಡಲಾಗುತ್ತದೆ. ಜೊತೆಗೆ ಬಾಳೆಹಣ್ಣು  ರಸಾಯನ.  ನಮ್ಮನೆಯಲ್ಲಿ  ಬೆಳೆದ  ಕದಳಿ ಬಾಳೆಕಾಯಿಯ ದೋಸೆ  ಮಾಡುತ್ತೇವೆ.  ಬಾಳೆಕಾಯಿಯ ಸಿಪ್ಪೆ ತೆಗೆದು ನುಣ್ಣಗೆ ಬೀಸಬೇಕು.  ದೋಸೆ ಕಾವಲಿಯಲ್ಲಿ ಬರಿ ಕೈಯಿಂದ ಬೀಸಿದ ಬಾಳೆಕಾಯಿ ಹಿಟ್ಟಿನ ತೆಳ್ಳನೆಯ  ದೋಸೆ ಮಾಡಲಾಗುತ್ತದೆ.  ಅದರೊಂದಿಗೆ ಬಾಳೆಹಣ್ಣು ರಸಾಯನ . ಕೆಲವೆಡೆ ಬೇಯಿಸಿದ ಬಾಳೆಕಾಯಿಯ ಸೇಮಿಗೆಯೂ  ಮಾಡುವ ಪರಿಪಾಠವಿದೆ.
ಅನನ್ಯ ಭಟ್‌ ಹಾಡಿರುವ  ಹಾಡು….
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಭಾರತದಲ್ಲಿ ಏರಿದ ತಾಪಮಾನ | ಅತ್ತ ತಾಂಜೇನಿಯಾದಲ್ಲಿ ಭಾರೀ ಮಳೆ, ಪ್ರವಾಹ | 155 ಮಂದಿ ಸಾವು |
April 28, 2024
4:55 PM
by: The Rural Mirror ಸುದ್ದಿಜಾಲ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಮುಂದಿನ ವಾರ ಕಾಡಲಿದೆ ರಣ ಬಿಸಿಲು | ದೂರ ಸಾಗಿದ ಮಳೆ | ಬಿಸಿ ಗಾಳಿಯ ಮುನ್ಸೂಚನೆ |
April 28, 2024
4:40 PM
by: The Rural Mirror ಸುದ್ದಿಜಾಲ
ಮಳೆಗಾಗಿ ಪುತ್ತೂರು ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ |
April 28, 2024
2:36 PM
by: ದ ರೂರಲ್ ಮಿರರ್.ಕಾಂ
ಮೇ.1 | ಮಳೆಗಾಗಿ ನಡೆಯಲಿದೆ ಪಂಜದಲ್ಲಿ ಪ್ರಾರ್ಥನೆ
April 28, 2024
12:20 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror