ನ್ಯೂಜಿಲೆಂಡ್‌ನಲ್ಲಿ ಉಡಾವಣೆ ಮಾಡಲಾಗಿದೆ ಎಂದು ನಂಬಲಾದ ಉಪಗ್ರಹದ ಸುಟ್ಟ ತುಣುಕುಗಳು ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಲಾಡ್ಬೋರಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಉಪಗ್ರಹ ಪತನಗೊಂಡಿದೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಡ್ಬೋರಿ ಗ್ರಾಮದ ಸ್ಥಳೀಯರು ರಾತ್ರಿ 8 ಗಂಟೆಗೆ ಆಕಾಶದಲ್ಲಿ “ಉಲ್ಕಾಶಿಲೆ” ಕಾಣಿಸಿಕೊಂಡ ಸ್ವಲ್ಪ ಸಮಯದ ನಂತರ ದೊಡ್ಡ ಶಬ್ದವನ್ನು ಕೇಳಿದರು. ಏರೋಪ್ಲೇನ್‌ನಂತೆ ಸದ್ದು ಮಾಡಿದ ಶಬ್ದದ ನಂತರ ದೊಡ್ಡ ಸ್ಫೋಟ ಸಂಭವಿಸಿದೆ. ನಂತರ, ಈ ಪ್ರದೇಶದಲ್ಲಿ ಉಪಗ್ರಹದ ತುಣುಕುಗಳು ಕಂಡುಬಂದಿವೆ.
ಖಗೋಳಶಾಸ್ತ್ರಜ್ಞರ ತಂಡವು ಸ್ಥಳಕ್ಕೆ ಧಾವಿಸಿದ್ದು, ಈ ತುಣುಕುಗಳು ನ್ಯೂಜಿಲೆಂಡ್‌ನ ಮಹಿಯಾ ಪೆನಿನ್ಸುಲಾದಿಂದ 430 ಕಿಮೀ ಎತ್ತರಕ್ಕೆ ಉಡಾವಣೆಯಾದ ‘ಬ್ಲಾಕ್‌ಸ್ಕಿ’ ಎಂಬ ಉಪಗ್ರಹದ ತುಣುಕುಗಳಾಗಿರಬಹುದು ಎಂದು ತೀರ್ಮಾನಿಸಿದರು. ಖಗೋಳಶಾಸ್ತ್ರಜ್ಞರ ತಂಡ ಈ ಬಗ್ಗೆ ತನಿಖೆ ನಡೆಸುತ್ತಿದೆ.
ಕರ್ನಾಟಕದಾದ್ಯಂತ ಒಣಹವೆ ಮುಂದುವರಿಯಲಿದ್ದು, ಉತ್ತರ ಭಾರತದ ಶೀತ ಹಾಗೂ ಶುಷ್ಕ ಗಾಳಿಯಿಂದ ಚಳಿಯ…
ಮೈಸೂರಿನ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ವಿದ್ವತ್ ಪರೀಕ್ಷೆಯಲ್ಲಿ…
ಬಳ್ಳಾರಿಯ ಗೃಹಿಣಿ ಆರ್.ಜೆ. ಸುಜಾತ ಅವರು ಮನೆಯ ತಾರಸಿಯಲ್ಲಿ 150ಕ್ಕೂ ಹೆಚ್ಚು ಸಸ್ಯಗಳನ್ನು…
ಹೋಟೆಲ್‌ಗಳಲ್ಲಿ ಬಳಕೆಯಾದ ಅಡುಗೆ ಎಣ್ಣೆ ಸಂಗ್ರಹಣೆ ಮತ್ತು ವಿಲೇವಾರಿಗೆ ಮೂರು ತಿಂಗಳೊಳಗೆ ಅಧಿಕೃತ…
ಕೃಷಿ ಕ್ಷೇತ್ರದಲ್ಲಿ ವಾರ್ಷಿಕ ಶೇ.4ಕ್ಕೂ ಅಧಿಕ ಬೆಳವಣಿಗೆ ದಾಖಲಾಗಿದ್ದು, ರೈತರ ಆದಾಯ ಹೆಚ್ಚಿಸಲು…
ಸಾವಯವ ಕೃಷಿ ನಿರ್ದಿಷ್ಟ ಉತ್ಪಾದನಾ ಮಾನದಂಡ ಮತ್ತು ಪ್ರಮಾಣೀಕರಣಕ್ಕೆ ಒತ್ತು ನೀಡಿದರೆ, ಪುನರುತ್ಪಾದಕ…