ಪರಿವರ್ತನೆಯ ಕಾಲ ಇದು ಸಂಕ್ರಮಣ | ಸಂಕ್ರಾಂತಿಯ ಶುಭಾಶಯಗಳು.

January 14, 2021
7:29 AM

ಹಬ್ಬಗಳು ಟಾನಿಕ್ ನಂತೆ.! ಒಪ್ಪುತ್ತೀರಲ್ವಾ?

ದಿನನಿತ್ಯದ ಜಂಜಡಗಳಿಂದ ಒಂದು ಪುಟ್ಟ ಬದಲಾವಣೆ ಈ ಹಬ್ಬಗಳು. ಪೂಜೆಯ ನೆಪದಲ್ಲಿ ಒಂದಷ್ಟು‌ ಸಿಹಿ. ಸಂಪ್ರದಾಯದ ಹೆಸರಲ್ಲಿ ಎಣ್ಣೆ ಸ್ನಾನ ದೇಹಕ್ಕೂ ಉಲ್ಲಾಸ ಮನಸಿಗೂ ಖುಷಿ. ಸದ್ಯ ಯಾವ ಹಬ್ಬಗಳೂ ಒಂದೇ ಪ್ರದೇಶಕ್ಕೆ ಸೀಮಿತವಾಗಿಲ್ಲ. ದೇಶ ,ಭಾಷೆ , ಪ್ರಾಂತ್ಯ ಮೀರಿ ಆಚರಿಸಲ್ಪಡುತ್ತವೆ. ಇಂದು ಸಂಭ್ರಮಕ್ಕೊಂದು ಕಾರಣ ಹಬ್ಬಗಳು. ಸಂಕ್ರಾಂತಿಯ ವಿಶೇಷ ಎಳ್ಳು, ಬೆಲ್ಲ . ಆರೋಗ್ಯದ ದೃಷ್ಟಿಯಿಂದ ಎಳ್ಳು , ಬೆಲ್ಲ ಬಹಳಷ್ಟು ಒಳ್ಳೆಯದು. ಹಾಗಾಗಿ ಸಂಕ್ರಾಂತಿಯೊಂದು ಕಾರಣ.

ಇನ್ನು ಹೊಸ ಕ್ಯಾಲೆಂಡರ್ ವರ್ಷದ ಮೊದಲ ಸಂಭ್ರಮ .

ಈ ಸಂಕ್ರಾಂತಿ ರೈತರ ಹಬ್ಬವೆಂದೇ ಪ್ರತೀತಿ. ಬೇಸಾಯ ಮುಗಿದು ಬೆಳೆ ಕೈ ಸೇರಿದ ಸಮಯದಲ್ಲಿಯೇ ಸಂಕ್ರಾಂತಿ ಬರುವುದರಿಂದ ಭೂಮಿ ತಾಯಿಗೆ ಕೃತಜ್ಞತೆ ಹೇಳುವ ಸಂಧರ್ಭವೂ ಇದಾಗಿದೆ. ಕೃಷಿ ಕೈಂಕರ್ಯದಲ್ಲಿ ಜೊತೆಯಾದ ಜಾನುವಾರುಗಳನ್ನು ಸ್ನಾನ ಮಾಡಿಸಿ , ಸಿಂಗರಿಸಿ ಪೂಜಿಸುವ ಸಂಪ್ರದಾಯವಿದೆ.

ದೇಶದೆಲ್ಲೆಡೆ ಬೇರೆ ಬೇರೆ ರೀತಿಯಲ್ಲಿ, ವಿವಿಧ ಹೆಸರುಗಳಿಂದ ಆಚರಿಸ್ಪಡುತ್ತವೆ. ಬೇರೆ ಬೇರೆ ಪ್ರದೇಶಗಳಲ್ಲಿ ಹಲವು ರೀತಿಯಲ್ಲಿ ಆಚರಿಸಲ್ಪಡುತ್ತವೆ. ಆಯಾ ಪ್ರಾದೇಶಿಕ ಸಂಪ್ರದಾಯಕ್ಕೆ ಹೆಚ್ಚು ಒತ್ತು ಈ ಹಬ್ಬದಲ್ಲಿ ಕಾಣಬಹುದು. ಆದರೆ ಪ್ರಕೃತಿಯ ಆರಾಧನೆಯೇ ಇಲ್ಲಿ ಎದ್ದು ಕಾಣುವುದು.ಮನೆಯವರು ಊರವರು ಎಲ್ಲರೂ ಸೇರಿ ಒಟ್ಟಾಗಿ ಆಚರಿಸಿ ಸಂಭ್ರಮಿಸುವುದೇ ಹಬ್ಬದ ಘಮ್ಮತ್ತು. ಪೊಂಗಲ್ ಸಂಕ್ರಾಂತಿ ಯ ವಿಶೇಷ ಖಾದ್ಯ. ಹೆಸರುಬೇಳೆ, ಅಕ್ಕಿ, ಬೆಲ್ಲ, ತೆಂಗಿನತುರಿ, ಗೇರುಬೀಜ, ತುಪ್ಪ ಹಾಲು ಬಳಸಿ ಮಾಡುವ ಈ ಖಾದ್ಯ ಬಹಳ ರುಚಿಯಾಗಿರುತ್ತದೆ. ಬನ್ನಿ ಸಂಕ್ರಾಂತಿಯನ್ನು ಪೊಂಗಲ್ ಸವಿದು ಆಚರಿಸೋಣ. ಸಂಕ್ರಾಂತಿ ಎಲ್ಲರಿಗೂ ಒಳ್ಳಯದನ್ನೇ ಮಾಡಲಿ. ಸಂಕ್ರಾಂತಿಯ ಶುಭಾಶಯಗಳು.

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಡಿಕೆ ಮಾರುಕಟ್ಟೆ ಜಿಗಿತ | ಮಂಗಳೂರು ಹೊಸ ಚಾಲಿ ₹500 ದಾಟಿತು – ಏಪ್ರಿಲ್‌ನಲ್ಲಿ ಮತ್ತಷ್ಟು ಏರಿಕೆ ಸೂಚನೆ!
April 3, 2026
11:59 AM
by: ದ ರೂರಲ್ ಮಿರರ್.ಕಾಂ
ರಸ್ತೆ ಬದಿ ಕಸ ಎಸೆದ್ರೆ ಜಾಗ್ರತೆ..! ದಂಡ ಕೊಡ್ಲಿಲ್ಲ ಅಂದ್ರೆ FIR ಫಿಕ್ಸ್..!
April 3, 2026
8:00 AM
by: ದ ರೂರಲ್ ಮಿರರ್.ಕಾಂ
ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror