ಆರೋಗ್ಯ ಫಲಿತಾಂಶಗಳ ವೇದಿಕೆ- 2025 | ಮಲೇರಿಯಾ ಪ್ರಕರಣಗಳು ಶೇ. 80ಕ್ಕಿಂತ ಹೆಚ್ಚು

December 27, 2025
6:49 AM

ದೇಶದಲ್ಲಿ ಮಲೇರಿಯಾ ಪ್ರಕರಣಗಳು ಶೇಕಡ 80 ಕ್ಕಿಂತಲೂ ಹೆಚ್ಚು ಮತ್ತು ಸಾವುಗಳು ಶೇಕಡ 78 ರಷ್ಟು ಕಡಿಮೆಯಾಗುತ್ತಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಹೇಳಿದ್ದಾರೆ.

Advertisement

ದೆಹಲಿಯಲ್ಲಿ ನಡೆದ ಸಾರ್ವಜನಿಕ ಆರೋಗ್ಯ ಫಲಿತಾಂಶಗಳ ವೇದಿಕೆ- 2025 ಕಾರ್ಯಕ್ರಮವನ್ನುದ್ದೇಶಿಸಿ  ಅವರು, ದೇಶದ ಆರೋಗ್ಯ ಕ್ಷೇತ್ರದಲ್ಲಿನ ಮಹತ್ವದ ಸುಧಾರಣೆಗಳ ಕುರಿತು ಮಾಹಿತಿ ನೀಡಿದರು.   ದೇಶ, ಕ್ಷಯರೋಗ ಪ್ರಕರಣಗಳಲ್ಲಿ ಶೇಕಡ 21ರಷ್ಟು ಕುಸಿತವನ್ನು ಕಂಡಿದೆ. ಇದು ಜಾಗತಿಕ ಇಳಿಕೆಯ ದರವಾದ ಶೇಕಡ 12 ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ. 2014ರಲ್ಲಿ ಪ್ರತಿ ಲಕ್ಷ ಜನನಗಳಿಗೆ, 130 ರಷ್ಟಿದ್ದ ಮರಣ ಪ್ರಮಾಣ, ಈ ವರ್ಷ 88 ಕ್ಕೆ ಇಳಿಕೆಯಾಗಿದೆ. ಅಲ್ಲದೇ, ಪ್ರಸ್ತುತ ವರ್ಷದಲ್ಲಿ, ಶಿಶು ಮರಣ ಪ್ರಮಾಣ 27 ಕ್ಕೆ ತಗ್ಗಿದೆ ಎಂದು ತಿಳಿಸಿದ್ದಾರೆ.  ದೇಶದ ಪ್ರತಿ 2 ಸಾವಿರ ಜನಸಂಖ್ಯೆಗೆ ಒಂದು ಆರೋಗ್ಯ ಮಂದಿರವನ್ನು ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈಗಾಗಲೇ 30 ಸಾವಿರಕ್ಕೂ ಹೆಚ್ಚು ಕೇಂದ್ರಗಳು, ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳ ಪ್ರಮಾಣೀಕರಣವನ್ನು ಪಡೆದಿವೆ. ಆಯುಷ್ಮಾನ್ ಭಾರತ್ ಯೋಜನೆಯಿಂದಾಗಿ, ಜನರು  ಭರಿಸುವ ಆರೋಗ್ಯ ವೆಚ್ಚ ಶೇಕಡಾ 69 ರಿಂದ ಶೇಕಡಾ 39 ಕ್ಕೆ ಇಳಿಕೆಯಾಗಿದೆ. ಇದು ಬಡ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ನೀಡಿದೆ ಎಂದರು.

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 19-02-2026 | ಕರಾವಳಿ–ಮಲೆನಾಡಿನಲ್ಲಿ ಫೆ.21 ರಿಂದ ಮಳೆ ಸಾಧ್ಯತೆ ಹೆಚ್ಚಳ
February 19, 2026
12:29 PM
by: ಸಾಯಿಶೇಖರ್ ಕರಿಕಳ
ಬೆಂಗಳೂರು ಕಸ ವಿಲೇವಾರಿ ತಡೆದರೆ ಕಠಿಣ ಕ್ರಮ : ಎಸ್ಮಾ ಕಾಯ್ದೆ ಜಾರಿ ಎಚ್ಚರಿಕೆ
February 19, 2026
7:55 AM
by: ಮಿರರ್‌ ಡೆಸ್ಕ್
ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ – WHOಗೆ ಅಧಿಕೃತ ಮನವಿ ಮಾಡಿದ ಉತ್ತರ ಕನ್ನಡ ಸಂಸದ
February 19, 2026
7:00 AM
by: ದ ರೂರಲ್ ಮಿರರ್.ಕಾಂ
ಕ್ಯಾಂಪ್ಕೊಗೆ ಸಂಸದ ಬ್ರಿಜೇಶ್ ಚೌಟ ಭೇಟಿ, ಅಡಿಕೆ ಸಮಸ್ಯೆಗಳ ಕುರಿತು ಚರ್ಚೆ
February 19, 2026
6:52 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror