ಪ್ರಧಾನಿಗಳ ವಾಹನ ತಡೆ | ಇಮೋಶನಲ್‌ ಪಾಲಿಟಿಕ್ಸ್ ಮಾಡುವುದು ಬೇಡ – ಮಲ್ಲಿಕಾರ್ಜುನ ಖರ್ಗೆ ಹೇಳಿಕೆ |

January 6, 2022
9:56 PM

ಪ್ರಧಾನಿಗಳಿಗೆ ಪಂಜಾಬ್‌ ರಾಜ್ಯದಲ್ಲಿ ಭದ್ರತಾ ವಿಷಯದಲ್ಲಿ ಇಮೋಶನಲ್‌ ಪಾಲಿಟಿಕ್ಸ್ ಮಾಡುವುದು ಬೇಡ. ರಾಜಕೀಯ ಲಾಭಕ್ಕೆ ಇಮೋಷನಲ್ ಪಾಲಿಟಿಕ್ಸ್ ಅಗತ್ಯವಿಲ್ಲ. ಭದ್ರತಾ ವಿಷಯದಲ್ಲಿ ನಿವೃತ್ತಿ ನ್ಯಾಯಮೂರ್ತಿ ನೇತೃತ್ವದಲ್ಲಿ ಈಗಾಗಲೇ ಪ್ರಕರಣ ತನಿಖೆ ನಡೆಸಲು ಪಂಜಾಬ್‌ ಸರ್ಕಾರ ನೀಡಿದೆ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

ಪಂಜಾಬ್‌ ಕಾರ್ಯಕ್ರಮಕ್ಕೆ  ಜನ ಸೇರಿಲ್ಲವೆಂದು ಈಗ ಭದ್ರತಾ ಆರೋಪ ಮಾಡುತ್ತಿದ್ದಾರೆ. ಹವಾಮಾನ ಚೆನ್ನಾಗಿಲ್ಲವೆಂಬುದು ಗೊತ್ತಿದೆ, ಅಧಿಕಾರಿಗಳೇ ಈ ಮಾಹಿತಿ ಒದಗಿಸಿದ್ದಾರೆ. ಹೀಗಿದ್ದರೂ ಏಕೆ ಪ್ರಯಾಣ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ  ಪ್ರಧಾನಿ ಸೆಕ್ಯೂರಿಟಿ ವಿಫಲ ಆಗಿದ್ದರೆ ಕ್ರಮ ಕೈಗೊಳ್ಳಲು ಪಂಜಾಬ್ ಮುಖ್ಯಮಂತ್ರಿಗಳು ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದಾರೆ,  ಮೂರು ದಿನದಲ್ಲಿ ವರದಿ ಸಿಗಲಿದೆ ಎಂದು  ಖರ್ಗೆ ಹೇಳಿದ್ದಾರೆ. ಪ್ರಧಾನಿಗಳು ಬಂದರೆ 10 ಬಾರಿ ಚೆಕ್ ಮಾಡ್ತಾರೆ, ಭದ್ರತಾ ಸಿಬ್ಬಂದಿಗಳು ಚೆಕ್ ಮಾಡ್ತಾರೆ, ಅದೆಲ್ಲಾ ಆದ ಬಳಿಕವೇ ಪ್ರಧಾನಿಗಳಿಗೆ ಬಿಡ್ತಾರೆ ಹಾಗಿದ್ದರೂ ಇಲ್ಲಿ ಸೆಕ್ಯೂರಿಟಿ ಪೇಲ್ಯೂರ್ ಆಗುತ್ತೆ ಅಂದರೆ ಅದಕ್ಕೆ  ಅವರೇ ಹೊಣೆ ಆದರೂ ಪಂಜಾಬ್ ಸಿಎಂ ಮೇಲೆ ಗೂಬೆಕೂರಿಸ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ
ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
July 20, 2026
10:59 PM
by: ದ ರೂರಲ್ ಮಿರರ್.ಕಾಂ
ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್
July 20, 2026
10:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror