ನೀನಾಸಂಗೆ ಆಯ್ಕೆಯಾದ ಮಮತಾ ಕಲ್ಮಕಾರ್‌ಗೆ ರಂಗಮನೆಯಲ್ಲಿ ಬೀಳ್ಕೊಡುಗೆ

July 4, 2022
9:44 AM

ರಾಜ್ಯದ ಅತ್ಯತ್ತಮ ಮತ್ತು ಪ್ರತಿಷ್ಠಿತ ರಂಗ ತರಬೇತಿ ಸಂಸ್ಥೆಯಾದ ನೀನಾಸಂಗೆ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು ಸುಳ್ಯ ತಾಲೂಕಿನ ಕಲ್ಮಕಾರಿನ ಮಮತ ಆಯ್ಕೆಯಾಗಿದ್ದಾರೆ.

Advertisement
Advertisement
Advertisement

ರಾಜ್ಯದ ವಿವಿಧ ಕಡೆಗಳಿಂದ ಸುಮಾರು 125 ರಂಗಾಸಕ್ತರು ಭಾಗವಹಿಸಿದ್ದು, ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಮತಾ ಕಲ್ಮಕಾರು ಆಯ್ಕೆ ಆಗಿರುವುದು ಹೆಮ್ಮೆಯ ವಿಚಾರ.

Advertisement

ಸುಳ್ಯದ ರಂಗಮನೆಯ ವಿದ್ಯಾರ್ಥಿಯಾಗಿರುವ ಮಮತ ಅರೆಭಾಷೆ ಅಕಾಡೆಮಿ ಪ್ರಾಯೋಜಿತ ʼಸಾಹೇಬ್ರು ಬಂದವೇʼ ನಾಟಕದಲ್ಲಿ ಕಾವೇರಿ ಎಂಬ ಮುಖ್ಯಪಾತ್ರದಲ್ಲಿ ನಟಿಸಿ ಜನಮನ ಗೆದ್ದಿದ್ದಳು. ಅದೂ ಅಲ್ಲದೆ ಒಂದಷ್ಟು ಕಿರುಚಿತ್ರದಲ್ಲಿಯೂ ಭಾಗವಹಿಸಿದ್ದಳು.

ಈಗ ನೀನಾಸಂಗೆ ಹೊರಟಿರುವ ಮಮತಾಗೆ ರಂಗಮನೆಯಲ್ಲಿ ಆತ್ಮೀಯವಾಗಿ ಹರಸಿ ಬೀಳ್ಕೊಡಲಾಯಿತು.

Advertisement

ರಂಗಮನೆಯ ನಿರ್ದೇಶಕ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರಾದ ಜೀವನ್ ರಾಂ ಸುಳ್ಯ ಅವರು ರಂಗಮನೆಯಲ್ಲಿ ಮಮತ ಕಳೆದ ದಿನಗಳನ್ನು ನೆನೆದು ರಂಗಮನೆಯ ಪರವಾಗಿ ನೆನಪಿನ ಕಾಣಿಕೆ ನೀಡಿ ಹರಸಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಕಜೆಗದ್ದೆ ಅವರು ಮಾತನಾಡಿ ಅರೆಭಾಷೆ ಅಕಾಡೆಮಿ ವತಿಯಿಂದ ನಾಟಕ‌ ಹಮ್ಮಿಕೊಂಡ ಉದ್ದೇಶ ಮತ್ತು ಅದರಿಂದ ಬಂದ ಪ್ರತಿಫಲವೇ ಇಂದು ಮಮತಳ ಆಯ್ಕೆ‌ ಎಂದು ಸಂತಸ ವ್ಯಕ್ತಪಡಿಸಿದರು. ರವೀಶ್ ಪಡ್ಡಂಬೈಲು ಮತ್ತು ಶಿಕ್ಷಕಿ ಮಮತಾ ಪಡ್ಡಂಬೈಲು ಶುಭ ಹಾರೈಸಿದರು.

ಇದೇ ಸಂದರ್ಭ ಸಾಹೇಬ್ರು ಬಂದವೇ ನಾಟಕ ತಂಡದ ವಿನೋದ್ ಮೂಡಗದ್ದೆ, ಹಾರಂಬಿ ಯತೀನ್ ವೆಂಕಪ್ಪ, ನಿತ್ಯಾನಂದ ಮಲೆಯಾಳ, ಸುಶ್ಮಿತಾ ಮೋಹನ್ ,ಯೋಗಿತಾ ಬಂಗಾರಕೋಡಿ, ಅಮೃತ್ ಕುಕ್ಕೇಟಿ, ಬಂಗಾರಕೋಡಿ ಶಿವಗಣೇಶ್ ಮತ್ತು ಬಂಗಾರಕೋಡಿ ಚೇತಸ್ ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 24.11.2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ದೂರವಾದ ಮಳೆಯ ಸಾಧ್ಯತೆ
November 24, 2024
12:05 PM
by: ಸಾಯಿಶೇಖರ್ ಕರಿಕಳ
ಅಡಿಕೆಯ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಹೇಗೆ ? | ವಿಜ್ಞಾನಿ ಡಾ.ಭವಿಷ್ಯ ಅವರಿಂದ ಮಾಹಿತಿ |
November 24, 2024
7:50 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಎಲೆಚುಕ್ಕಿರೋಗ ನಿರ್ವಹಣಾ ವಿಧಾನಗಳು ಹೇಗೆ..?
November 24, 2024
7:09 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 23-11-2024 | ರಾಜ್ಯದಲ್ಲಿ ಒಣಹವೆ ಮುಂದುವರಿಕೆ | ನ.28 ರಿಂದ ಕೆಲವು ಕಡೆ ಮಳೆ ಸಾಧ್ಯತೆ |
November 23, 2024
12:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror