ಮನುಷ್ಯ ಮತ್ತು ಅವನ ಅಹಂ | ಜೀವನದಲ್ಲಿ ಮನುಜ ತನ್ನನ್ನು ತಾನು ಸುಟ್ಟುಕೊಳ್ಳುವ ಪರಿ |

September 23, 2023
12:05 PM
ಸ್ವಾರ್ಥ, ಅಹಂ ಬಿಟ್ಟು ಮನುಜ ಪಥದತ್ತ ಹೆಜ್ಜೆ ಇಡಬೇಕು ಎನ್ನುವ ಕನಕ ದಾಸರ ಸಂದೇಶವನ್ನು ನಾವೆಲ್ಲ ಅಳವಡಿಸಿಕೊಂಡರೆ ಜೀವನದಲ್ಲಿ ಏಳ್ಗೆ, ಯಶಸ್ಸು, ಶಾಂತಿ ಮತ್ತು ನೆಮ್ಮದಿಯನ್ನು ಕಾಣಲು ಸಾಧ್ಯ,

ಸೂರ್ಯ ಇಡೀ ಪ್ರಪಂಚಕ್ಕೆ ಬೆಳಕು ಕೊಡುತ್ತಾನೆ. ಚಂದ್ರ ತಂಪಾದ ಬೆಳದಿಂಗಳು ಕೊಡುತ್ತಾನೆ. ಸಸ್ಯಗಳುಇಡೀ ಜೀವಸಂಕುಲಕ್ಕೆ ಪ್ರಾಣವಾಯು ಮತ್ತು ಆಹಾರ ಕೊಡುತ್ತವೆ. ಆದರೆ ಇವು ಯಾವುವೂ ಸಹ ನಾವು ಪರೋಪಕಾರ ಮಾಡುತ್ತಿದ್ದೇವೆ ಅಂಥ ಟಾಂ ಟಾಂ ಹೊಡೆಯುವುದಿಲ್ಲ. ಆದರೆ ಮನುಜ ಮನುಷ್ಯನಿಗೆ ಅಹಂ ಅನ್ನೋದು ಬಂದ್ರೆ ಅವನಿಗೆ ಶತ್ರುಗಳು ಬೇಕಾಗಿಲ್ಲ. ಅವನಿಗೆ ಅವನೇ ಶತ್ರು.

Advertisement
Advertisement

ಹೂಗಳಲ್ಲಿ ಅದ್ಬುತವಾದ ಪರಿಮಳವಿದೆ. ಆನೆಗೆ ಅಪಾರವಾದ ಶಕ್ತಿ ಇದೆ. ನವಿಲಿಗೆ ಮನೋಹರವಾದ ಗರಿಗಳಿವೆ. ಕೋಗಿಲೆಗೆ ಸುಂದರವಾದ ಕಂಠವಿದೆ. ಜಿಂಕೆ ಮೊಲದಂತಹ ಪ್ರಾಣಿಗಳು ನೋಡಲು ಸುಂದರವಾಗಿವೆ. ಜೇನು ಹುಳು ರುಚಿಕರವಾದ ಜೇನುತುಪ್ಪ ತಯಾರಿಸುತ್ತದೆ. ರೇಷ್ಮೆ ಹುಳು ಬೆಲೆ ಬಾಳುವ ರೇಷ್ಮೆ ಎಳೆ ತಯಾರಿಸುತ್ತವೆ. ಪರ್ಲ್ ಓಯ್‌ಸ್ಟರ್ ಎಂಬ ಕಪ್ಪೆಚಿಪ್ಪಿನ ಪ್ರಾಣಿ ಸುಂದರವಾದ ಮುತ್ತುಗಳನ್ನು ತಯಾರಿಸುತ್ತದೆ. ಆದರೆ ಇವುಗಳಲ್ಲಿ ಯಾವುವೂ ಸಹ ತಾವೇ ಗ್ರೇಟ್ ಅಂಥ ಬೀಗುವುದಿಲ್ಲ ಹಾಗೆ ಭಾವಿಸುವುದೂ ಇಲ್ಲ.

ಆದರೆ ಮನುಷ್ಯ ಅನ್ನೋ ಪ್ರಾಣಿಯಲ್ಲಿ ತಾನು ಗ್ರೇಟ್ ಎನ್ನುವ ಅಹಂ ಇರುತ್ತದೆ. ಮಾತಿಗೆ ಮುಂಚೆ ನಾನು ನಾನು ಅಂಥ ಬಡಬಡಿಸುತ್ತಾನೆ. ನಾನೊಬ್ಬ ಅದ್ಭುತ ಡಾಕ್ಟರ್, ಇಂಜಿನಿಯರ್, ಲಾಯರ್, ಲೇಖಕ, ಕವಿ, ನಟ, ಟೀಚರ್, ಪತ್ರಕರ್ತ, ರಾಜಕಾರಣಿ, ಸಮಾಜ ಸೇವಕ ಹೀಗೆ ಜಂಭ ಕೊಚ್ಚಿಕೊಳ್ಳುತ್ತಿರುತ್ತಾನೆ. ನಾನು ಎಷ್ಟು ಫೇಮಸ್ ಗೊತ್ತಾ? ನಾನು ಎಷ್ಟು ಬುದ್ದಿವಂತ ಗೊತ್ತಾ? ನಾನೆಷ್ಟು ಹ್ಯಾಂಡ್‌ಸಮ್ ಗೊತ್ತಾ? ನನ್ನ ಬಗ್ಗೆ ಬೇರೆಯವರನ್ನು ಕೇಳು, ನಾನು ಎಷ್ಟು ಗ್ರೇಟ್ ಅಂಥ ಹೇಳ್ತಾರೆ, ನನ್ನನ್ನು ಏನು ಅಂಥ ತಿಳಿದುಕೊಂಡಿದ್ದೀಯ? ನನ್ನ ಬಗ್ಗೆ ನಿನಗೆ ಸರಿಯಾಗಿ ಗೊತ್ತಿಲ್ಲ. ನನ್ನ ಸುದ್ದಿಗೆ ಬಂದರೆ ಚೆನ್ನಾಗಿರಲ್ಲ. ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸುತ್ತೀನಿ.

ಹೀಗೆ ಬೇರೆಯವರ ಎದುರು ಬಡಬಡಿಸುತ್ತ, ಭ್ರಮೆಗಳಲ್ಲಿ, ಸ್ವಕುಚ ಮರ್ಧನದಲ್ಲಿ ಆನಂದ ಅನುಭವಿಸುವ ಏಕೈಕ ಪ್ರಾಣಿ ಮನುಷ್ಯ. ತನ್ನನ್ನು ಎಲ್ಲರೂ ಹೊಗಳಲಿ, ಗ್ರೇಟ್‌ ಅನ್ನಲಿ ಅಂಥ ನಿರೀಕ್ಷೆ ಮಾಡುತ್ತಾನೆ. ಎಂತಹ ಅತಿರಥ ಮಹಾರಥರಾಗಲಿ ಒಂದಲ್ಲ ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುವುದು ನಿಶ್ಚಿತ. ಬದುಕಿದ್ದಾಗ ಹೀಗೆಲ್ಲಾ ಹಾರಾಡುವ ಮನುಷ್ಯನಿಗೆ, ತಾನು ಸತ್ತ ಕೆಲವು ದಿನಗಳ ನಂತರ ಸಮಾಜ ಇರಲಿ, ತನ್ನ ಮನೆಯವರೂ ಕೂಡ ತನ್ನನ್ನು ನೆನೆಸಿಕೊಳ್ಳುವುದಿಲ್ಲ ಎಂಬ ಸತ್ಯ ತಿಳಿದಿರುವುದಿಲ್ಲ.

ರಮೇಶ್ ಹೆಚ್. ಟಿ. ( ವಾಟ್ಸ್‌ ಆಪ್‌ ಬರಹ)

Advertisement
Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಾರಣಾಸಿ ಎಂಬ ದ್ವಂದ್ವಗಳ ನಗರ
May 16, 2025
1:02 PM
by: ರಮೇಶ್‌ ದೇಲಂಪಾಡಿ
ಪುಟ್ಟ ಚಿಟ್ಟೆ | ಭಾವ ತಟ್ಟಿದ ದಿಟ್ಟೆ
May 16, 2025
12:40 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಹಾಳೆಯ ಸಂಬಂಧಿತ ಉತ್ಪನ್ನಗಳ ರಫ್ತು ನಿಷೇಧ | ಅಡಿಕೆ ಉದ್ಯಮದ ಮೇಲೆ ಆಗಬಹುದಾದ ಪರಿಣಾಮಗಳೇನು..?
May 15, 2025
10:06 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಅಡಿಕೆ ಹಾಳೆ ತಟ್ಟೆ ಅಮೆರಿಕದಲ್ಲಿ ಬ್ಯಾನ್ …
May 14, 2025
9:43 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror

Join Our Group